in ,

ಅಭಿಮಾನಿಗಳ ಆಸೆ ನುಚ್ಚು ನೂರು : ಕೊಹ್ಲಿ ನಿರ್ಧಾರಕ್ಕೆ ಫ್ಯಾನ್ಸ್ ಬೇಸರ..!

suddione whatsapp group join

ವಿರಾಟ್ ಕೊಹ್ಲಿ ಅಂದ್ರೆ ಅದೇನೋ ಕ್ರೇಜು ಅದೇನೋ ಜೋಶು..ಅವ್ರ ಕ್ರಿಕೆಟ್ ನೋಡೋಕೆ ಅಂತಾನೆ ಸಾಕಷ್ಟು ಜನ ಕಾಯ್ತಾ ಇರ್ತಾರೆ. ಅವರಿಗೆ ಆದ ಅಭಿಮಾನಿ ಬಳಗ ಸಿಕ್ಕಾಪಟ್ಟೆ ಇದ್ದಾರೆ. ಅಷ್ಟೇ ಅಲ್ಲ ಅವ್ರ ಕ್ಯಾಪ್ಟೆನ್ಸಿಯನ್ನ ಹೊಗಳಿ ಕೊಂಡಾಡುವವರೇ ಹೆಚ್ಚು. ಆದ್ರೆ ಇದ್ದಕ್ಕಿದ್ದ ಹಾಗೇ ಹೀಗೆ ಕ್ಯಾಪ್ಟೆನ್ಸಿಗೇನೆ ವಿದಾಯ ಹೇಳಿದ್ರೆ ಅಭಿಮಾನಿಗಳು ಏನಾಗಬೇಡ..? ಏನಂದುಕೊಳ್ಳಬೇಡ..?

ಹೌದು, ವಿರಾಟ್ ಕೊಹ್ಲಿಯಿಂದ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಟೀ ಇಂಡಿಯಾ ಟಿ20 ನಾಯಕತ್ವ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನೋಡಿದ ಸಾಕಷ್ಟು ಫ್ಯಾನ್ಸ್ ಬೇಸರ ಹೊರ ಹಾಕಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ಈ ಸಂಬಂಧ ಅದಾಗಲೇ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜೊತೆಗೂ ಚರ್ಚಿಸಿದ್ದು, ಕೋಚ್ ರವಿ ಶಾಸ್ತ್ರಿ ಹಾಗೂ ರೋಹಿತ್ ಶರ್ಮಾ ಜೊತೆಗೂ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಕೊಹ್ಲಿ ಅವರ ಈ ನಡೆಗೆ ಅಭಿಮಾನಿಗಳಿಗೆ ಆಘಾತ ಉಂಟಾಗಿದೆ. ಟ್ವೀಟ್ ಮಾಡುವ ಮೂಲಕ ತಮ್ಮ ಬೇಸರ ಹೊರ ಹಾಕಿದ್ದಾರೆ. ಇನ್ನು ಕೆಲವೊಂದಿಷ್ಟು ಸ್ಟಾರ್ ಕ್ರಿಕೆಟಿಗರು ನಿರ್ಧಾರವನ್ನ ಗೌರವಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

1108 ಹೊಸ ಸೋಂಕಿತರು..809 ಮಂದಿ ಡಿಸ್ಚಾರ್ಜ್..!

ಒರಿಸ್ಸಾದ ಸಮುದ್ರ ತೀರದಲ್ಲಿ ಅರಳಿದ ಡಾ.ವಿಷ್ಣು ಮರಳು ಶಿಲ್ಪ!