ಟಿಕೆಟ್ ಟು ಫಿನಾಲೆ ನಡೆಯುತ್ತಿದೆ. ಈ ಟಾಸ್ಕ್ ನಲ್ಲಿ ಹೆಚ್ಚು ಅಂಕ ಪಡೆದವರು ಈ ವಾರ ಸೇವ್ ಆಗುತ್ತಾರೆ. ಹೀಗಾಗಿ ಒಬ್ಬೊಬ್ಬರು ಸ್ಪರ್ಧೆಗಳ ರೀತಿ ಆಡುತ್ತಿದ್ದಾರೆ. ದೋಸ್ತಿಗಳು ಅಂತಾನು ನೋಡುತ್ತಿಲ್ಲ, ಅಂಕಗಳು ಹತ್ತಿರತ್ತಿರ ಇದ್ದರೆ ಅವರನ್ನೇ ದೂರ ಇಡುತ್ತಿದ್ದಾರೆ. ಅದರಲ್ಲಿ ಪ್ರತಾಪ್ – ಸಂಗೀತಾರನ್ನು, ನಮ್ರತಾ – ವಿನಯ್ ರನ್ನು ದೂರವಿಟ್ಟಿದ್ದರು. ಅಷ್ಟೇ ಯಾಕೆ ವರ್ತೂರು ಸಂತೋಷ್ – ತುಕಾಲಿಯನ್ನೇ ಇಟ್ಟಿದ್ದರು. ಇದೀಗ ಪ್ರತಾಪ್ ಮಾತಿಗೆ ವರ್ತೂರು ಕೆಂಡಕಾರುತ್ತಿದ್ದಾರೆ. ಅದುವೆ ತನ್ನ ಹೆಸರು ಹೇಳಲಿಲ್ಲ ಎಂಬ ಕಾರಣಕ್ಕೆ.
ಶುಕ್ರವಾರ ಬಂತು ಎಂದರೆ ಮನೆ ಮಂದಿಗೆಲ್ಲಾ ಸ್ವಲ್ಪ ಭಯ ಜಾಸ್ತಿಯಾಗುತ್ತದೆ. ಒಂದು ಕಡೆ ಕಳಪೆ ಕೊಟ್ಟು ಜೈಲಿಗೆ ಕಳುಹಿಸುವುದು. ಮತ್ತೊಂದು ಉತ್ತಮ ಸಿಗುವ ಸಂತಸ. ಈ ವಾರ ಕಳಪೆ ತೆಗೆದುಕೊಳ್ಳುವವರ ವಿಚಾರದಲ್ಲಿ ಕೊಂಚ ಭಯ ಕೂಡ ಜಾಸ್ತಿ ಇದೆ. ಮನೆಯಿಂದ ಹೊರಗೆ ಹೋಗುವ ಭಯ. ಈ ವಾರ ತುಕಾಲಿ ಸಂತು ಕಳಪೆ ತೊಟ್ಟು ಜೈಲಿಗೆ ಹೋಗಿದ್ದಾರೆ.
ಪ್ರತಾಪ್ ಕೂಡ ತುಕಾಲಿ ಸಂತೋಷ್ ಅವರಿಗೇನೆ ಕಳಪೆ ನೀಡಿದ್ದಾರೆ. ಅಂಕಗಳ ವಿಚಾರವನ್ನು ತೆಗೆದುಕೊಂಡು ತುಕಾಲಿ ಅವರನ್ನು ಕಳಪೆ ಎಂದೊದ್ದಾರೆ. ಕಡೆಗೂ ಎಲ್ಲರ ಅಭಿಪ್ರಾಯದಿಂದ ತುಕಾಲಿ ಜೈಲು ಸೇರಿದ್ದಾರೆ. ತುಕಾಲಿಗೆ ಜೈಲಿಗೆ ಹೋಗುವುದೇನು ಇಷ್ಟವಿರಲಿಲ್ಲ. ಆದರೂ ಫಿನಾಲೆಗೆ ಹತ್ತಿರತ್ತಿರ ಇರುವಾಗಲೇ ಜೈಲು ಸೇರಿದ್ದಾರೆ.
ಸಂತು ಪಂತು ಜೊತೆಗೆ ಇದ್ದರೆ ಮುಗೀತು. ಮನೆಯಲ್ಲಿ ಸದಾ ಜೊತೆಯಲ್ಲಿ ಇರುವುದು ಸಂತು ಮತ್ತು ಪಂತುನೆ. ಜೊತೆಗೆ ಕುಂತಾಗ ಬರೀ ಗಾಸಿಪ್ ಗಳನ್ನೇ ಮಾತನಾಡುತ್ತಾರೆ. ಅವರು ಹಾಗೇ ಇವರು ಹೀಗೆ ಅಂತ. ಯಾರ ಬಗ್ಗೆಯೂ ಪಾಸಿಟಿವ್ ಆಗಿ ಮಾತನಾಡುವುದಿಲ್ಲ. ಆದರೆ ಈಗ ಪ್ರತಾಪ್ ತನ್ನ ಹೆಸರು ಹೇಳಲಿಲ್ಲ ಅಂತ ರೊಚ್ಚಿಗೆದ್ದಿದ್ದಾರೆ. ನಿನ್ನ ಪರವಾಗಿ ನಿಂತರು ನನ್ನದೊಂದು ಹೆಸರು ಹೇಳಲಿಲ್ಲವಲ್ಲ ಅಂತ ರೊಚ್ಚಿಗೆದ್ದಿದ್ದಾರೆ.
ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ…
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…
ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…