Connect with us

Hi, what are you looking for?

ಪ್ರಮುಖ ಸುದ್ದಿ

ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ನಿಧನ

ಚೆನ್ನೈ: ತಮಿಳಿನ ಪ್ರಖ್ಯಾತ ಹಾಸ್ಯ ನಟ ವಿವೇಕ್(59) ಇಂದು(ಶನಿವಾರ) ನಿಧನರಾಗಿದ್ದಾರೆ. ನಿನ್ನೆಯಷ್ಟೇ ಹೃದಯಾಘಾತಕ್ಕೆ ತುತ್ತಾಗಿದ್ದ ವಿವೇಕ್, ಚೆನ್ನೈ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಇವರ ನಟನೆಗೆ ಪದ್ಮಶ್ರೀ ಪ್ರಶಸ್ತಿ ಕೂಎ ಸಂದಿದೆ.

ಒಂದು ಕಾಲದಲ್ಲಿ ಗೌಂಡಮಣಿ ಸೆಂದಿಲ್ ಎಂದರೆ ಕಾಮಿಡಿ ಎಂದಿತ್ತು. ಅವರಾದ ಬಳಿಕ ತಮಿಳು ಸಿನಿಮಾದ ಕಾಮಿಡಿ ಅಂದರೆ ನೆನಪಾಗುತ್ತಿದುದು ವಿವೇಕ್ ಮತ್ತು ವಡಿವೇಲು.
ತನ್ನ ಸ್ಲಾಪ್‌ಸ್ಟಿಕ್ ಕಾಮಿಡಿಗಳಿಂದ ವಡಿವೇಲು ಗೆದ್ದರೆ
ರಜನಿ ಮ್ಯಾನರಿಸಂ, ಜನರ ಎಜುಕೇಟ್ ಮಾಡುವ ಬುದ್ಧಿವಂತಿಕೆಯ ಹಾಸ್ಯದ ಮೂಲಕ ಗೆದ್ದವರು ವಿವೇಕ್.

2016 ರಲ್ಲಿ ಮಗನ ಕಳಕೊಂಡ ಮೇಲೆ ವಿವೇಕ್ ಅಂತರ್ಮುಖಿಯಾಗಿದ್ದರು. ಸಮಾಜ ಸೇವೆಯ ಕಾರ್ಯಗಳಲ್ಲಿ ಜಾಸ್ತಿ ತೊಡಗಿಸಿಕೊಂಡಿದ್ದರು. ಒಂದು ಕೋಟಿ ಗಿಡಗಳ ನೆಟ್ಟು ಬೆಳೆಸುವ ಕಾರ್ಯಕ್ರಮಗಳನ್ನು ‌ಹಮ್ಮಿಕೊಂಡು ಸರಿಸುಮಾರು ಮೂವತ್ತು ಲಕ್ಷಗಳಷ್ಟು ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ನಡೆಸಿದ್ದರು. ಗ್ಲೋಬಲ್ ವಾರ್ಮಿಂಗ್ ಇತ್ಯಾದಿ ಕುರಿತು ಗಂಭೀರ ಕಾಳಜಿ ಹೊಂದಿದ್ದರು. ಅವರಿಗೆ ಪದ್ಮಶ್ರೀ ಕೂಡ ಒಲಿದು ಬಂದಿತ್ತು.ಸ್ವಂತ ಬುದ್ಧಿವಂತಿಕೆ ಇದ್ದ ಕೆಲವೇ ಕೆಲವು ನಟರಲ್ಲಿ ಒಬ್ಬರಾಗಿದ್ದರು.ಎಲ್ಲದಕ್ಕಿಂತ ಹೆಚ್ಚಾಗಿ ಸಹೃದಯರಾಗಿದ್ದರು.

ಅನ್ನಿಯನ್, ಶಿವಾಜಿಯಲ್ಲಿ ಎಲ್ಲ ಹೀರೋಗಳನ್ನೇ ಸೈಡಿಗಿಡುವಂತಹ ಕಾಮಿಡಿ. ಇತ್ತೀಚೆಗೆ ಅವರ ಗಂಭೀರ ಪಾತ್ರಗಳ ವೆಳ್ಳೈ ಪೂಕ್ಕಳ್, ಬೃಂದಾವನಂ ಕೂಡ ಎಲ್ಲರಿಗೂ ಇಷ್ಟವಾಗಿತ್ತು.‌

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ನಗರದ ಐಯುಡಿಪಿ ಬಡಾವಣೆ ನಿವಾಸಿ ಶಿಕ್ಷಕ ವೈ. ರವೀಂದ್ರನಾಥ್(60) ಅನಾರೋಗ್ಯದಿಂದ ನಿಧನರಾಗಿದ್ದಾರೆ.    ಮದ್ದೇರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮತ್ತು ಐಯುಡಿಪಿ ಬಡಾವಣೆಯ ಶ್ರೀ ಸ್ವಾಮಿ...

ಪ್ರಮುಖ ಸುದ್ದಿ

ಸಾಣೇಹಳ್ಳಿ‌ : ಮನೋಜ್ಞ ನಟ ಸಂಚಾರಿ ವಿಜಯ್ ಅವರ ಅಕಾಲಿಕ ನಿಧನಕ್ಕೆ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. “ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ನೋಡು” ಎನ್ನುವ ಹಾಗೆ ಸಂಚಾರಿ ವಿಜಯ್...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ,(ಜೂ.-02) : ನಗರದ ಎಸ್.ಜೆ.ಎಂ. ವಿದ್ಯಾಪೀಠದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಎಂ.ಜಿ.ದೊರೆಸ್ವಾಮಿ (53ವರ್ಷ) ಕೊರೋನಾ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ ಮತ್ತು ಅಪಾರ...

ಪ್ರಮುಖ ಸುದ್ದಿ

ಚೆನ್ನೈ: ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷವನ್ನ ಸೋಲಿಸಿ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದಿದೆ. ಅದು ಇತಿಹಾಸದಂತೆ ಸಾಕಷ್ಟು ವರ್ಷಗಳ ಬಳಿಕ. ಈ ಮಧ್ಯೆ ವಿಧಾನಸಭಾ ಚುನಾವಣೆ ಹತ್ತಿರವಿರುವಾಗ್ಲೇ ಜಯಲಲಿತಾ...

ಪ್ರಮುಖ ಸುದ್ದಿ

ಚೆನ್ನೈ: ಪ್ರಪಂಚದಲ್ಲಿ ವಿಚಿತ್ರವಾದ ಜನರಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಅದು ಆಗಾಗ ಪ್ರೂವ್ ಕೂಡ ಆಗ್ತ ಇರುತ್ತೆ. ಇಲ್ಲೊಬ್ಬ ವ್ಯಕ್ತಿ ಕೊರೊನಾಗೆ ಮದ್ದು ಅಂತ ಜೀವಂತ ಹಾವನ್ನೇ ಕಚ್ಚಿ ತಿಂದಿದ್ದಾನೆ. ಈ...

ಪ್ರಮುಖ ಸುದ್ದಿ

ಬೆಂಗಳೂರು: 103 ವರ್ಷದ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಇಂದು‌ ನಿಧನರಾಗಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಕೊರೊನಾ ವೈರಸ್ ನಿಂದ ಬಳಲಿದ್ದರು. ಆದ್ರೆ ಕೊರೊನಾ ಗೆದ್ದು ತಮ್ಮ‌ಜಯನಗರ ನಿವಾಸಕ್ಕೆ...

ಪ್ರಮುಖ ಸುದ್ದಿ

ಚೆನ್ನೈ : ಕೊರೊನಾ ರೂಲ್ಸ್ ಇದೆ ಎಂಬ ಕಾರಣಕ್ಕಾಗಿ ಜೋಡಿಯೊಂದು ಆಕಾಶದಲ್ಲಿ ಮದುವೆಯಾದ ಪ್ರಜರಣಕ್ಕೆ ಸಂಬಂಧಿಸಿದಂತೆ, ಇದೀಗ ವಿಮಾನದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಕೊರೊನಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ವಿಮಾನ ಹಾರಾಟದ ವೇಳೆ...

ಪ್ರಮುಖ ಸುದ್ದಿ

ಚೆನ್ನೈ: ಕೊರೊನಾ ಎರಡನೇ‌ ಅಲೆ ಈಗ ಎಲ್ಲೆಲ್ಲೂ ಹೆಚ್ಚಾಗಿದೆ. ದೇಶದೆಲ್ಲೆಡೆ ಆತಂಕ ಸೃಷ್ಟಿಸಿದೆ. ಈ ಮಧ್ಯೆ ಜನ ಹೆಚ್ಚಾಗಿ ಸೇರುವ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ. ಮದುವೆ ಸೇರಿದಂತೆ ಶುಭ ಸಮಾರಂಭಕ್ಕೆ ಇಂತಿಷ್ಟು ಮಂದಿ...

ಪ್ರಮುಖ ಸುದ್ದಿ

ಕಾಂಗ್ರೆಸ್ ನಾಯಕ, ಸಂಸದ ರಾಜೀವ್ ಸತವ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕೊರೊನಾದಿಂದ ಗುಣಮುಖರಾಗಿದ್ರು. ಆದ್ರೂ ಕೂಡ ಇಂದು ಸಾವನ್ನಪ್ಪಿದ್ದಾರೆ. ಕೇವಲ 46 ವರ್ಷದ ರಾಜೀವ್ ಸತವ್ ಗೆ...

error: Content is protected !!