ಮಾರ್ಚ್ 22ಕ್ಕೆ ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ಕರೆ ; ಕಾರಣವೇನು ಗೊತ್ತಾ..?

ಬೆಂಗಳೂರು; ಎಂಇಎಸ್ ಪುಂಡರ ಹಾವಳಿ ಬೆಳಗಾವಿಯಲ್ಲಿ ಕಡಿಮೆಯಾದಂತೆ ಕಾಣಿಸುತ್ತಿಲ್ಲ. ಪದೇ ಪದೇ ಯಾವುದಾದರೂ ವಿಚಾರಕ್ಕೆ ಕ್ಯಾತೆ ತೆಗೆಯುತ್ತಲೆ ಇರುತ್ತಾರೆ. ಇತ್ತೀಚೆಗಷ್ಟೇ ಸಾರುಗೆ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಮೇಲೆ ನಡೆದ ದಾಳಿಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಈ ಸಂಬಂಧ ಹೋರಾಟಗಳು ನಡೆಯುತ್ತಿವೆ. ಇದೀಗ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕೂಡ ಈ ಸಂಬಂಧ ಆಕ್ರೋಶ ಹೊರ ಹಾಕಿದ್ದು, ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.

ಇಂದು ಬೆಂಗಳೂರಿನ ಹೊಟೇಲ್ ನಲ್ಲಿ ವಾಟಾಳ್ ನಾಗಾರಾಜ್ ನೇತೃತ್ವದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಬೆಳಗಾವಿಯಲ್ಲಿ ಸಾರಿಗೆ ಬಸ್ ಕಂಡಕ್ಟರ್ ಹಾಗೂ ಚಾಲಕರ ಮೇಲೆ ಹಲ್ಲೆ ನಡೆದಿದ್ದನ್ನು ಖಂಡಿಸಿ, ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಈಗಾಗಲೇ ಪದೇ ಪದೇ ಕನ್ನಡಿಗರ ಮೇಲೆ ಎಂಇಎಸ್ ಪುಂಡರಿಂದ ಹಲ್ಲೆ ನಡೆಯುತ್ತಿದೆ. ಆದರೆ ಬಂದು ಹೋಗುವ ಸರ್ಕಾರಗಳು ಮಾತ್ರ ಜಾಣ ಕುರುಡು ತೋರಿಸುತ್ತಿವೆ. ಬೆಳಗಾವಿಯಲ್ಲಿ ಕನ್ನಡಿಗರಿಗೆ ಆಗ್ತಿರೋ ಅನ್ಯಾಯ ಕೊನೆಯಾಗಬೇಕು. ಶಿವಸೇನೆ ಹಾಗೂ ಎಂಇಎಸ್ ಪುಂಡರಿಗೆ ಕಡಿವಾಣ ಹಾಕಬೇಕು. ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೆ ಹೋದರೆ ಮರಾಠಿಗರು ಬುದ್ದಿ ಕಲಿಯಲ್ಲ ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಮಾರ್ಚ್ 3ರ ಬೆಳಗ್ಗೆ 11ಕ್ಕೆ ರಾಜಭವನದ ಮುತ್ತಿಗೆ ಹಾಕಲಿದ್ದು, ಮಾರ್ಚ್ 7ಕ್ಕೆ ಬೆಳಗಾವಿ ಚಲೋ ಹಮ್ಮಿಕೊಂಡಿದ್ದಾರೆ. ಮಾರ್ಚ್ 11 ರಂದು ಮೇಕೆದಾಟಿಗಾಗಿ ಅತ್ತಿಬೆಲೆ ತಮಿಳುನಾಡು ಗಡಿ ಬಂದ್ ಮಾಡಲಿದ್ದಾರೆ. ಮಾರ್ಚ್ 17 ರಂದು ಹೊಸಕೋಟೆ – ಚೆನ್ನೈ ಹೆದ್ದಾರಿ ತಡೆಯಲಿದ್ದಾರೆ. ಮಾರ್ಚ್ 18 ರಂದು ಕನ್ನಡ ಪರ ಸಂಘಟನೆಗಳು ಸಭೆ ನಡೆಸಲಿದ್ದು, ಮಾರ್ಚ್ 22ರಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೂ ಕರ್ನಾಟಕ ಬಂದ್ ನಡೆಸಲು ನಿರ್ಧಾರ ಮಾಡಲಾಗಿದೆ.

suddionenews

Recent Posts

ತೋಟಪ್ಪ ಉತ್ತಂಗಿಯವರಿಗೆ ವರ್ಷದ ಸಾಧಕ ಪ್ರಶಸ್ತಿ

ಸುದ್ದಿಒನ್, ಚಿತ್ರದುರ್ಗ, ಏ. 15 - ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಜಮುರಾ ಕಲಾಲೋಕದ ಸಂಗೀತ ಕಲಾವಿದರಾದ ತೋಟಪ್ಪ…

39 minutes ago

ಯಾಕೆ ಮುಸಲ್ಮಾನ, ಕ್ರಿಶ್ಚಿಯನ್ ನಲ್ಲಿ ಉಪಜಾತಿಗಳಿಲ್ವಾ..? ಪ್ರತಾಪ್ ಸಿಂಹ ವಾಗ್ದಾಳಿ

ಮೈಸೂರು; ಜಾತಿ ಗಣತಿ ವರದಿಯ ಅಂಕಿ ಅಂಶಗಳು ಬಹಿರಂಗವಾದ ಬೆನ್ನಲ್ಲೇ ಇದೀಗ ಮಾಜಿ ಸಂಸದ ಪ್ರತಾಒ್ ಸಿಂಹ ಸಿದ್ದರಾಮಯ್ಯ ವಿರುದ್ಧ…

59 minutes ago

ಜಾತಿ ಗಣತಿ ವರದಿಯಲ್ಲಿ ಗೊಲ್ಲ ಮತ್ತು ಯಾದವರನ್ನ ಬೇರ್ಪಡಿಸಿದರಾ..? ವಿರೋಧವೇಕೆ..?

ಬೆಂಗಳೂರು; ಜಾತಿ ಗಣತಿ ವರದಿ ರಿಲೀಸ್ ಆಗುವುದಕ್ಕೂ ಮುನ್ನವೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಅಂಕಿ ಅಂಶಗಳು ಎಲ್ಲೆಡೆ ವೈರಲ್…

1 hour ago

2ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ; ಇಂದಿನ ದರ ಎಷ್ಟಿದೆ..?

ಬೆಂಗಳೂರು; ಕಳೆದ ಕೆಲವು ದಿನಗಳ ಹಿಂದಷ್ಟೇ ಚಿನ್ನದ ಬೆಲೆ ಏರಿಕೆಯತ್ತಲೇ ಸಾಗುತ್ತಾ ಇತ್ತು. ಚಿನ್ನದ ಮೇಲಿನ ಆಸೆಯನ್ನೇ ಬಿಟ್ಟು ಬಿಡಬೇಕು…

1 hour ago

ಚಿತ್ರದುರ್ಗ APMC : ಇಂದಿನ ಹತ್ತಿ ಮಾರುಕಟ್ಟೆ ರೇಟ್ ಎಷ್ಟಿದೆ ?

    ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.15 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಮಂಗಳವಾರ, ಏಪ್ರಿಲ್. 15)ಹತ್ತಿ ಮಾರುಕಟ್ಟೆ ಇದ್ದು,…

1 hour ago

ಚಿತ್ರದುರ್ಗ APMC : ಇಂದಿನ ಹತ್ತಿ ಮಾರುಕಟ್ಟೆ ರೇಟ್ ಎಷ್ಟಿದೆ ?

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.15 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಮಂಗಳವಾರ, ಏಪ್ರಿಲ್. 15)ಹತ್ತಿ ಮಾರುಕಟ್ಟೆ ಇದ್ದು, ಧಾರಣೆಯಾದ ಕನಿಷ್ಠ…

1 hour ago