ಕಾಬೂಲ್: ಅಫ್ಘಾನಿಸ್ತಾನ ಈಗ ಕಂಪ್ಲೀಟ್ ತಾಲೀಬಾನಿಗಳ ಕೈ ವಶವಾಗಿದೆ. ತಮ್ಮದೇ ಆರ್ಭಟ, ತಮ್ಮದೇ ಸರ್ಕಾರ ರಚಿಸಲು ತಾಲಿಬಾನಿಗಳು ಉತ್ಸುಕರಾಗಿದ್ದಾರೆ. ಆದ್ರೆ ಆ ದಿನದಂದೇ ರಚಿಸಲು ಫ್ಲ್ಯಾನ್ ಮಾಡಿದ್ದಾರೆ.
ಅದು ಸೆಪ್ಟೆಂಬರ್ 11-2001. ತಾಲಿಬಾನಿಗಳು ಅಮೆರಿಕಾದ ವಿಶ್ವ ವಾಣಿಜ್ಯ ಸಂಸ್ಥೆಯ ಕಟ್ಟಡಗಳನ್ನ ವಿಮಾನ ನುಗ್ಗಿಸಿ ಧ್ವಂಸ ಮಾಡಿದ್ದರು. ಅದು ಮೇಲ್ಕಂಡ ದಿನಾಂಕದಂದೆ. ಜಾಗತಿಕವಾಗಿ ಹಲವು ತಲ್ಲಣಗಳಿಗೆ ಮುನ್ನುಡಿ ಬರೆದ 9/11 ರಂದೇ ತಾಲಿಬಾನಿಗಳು ಇದೀಗ ಸರ್ಕಾರ ರಚನೆಗೆ ಮುಂದಾಗಿದ್ದಾರೆ.
ಈ ದಿನದ ಮಹತ್ವ ನಮಗೆ ಗೊತ್ತಿದೆ. ನಮ್ಮನ್ನು ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆ ಕೆಟ್ಟದಾಗಿ ನಡೆಸಿಕೊಂಡಿರುವ ಅವಮಾನ ಇಂದಿಗೂ ಹಸಿರಾಗಿದೆ. ನಮ್ಮ ಸರ್ಕಾರದ ಗೃಹ ಸಚಿವರ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಅಮೆರಿಕದ ಈ ಕ್ರಮಗಳಿಂದ ನಮಗೂ ಇರಿಸುಮುರಿಸು ಉಂಟಾಗಿದೆ.
ಸರ್ಕಾರದ ಕಾರ್ಯಾರಂಭಕ್ಕೆ ನಿರ್ದಿಷ್ಟವಾಗಿ ಇದೇ ದಿನ ಆರಿಸಿಕೊಳ್ಳುವ ಮೂಲಕ ಅಮೆರಿಕಕ್ಕೆ ಇರಿಸುಮುರಿಸು ಉಂಟು ಮಾಡುವುದು ನಮ್ಮ ಉದ್ದೇಶ ಆಗಿರಲಿಲ್ಲ’ ಎಂದು ತಾಲಿಬಾನ್ನ ಹಿರಿಯ ನಾಯಕನೊಬ್ಬನ ವ್ಯಂಗ್ಯವಾಡಿರುವುದನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.