ವಿಧಾನ ಪರಿಷತ್ ಚುನಾವಣೆ : ಗೆಲುವು ನಮ್ಮದೆ, ಮಾಜಿ ಸಚಿವ ಹೆಚ್.ಆಂಜನೇಯ ವಿಶ್ವಾಸ

suddionenews
2 Min Read

ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ, (ನ.22) : ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಸೋಮಶೇಖರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದು, ಗ್ರಾ.ಪಂ.ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಹೊಂದಿರುವುದರಿಂದ ಗೆಲುವು ನಮ್ಮದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಕೊಡುವ ಕಾಂಗ್ರೆಸ್ ಪಕ್ಷಸಜ್ಜನ ವ್ಯಕ್ತಿ, ಹೋರಾಟಗಾರ, ನಿಷ್ಟಾವಂತ ಕಾರ್ಯಕರ್ತ, ಸಂಘಟನೆ ಮಾಡುವ ಕಾರ್ಯಕರ್ತರಾಗಿರುವ ಸೋಮಶೇಖರ್ ಅವರನ್ನು ಆಯ್ಕೆ ಮಾಡಿರುವುದು ಸ್ವಾಗತಾರ್ಹ.

ಅವರ ಗೆಲುವಿಗಾಗಿ ನಾವುಗಳು ಶ್ರಮಿಸಲಿದ್ದೆವೆ ಎಂದು ಹೇಳಿದ ಅವರು, ಚಿತ್ರದುರ್ಗ ಜಿಲ್ಲೆಯ 6 ಹಾಗೂ ದಾವಣಗೆರೆ ಜಿಲ್ಲೆಯ 3 ಸೇರಿ ಒಟ್ಟು 09 ತಾಲ್ಲೂಕುಗಳು ಇದ್ದು, ಈ ಭಾಗದಲ್ಲಿ ಬರುವ ಗ್ರಾ.ಪಂ.ಗಳಲ್ಲಿ ಶೇಕಡ 65 ರಷ್ಟು ಸದಸ್ಯರು ಕಾಂಗ್ರೆಸ್ ಬೆಂಬಲಿತರಾಗಿರುವುದರಿಂದ ಮತ್ತು ನಗರಸಭೆ, ಪುರಸಭೆಗಳಲ್ಲೂ ಹೆಚ್ಚಿನ ಸದಸ್ಯರಿದ್ದು, ಗೆಲುವು ನಮಗೆ ಸುಲಭವಾಗಿ ದೊರೆಯಲಿದೆ ಎಂದು ಹೇಳಿದರು.

ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಿ 1 ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ 10 ವೀಕ್ಷಕರನ್ನು ನೇಮಕ ಮಾಡಲಾಗುವುದು, ಈ ಮೂಲಕ ಬೇರೆಯ ಮತಗಳನ್ನು ನಮ್ಮ ಕಡೆ ಸೆಳೆಯಲು ಶ್ರಮಿಸಲಾಗುವುದು ಸಾಮಾಜಿಕ ನ್ಯಾಯ ಕೊಡುವ ಕಾಂಗ್ರೇಸ್ ಪಕ್ಷ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ  ಶೇಕಡ 50 ರಷ್ಟು ಅವಕಾಶ ನೀಡಿದೆ. ಗ್ರಾಮ ಪಂಚಾಯತಿಗಳಿಗೆ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳ ಮೂಲಕ ನೇರವಾಗಿ ಅನುದಾನ ಬರುವಂತೆ ಮಾಡಿದ್ದು ಕಾಂಗ್ರೇಸ್ ಪಕ್ಷ. ಕಾಂಗ್ರೇಸ್ ಬಲಪಡಿಸುವಲ್ಲಿ ಗ್ರಾ.ಪಂ. ಸದಸ್ಯರು ಮುಂದೆ ಬಂದಿದ್ದಾರೆ. ಅಲ್ಲದೆ ಕೊರೋನಾ ರೋಗ ಬರದಂತೆ ಮುಂಜಾಗ್ರತೆ ವಹಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಮತ್ತು ಬೆಲೆ ಏರಿಕೆ ಹೆಚ್ಚಳ ಮಾಡಿ ಜನಸಾಮಾನ್ಯರ ಮೇಲೆ ಬರೇ ಹೇಳೆದಿದ್ದಾರೆ ಎಂದು ದೂರಿದರು.

ರೈತರಿಗೆ ಮಾರಕಾವಾದ ಕೃಷಿ ಕಾಯ್ದೆ ಜಾರಿಗೆ ತಂದು ರೈತರ ಜೀವನಕ್ಕೆ ಕೊಳ್ಳಿ ಹಿಡುವ ಕೆಲಸವನ್ನು ಬಿಜೆಪಿ ಮಾಡಿ, ನೂರಾರು ಜನರನ್ನು ಬಲಿ ತೆಗೆದುಕೊಂಡಿದ್ದರ ಪರಿಣಾಮವಾಗಿ ಬಿಜೆಪಿಯನ್ನು ರಾಜ್ಯ ಹಾಗೂ ಕೇಂದ್ರದಿಂದ ಕಿತ್ತೊಗೆಯಲು ಜನರು ಮುಂದೆ ಬಂದಿರುವುದರಿಂದ ಈ ಚುನಾವಣೆಗಳು ಮಹತ್ತರವಾದ ಪಾತ್ರ ವಹಿಸಲಿದೆ ಎಂದು ಅಂಜನೇಯ ಹೇಳಿದರು.

ನಾಳೆ ಬೆಳಗ್ಗೆ 12.30 ಗಂಟೆಗೆ ಕನಕ ವೃತ್ತದಿಂದ ಮೆರವಣಿಗೆ ಮೂಲಕ ಬಂದು ಸೋಮಶೇಖರ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‍ಪೀರ್, ಷಣ್ಮಖಪ್ಪ, ಉಮಾಪತಿ, ನಂದೀನಿಗೌಡ, ಡಿ.ಎನ್.ಮೈಲಾರಪ್ಪ, ಸಂಪತ್, ಜಗದೀಶ್, ನರಸಿಂಹರಾಜು, ಸೇರಿದಂತೆ ಇತರರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *