ಉತ್ತರ ಪ್ರದೇಶ: ಧ್ವನಿವರ್ಧಕದ ವಿಚಾರ ದೇಶದೆಲ್ಲೆಡೆ ಹರಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೊಸ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಮೈಕ್ ಬಳಸಬೇಕೆಂದರು ಅನುಮತಿ ಜೊತೆಗೆ ಆವರಣದ ಒಳಗೆ ಬಳಸಬೇಕು. ಅಷ್ಟೇ ಅಲ್ಲ ಆ ಮೈಕ್ ಶಬ್ಧದಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ಆದೇಶದಲ್ಲಿ ತಿಳಿಸಿದ್ದಾರೆ.
ಈದ್ ಮತ್ತು ಅಕ್ಷಯ ತೃತೀಯ ಹಬ್ಬಗಳು ಬರುತ್ತಿವೆ. ಈ ಹಬ್ಬದಲ್ಲೂ ಯಾವುದೇ ಸಮಾಜಘಾತುಕ ಘಟನೆಗಳು ನಡೆಯದಂತೆ ಆದಿತ್ಯನಾಥ್ ಸರ್ಕಾರ ಎಚ್ವರಿಕೆವಹಿಸುತ್ತಿದೆ. ಇದಕ್ಕಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರ ರಜೆ ಕ್ಯಾನ್ಸಲ್ ಮಾಡಲಾಗಿದೆ. ಹಬ್ಬದ ದಿನ ಎಚ್ಚರವಹಿಸಲು ಸೂಚನೆ ನೀಡಲಾಗಿದೆ.
ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ ವಿಧಾನದ ಮೂಲಕ ಆರಾಧನೆ ಮಾಡುವ ಅಭ್ಯಾಸವಿರುತ್ತೆ. ಆ ಸ್ವಾತಂತ್ರ್ಯವೂ ಇರುತ್ತದೆ. ಮೈಕ್ರೋಫೋನ್ ಗಳನ್ನು ಬಳಸಬಹುದು. ಆದರೆ ಆ ಮೈಕ್ರೋಫೋನ್ ಮೂಲಕ ಸದ್ದು ಹೊರಗೆ ಹೋಗುತ್ತಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳಬೇಕು. ಹೊಸ ಸ್ಥಳಗಳಲ್ಲಿ ಮೈಕ್ರೋಫೋನ್ ಅಳವಡಿಸಲು ಹೊಸದಾಗಿ ಅನುಮತಿ ನೀಡಬಾರದು ಎಂದು ಆದಿತ್ಯನಾಥ್ ಹೇಳಿರುವಂತೆ ಸರ್ಕಾರ ಆದೇಶ ಹೊರಡಿಸಿದೆ.






GIPHY App Key not set. Please check settings