in ,

ದಾದಾನನ್ನ ನೆನೆದ ಫ್ಯಾನ್ಸ್..ಉಪ್ಪಿಗೆ ಸ್ಪೆಷಲ್ ಡೇ..ಶೃತಿಗೆ ಸಿಕ್ತು ಶುಭಾಶಯಗಳ ಮಹಾಪೂರ

suddione whatsapp group join

ಬೆಂಗಳೂರು: ಇಂದು ಸ್ಯಾಂಡಲ್ ವುಡ್ನಲ್ಲಿ ದಿಗ್ಗಜರ ಹುಟ್ಟುಹಬ್ಬ. ಡಾ.ವಿಷ್ಣುವರ್ಧನ್ ಅವರಿಗೆ 71ನೇ ವರ್ಷ. ಇಂದು ಅವರಿದ್ದಿದ್ರೆ 71 ರ ಸಂಭ್ರಮವನ್ನ ಅನುಭವಿಸಬಹುದಿತ್ತು. ಆದ್ರೆ ಅವರಿಂದು ನಮ್ ಜೊತೆಯಿಲ್ಲ. ಆದ್ರೆ ಅಭಿಮಾನಗಳ ಆರಾಧ್ಯ ಧೈವ. ಹೀಗಾಗಿ ಅಭಿಮಾನಿಗಳೆಲ್ಲಾ ಸೇರಿ ವಿಷ್ಣು ಸಮಾಧಿ ಬಳಿ ಸೇರಿ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ರಕ್ತ ದಾನ ಶಿಬಿರ ಆಯೋಜನೆ ಮಾಡಿದ್ದಾರೆ.

ಇನ್ನು ರಿಯಲ್ ಸ್ಟಾರ್ ಉಪೇಂದ್ರಗೆ ಹುಟ್ಟುಹಬ್ಬ. 53 ನೇ ವಸಂತಕ್ಕೆ ಕಾಲಿಟ್ಟಿರುವ ಉಪ್ಪಿ, ಕುಟುಂಬಸ್ಥರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಉಪ್ಪಿ ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಅನೌನ್ಸ್ ಆಗಿದೆ. ಹಾಗೇ ಕಬ್ಜ ಸಿನಿಮಾದಿಂದ ಸ್ಪೆಷಲ್ ಗಿಫ್ಟ್ ನೀಡಲಾಗಿದೆ.

ಇನ್ನು ಹಿರಿಯ ನಟಿ ಶೃತಿಗೂ ಹುಟ್ಟುಹಬ್ಬದ ಸಂಭ್ರಮ. ಶೃತಿ ಅವರ ಗೆಳತಿಯರಾದ ಮಾಳವಿಕ ಅವಿನಾಶ್, ಸುಧಾರಾಣಿ ಹುಟ್ಟುಹಬ್ಬಕ್ಕೂ ಮುನ್ನವೇ ಉಡುಗೊರೆಯನ್ನ ನೀಡಿದ್ದಾರೆ. ಕುಟುಂಬಸ್ಥರ ಜೊತೆ ಸರಳವಾಗಿ ಶೃತಿ ಕೂಡ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.

ಸ್ಯಾಂಡಲ್ ವುಡ್ ಸ್ಟಾರ್ಸ್, ಅಭಿಮಾನಿಗಳು ಸೇರಿದಂತೆ ಎಲ್ಲರು ಮೂವರು ದಿಗ್ಗಜರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಸಿಲಿಕಾನ್ ಸಿಟಿ ಒಂದರಲ್ಲೇ ಬಾಕಿ ಉಳಿದಿವೆ 30 ಸಾವಿರಕ್ಕೂ ಅಧಿಕ ಕೇಸ್ ಗಳು..!

ಹಲವೆಡೆ ಹಿಂದೂ ದೇವಾಲಯಗಳನ್ನು ಧ್ವಂಸ ; ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರ ಖಂಡನೆ