ವಿಜಯಪುರ: ದೇಶ ಸೇವೆ ಮಾಡಲು ಹೋಗಿದ್ದವರು. ಕುಟುಂಬದವರ ಜೊತೆ ರಜೆ ಕಳೆಯಲು ಬಂದಿದ್ದರು. ಆದ್ರೆ ನತಾದೃಷ್ಟವಶಾತ್ ಮತ್ತೆ ಸೇನೆಗೆ ಹೋಗದೆ ಇರುವಂತ ಬಾರದೂರಿಗೆ ಹೊರಟು ಬಿಟ್ಟಿದ್ದಾರೆ.

ಹೌದು, ಯೋಧ ಬಸವರಾಜ್ ಡುಂಗರಗಾವಿ ಈ ಬಾರಿಯ ರಜೆಗೆಂದು ಊರಿಗೆ ಬಂದಿದ್ದರು. ಆದ್ರೆ ಅಪಘಾತದಿಂದಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆಲಮಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯೋಧ ಬಸವರಾಜ್ ಅವರಿಗೆ, ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಮೃತ ಯೋಧ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದವರು. 8 ವರ್ಷಗಳ ಹಿಂದೆ ಸೇನೆಗೆ ನೇಮಕವಾಗಿದ್ದ ಯೋಧ, ಸದ್ಯ ಬಿಹಾರ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದ್ರೆ ಈಗ ಮಗನನ್ನ ಕಳೆದುಕೊಂಡು ಕುಟುಂಬ ದುಃಖದಲ್ಲಿದೆ.
