ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಗೆ ವಿಜಯ್ ಸೇತುಪತಿ ನೋ ಎಂದಿದ್ಯಾಕೆ ಗೊತ್ತಾ..?

suddionenews
1 Min Read

ಬಣ್ಣದ ಲೋಕದಲ್ಲಿ ಒಂದೊಂದು ಸಿನಿಮಾದಲ್ಲಿ ಒಂದೊಂದು ಪಾತ್ರಗಳನ್ನು ಮಾಡಲಾಗುತ್ತೆ. ಈ ಸಿನಿಮಾದಲ್ಲಿ ಅಣ್ಣ-ತಂಗಿ ಮಾಡಿದ್ರೆ ಇನ್ಯಾವುದೋ ಸಿನಿಮಾದಲ್ಲಿ ಜೋಡಿ ಹಕ್ಕಿಯಾಗಿ ಆಫರ್ ಬರುತ್ತೆ. ಕೆಲವರು ಅದನ್ನ ಪಾತ್ರ ಅಂತಷ್ಟೇ ತಿಳಿದುಕೊಳ್ಳುತ್ತಾರೆ, ಇನ್ನು ಕೆಲವರು ಅದು ಕೂಡ ಸಂಬಂಧವೇ ಎನ್ನುತ್ತಾರೆ. ಈಗ ಇಷ್ಟೆಲ್ಲಾ ಪೀಠಿಕೆ ಹಾಕೋದಕ್ಕೆ ಕಾರಣ ವಿಜಯ್ ಸೇತುಪತಿ.

ವಿಜಯ್ ಸೇತುಪತಿ ಇದೀಗ ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಮಾಡೋದಕ್ಕೆ ನೋ ಎಂದಿದ್ದಾರೆ. ಇದು ಹಲವರ ಗೊಂದಲಕ್ಕೆ ಕಾರಣವಾಗಿದೆ. ವಿಜಯ್ ಸೇತುಪತಿ ಸಿಕ್ಕಾಪಟ್ಟೆ ಬ್ಯುಸಿಯೆಸ್ಟ್ ನಟ. ಅವ್ರ ಕಾಲ್ ಶೀಟ್ ಗಾಗಿ ಸಾಕಷ್ಟು ನಿರ್ಮಾಪಕರು ಕ್ಯೂ ನಲ್ಲಿ ನಿಂತಿರ್ತಾರೆ. ಹಾಗಂತ ಯಾವ್ದ್ ಯಾವ್ದನ್ನೋ ವಿಜಯ್ ಸೇತುಪತಿ ಆಯ್ಕೆ ಮಾಡಿಕೊಳ್ಳಲ್ಲ. ಬದಲಿಗೆ ಪಾತ್ರಗಳ ಮಹತ್ವವನ್ನು ನೋಡ್ತಾರೆ.

ತೆಲುಗಿನ ಉಪ್ಪೇನಾ ಸಿನಿಮಾದಲ್ಲಿ ಕೃತಿ ಹಾಗೂ ವಿಜಯ್ ಸೇತುಪತಿ ಪಾತ್ರ ಜನರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಈ ಕಾರಣಕ್ಕಾಗಿಯೇ ಇಬ್ಬರ ಜೋಡಿಯನ್ನ ತೆರೆ ಮೇಲೆ ರೋಮ್ಯಾನ್ಸ್ ಮಾಡೋದಕ್ಕೆ ಆ ನಿರ್ಮಾಪಕರು ಸ್ಕೆಚ್ ಹಾಕಿದ್ರು. ಇದಕ್ಕೆ ವಿಜಯ್ ಸೇತುಪತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ ಉಪ್ಪೇನಾ ಸಿನಿಮಾದಲ್ಲಿ ವಿಜಯ್ ಸೇತುಪತಿ ಹಾಗೂ ಕೃತಿ ಶೆಟ್ಟಿ ತಂದೆ-ಮಗಳ ಪಾತ್ರದಲ್ಲಿ ಮಾಡಿದ್ದಾರೆ.

ಈ ಬಗ್ಗೆ ಹೇಳಿಕೊಂಡಿರುವ ವಿಜಯ್ ಸೇತುಪತಿ, ನಾನು ಕೃತಿಯನ್ನು ಮಗಳೆಂದೆ ಭಾವಿಸುತ್ತೇನೆ. ಅದೇಗೆ ಮಗಳ ಜೊತೆ ರೊಮ್ಯಾನ್ಸ್ ಮಾಡೋದಕ್ಕೆ ಸಾಧ್ಯ. ಕೃತಿ ಇಂದಲ್ಲ‌ ಮುಂದೇನು ನನ್ನ ಮಗಳಿದ್ದಾಗೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *