ನವದೆಹಲಿ : ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 32 ನೇ ವಸಂತಕ್ಕೆ ಕಾಲಿಟ್ಟಿರುವ ವಿರಾಟ್ ಕೊಹ್ಲಿ, ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಐಸಿಸಿ ತನ್ನ ಟ್ವಿಟ್ಟರ್ ನಲ್ಲಿ ಕವರ್ ಫೋಟೋವನ್ನು ಬದಲಾಯಿಸಿಕೊಂಡಿದೆ. ಕೊಹ್ಲಿಗೆ ಶುಭಾಶಯ ಕೋರಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಆರ್ ಸಿ ಬಿ ಕೂಡ ಭಾವನಾತ್ಮಕವಾಗಿ ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.
To the man who’s given blood, sweat and tears to the Red and Gold.
To our Leader and Legend, Here’s wishing KING KOHLI a very Happy Birthday!! 🤩🤩
Have a great day, Skip! #PlayBold #WeAreChallengers #HappyBirthdayViratKohli #HappyBirthdayKingKohli pic.twitter.com/bnPUi7goot
— Royal Challengers Bangalore (@RCBTweets) November 4, 2020
ಇಂದಿನ ಯುವ ಜನರಿಗೆ ವಿರಾಟ್ ಕೊಹ್ಲಿ ಸ್ಪೂರ್ತಿ ಎನ್ನಬಹುದು. ಕೊಹ್ಲಿಯಂತೆ ಆಟಗಾರನಾಗಬೇಕು ಎಂಬ ಆಸೆಯೊಂದಿಗೆ ಕೋಟ್ಯಾಂತರ ಜನರು ಕ್ರಿಕೆಟ್ ಆಡುತ್ತಿದ್ದಾರೆ. ಆಟಗಾರನಾಗಿಲ್ಲ ಅಂದರೂ ಕೊಹ್ಲಿ ಆಟವನ್ನು ನೋಡಿ ಸಂತಸಗೊಂಡಿರುವ ಅನೇಕ ಕ್ರಿಕೆಟ್ ಪ್ರೇಮಿಗಳಿದ್ದಾರೆ. ಸುದೀಪ ಮಾತ್ರವಲ್ಲದೇ ನಿರ್ದೇಶಕ ಸುನಿ ಸಹ ಕಿಂಗ್ ಕೊಹ್ಲಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.
ಅದ್ಭುತ ಯಶಸ್ಸು ಮತ್ತು ಗುರಿಗಳನ್ನು ಸಾಧಿಸುವಂತಾಗಲಿದೆ. ನೀವು ಅನೇಕ ಯುವ ಪ್ರತಿಭೆಗಳಿಗೆ ಸ್ಫೂರ್ತಿ. ಬಾಕಿ ಉಳಿದಿರುವ ಐಪಿಎಲ್ ಪಂದ್ಯಗಳಿಗಾಗಿ ನಿಮಗೆ ಆಲ್ ದಿ ಬೆಸ್ಟ್. ಹುಟ್ಟುಹಬ್ಬದ ಶುಭಾಶಯಗಳು ಎಂದು ನಟ ಸುದೀಪ್ ಟ್ವೀಟ್ ಮಾಡಿದ್ದಾರೆ.
