ರಾಮನಗರ: ಕಡಲೆಕಾಯಿಯನ್ನ ಬಡವರ ಬಾದಾಮಿ ಅಂತಾನೆ ಕರೆಯುತ್ತಾರೆ. ವಾಟಾಳ್ ನಾಗರಾಜ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಕಡಲೇಕಾಯಿ. ಎಲ್ಲರಿಗೂ ಕಡಲೆ ಕಾಯಿ ಹಂಚಿ ತಮ್ಮ ಹುಟ್ಟುಹಬ್ಬವನ್ನ ಸ್ಒಎಷಲ್ ಆಗಿ ಆಚರಿಸಿಕೊಂಡಿದ್ದಾರೆ.
ವಾಟಾಳ್ ನಾಗರಾಜ್ ಬೆಂಬಲಿಗರೆಲ್ಲಾ ಈ ಬರ್ತ್ ಡೇ ಸಂಭ್ರಮಕ್ಕೆ ನೆರೆದಿದ್ದರು. ಈ ವೇಳೆ ರಾಮನಗರ ಬಸ್ ನಿಲ್ದಾಣದಲ್ಲೇ ಕೇಕ್ ಕತ್ತರಿಸಿ, ಸಂಭ್ರಮ ಪಟ್ಟಿದ್ದಾರೆ. ಇನ್ನು ಇದೇ ಹುಟ್ಟುಹಬ್ಬದ ದಿನ ಬೂಟಿನ ಏಟು ತಿಂದದ್ದನ್ನ ನೆನಪಿಸಿಕೊಂಡಿದ್ದಾರೆ.
1962 ಅಂದು ಬೆಂಗಳೂರಿನಲ್ಲಿ ಹಿಂದಿ ಸಿನಿಮಾ ಹೇರಿಕೆ ವಿಚಾರವನ್ನು ನಾನು ಖಂಡಿಸಿದ್ದೆ. ಅದಕ್ಕೆ ಅಂದು ಬೂಟಿನ ಏಟು ತಿಂದಿದ್ದೆ. ಅದೇ ದಿನವನ್ನ ನಾನು ಹುಟ್ಟುಹಬ್ಬವಾಗಿ ಆಚರಿಸಿಕೊಳ್ತೇನೆ. ಜೊತೆಗೆ ನಂಗೆ ಬೂಟಿನಿಂದಲ್ಲ ಗುಂಡೇಟು ಹೊಡೆದ್ರು ಕನ್ನಡದ ಮೇಲಿನ ಪ್ರೀತಿಯನ್ನ ಬಿಡಲ್ಲ, ಕನ್ನಡಕ್ಕಾಗಿಯೇ ಹೋರಾಡುತ್ತೇನೆ ಎಂದಿದ್ದಾರೆ.
ಇನ್ನು ಇದೇ ವೇಳೆ ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಹಾಗೂ ಕೇಂದ್ರ ಎರಡು ಸರ್ಕಾರಕ್ಕೂ ಆಸಕ್ತಿಯಿಲ್ಲ. ಅದಕ್ಕೆ ಇಷ್ಟೆಲ್ಲಾ ಅಡತಡೆಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.