ತಮಿಳುನಾಡಿನಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ.. ಆಂಧ್ರದಲ್ಲಿ ಪ್ರಯತ್ನಪಡಬೇಕಿದೆ : ಸಿಟಿ ರವಿ

suddionenews
1 Min Read

ಬೆಂಗಳೂರು: ದಕ್ಷಿಣ ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ. ಕರ್ನಾಟಕದ ನಂತರ ತೆಲಂಗಾಣದಲ್ಲಿ ಅಧಿಕಾರಕ್ಕೆ ಬರೋದು ಉಪಚುನಾವಣೆಯಲ್ಲಿ ವ್ಯಕ್ತವಾಗಿದೆ. ಯುವಕರು, ಮಹಿಳೆಯರನ್ನ ಒಳಗೊಂಡಂತೆ ದೊಡ್ಡ ಪ್ರಮಾಣದಲ್ಲಿ ಯಾರ್ಲಿಯಲ್ಲಿ ಭಾಗಿಯಾಗಿದ್ದು ಸ್ಪಷ್ಟ ಸಂದೇಶ ದೊರೆತಿದೆ. ಕರ್ನಾಟಕದ ನಂತರ ತೆಲಂಗಾಣ ಬಿಜೆಪಿ ಮಡಿಲಿಗೆ ಬೀಳಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದ್ದಾರೆ.

ತ.ನಾ ನಲ್ಲೂ ಬಿಜೆಪಿ ಬೆಳವಣಿಗೆ ಆಶಾದಾಯಕವಾಗಿದೆ. ರಾಜ್ಯಾಧ್ಯಕ್ಷ ಅಣ್ಣಮಲೈ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುತ್ತಿದೆ. ತಮಿಳುನಾಡಿನ ಜನ ಬದಲಾವಣೆ ಬಯಸುತ್ತಿರೋದು ಅನುಭವಕ್ಕೆ ಬರ್ತಿದೆ. ಪಾಂಡಿಚೇರಿಯಲ್ಲಿ ಈಗಾಗಲೇ ಅಧಿಕಾರದಲ್ಲಿ ಪಾಲುದಾರರಾಗಿದ್ದೇವೆ. ಆಂಧ್ರದಲ್ಲಿ ಪ್ರಯತ್ನ ಪಡಬೇಕಿದೆ. ಕೇಂದ್ರದ ವಿವಿಧ ಯೋಜನೆಗಳು 70ರಷ್ಟು ಜನರಿಗೆ ಮುಟ್ಟಬೇಕಿದೆ. ಯಾವುದೇ ಜಾತಿ, ಧರ್ಮದ ತಾರತಮ್ಯ ಇಲ್ಲದೆ ಬಡವರಿಗೆ, ದಲಿತರಿಗೆ, ಮಹಿಳೆಯರಿಗೆ ನ್ಯಾಯ ಒದಗಿಸೋ ಕೆಲಸ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದೆ.

ಅದರ ಲಾಭಾಂಶವನ್ನ ಪಕ್ಷದ ಜೊತೆ ಯಶಸ್ವಿಯಾಗಿ ಜೋಡಿಸಬೇಕಿದೆ. ಇದರಿಂದ ದಕ್ಷಿಣದಲ್ಲೂ ಬಿಜೆಪಿ ಸದೃಡವಾಗೋದ್ರಲ್ಲಿ ಅನುಮಾನವಿಲ್ಲ. ಪ್ರಧಾ‌ನಿಗಳು ಸ್ನೇಹಯಾತ್ರೆಯ ಕಲ್ಪನೆ ಬಿಂಬಿಸಿದ್ದಾರೆ. ಆ ಮೂಲಕ ಬಿಜೆಪಿ ವಿಚಾರದಾರೆ, ಯೋಜನೆಗಳನ್ನ ಜನರಿಗೆ ಮುಟ್ಟಿದಬೇಕಿದೆ. ಸಂಕಲ್ಪ ವ್ಯಕ್ತವಾಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *