ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 17 : ಎಂ ಸ್ಯಾಂಡ್ ಬಳಸಿ ವಿಶ್ವದಲ್ಲಿಯೇ ಅತಿ ದೊಡ್ಡದಾದ ಆಂಜನೇಯಸ್ವಾಮಿಯ ರೇಖಾಚಿತ್ರ ಬಿಡಿಸಿರುವುದು ನೋಬೆಲ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್‍ಗೆ ಸೇರ್ಪಡೆಯಾಗಿದ್ದು, ಮೆಡಲ್ ಹಾಗೂ ಸರ್ಟಿಫಿಕೆಟ್ ಸಿಕ್ಕಿದೆ ಎಂದು ಸಾಯಿಕ್ಯಾಡ್ ಕಂಪನಿಯ ಮಂಜುನಾಥರೆಡ್ಡಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತುರುವನೂರು ಗ್ರಾಮದಲ್ಲಿ ಸಂಘಟಿ ಹನುಮಂತಪ್ಪನವರಿಗೆ ಸೇರಿದ ಐದು ಎಕರೆ ಜಮೀನಿನಲ್ಲಿ ಒಂದು ವಾರಗಳ ಕಾಲ ಶ್ರಮಪಟ್ಟು ಆಂಜನೇಯಸ್ವಾಮಿ ರೇಖಾಚಿತ್ರವನ್ನು ಬಿಡಿಸಿದ್ದೇವೆ. ಇದಕ್ಕೆ ಜನಾರ್ಧನ್ ಹಾಗೂ ಮೋಹನ್ ಇವರುಗಳು ನನ್ನ ಜೊತೆ ಕೈಜೋಡಿಸಿದರು. ಇಷ್ಟು ದೊಡ್ಡದಾದ ರೇಖಾಚಿತ್ರವನ್ನು ಇದುವರೆವಿಗೂ ಯಾರೂ ಬಿಡಿಸಿರಲಿಲ್ಲ. ಮೊದಲು ತರಕಾರಿಯಿಂದ ಆಂಜನೇಯಸ್ವಾಮಿಯ ರೇಖಾಚಿತ್ರ ಬಿಡಿಸಬೇಕೆಂದುಕೊಂಡಿದ್ದೆವು. ಅಷ್ಟೊಂದು ಪ್ರಮಾಣದಲ್ಲಿ ತರಕಾರಿಯನ್ನು ಹೊಂದಿಸುವುದು ಕಷ್ಟವಾಗುತ್ತದೆನ್ನುವ ಕಾರಣಕ್ಕೆ ಎಂ ಸ್ಯಾಂಡ್‍ನಿಂದ ಸಿದ್ದಪಡಿಸಿರುವ ರೇಖಾಚಿತ್ರವನ್ನು ಸಹಸ್ರಾರು ಭಕ್ತರು ವೀಕ್ಷಿಸಿ ಇಷ್ಟಪಟ್ಟಿದ್ದಾರೆಂದು ಮಂಜುನಾಥರೆಡ್ಡಿ ಹರ್ಷ ವ್ಯಕ್ತಪಡಿಸಿದರು.
ದೇವರ ಸೇವೆ ಅಂದುಕೊಂಡು ಬಿಡಿಸಿರುವ ಇಷ್ಟೊಂದು ದೊಡ್ಡ ಗಾತ್ರದ ಆಂಜನೇಯಸ್ವಾಮಿ ರೇಖಾಚಿತ್ರಕ್ಕೆ ನೋಬಲ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್ ದೊರಕಿರುವುದು ನಮಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ ಎಂದು ಸಂಭ್ರಮಿಸಿದರು.
ಜನಾರ್ಧನ್ ಹಾಗೂ ಮೋಹನ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿದ್ದರು.
ಸುದ್ದಿಒನ್, ಹಿರಿಯೂರು, ಮಾರ್ಚ್. 19 : ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಬೆಂಬಲಿಗರಿಬ್ಬರು ಸೋಮವಾರ ರಾತ್ರಿ ಟೆಂಡರ್…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 19 : ಬ್ಯಾಂಕ್ ಕಾಲೋನಿ ನಿವಾಸಿ ಜಿ.ಪಿ.ಉಮೇಶ್(63) ಬುಧವಾರ ಬೆಳಿಗ್ಗೆ 11-30 ಕ್ಕೆ ಹೃದಯಾಘಾತದಿಂದ ನಿಧನರಾದರು.…
ಚಿತ್ರದುರ್ಗ. ಮಾ. 19: ಸಾರ್ವಜನಿಕರೊಂದಿಗೆ ನೇರವಾಗಿ ವ್ಯವಹರಿಸುವ ಇಲಾಖೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅತಿ ಮುಖ್ಯವಾದದು.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…
ಸುದ್ದಿಒನ್, ಹರಿಹರ, ಮಾರ್ಚ್. 19 : ಪವಿತ್ರ ರಂಜಾನ್ ತಿಂಗಳು ದಾನ, ಪರೋಪಕಾರಿ ಸೇವೆ ಮತ್ತು ಮಾನವೀಯತೆಯ ಸಮಯ. ಈ…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 19 : ಒಂಬತ್ತು ತಿಂಗಳು ಕಾಲ ಬಾಹ್ಯಾಕಾಶದಲ್ಲಿದ್ದು, ಕ್ಯಾಪ್ಸೂಲ್ ಮೂಲಕ ಭೂಮಿಯನ್ನು ತಲುಪಿದ ಗಗನಯಾನಿಗಳಾದ ಸುನಿತಾ…