
ವಿಜಯಪುರ: ಹೆಲಿಕಾಪ್ಟರ್ ಲ್ಯಾಂಡ್ ಆಗುವ ಜಾಗದಲ್ಲಿ ಸಾಕಷ್ಟು ಸುರಕ್ಷತೆ ಇರಬೇಕು. ಸ್ಥಳೀಯ ಪೊಲೀಸರು ಕೂಡ ಆ ಸುರಕ್ಷತೆಯೆಡೆಗೆ ಗಮನ ಹರಿಸುತ್ತಾರೆ. ಆದರೂ ಆಗಾಗ ಕೆಲವೊಂದು ಎಡವಟ್ಟುಗಳು ಆಗುತ್ತವೆ. ಈಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿದ್ದ ಹೆಲಿಕಾಪ್ಟರ್ ಕೂಡ ಲ್ಯಾಂಡಿಂಗ್ ವೇಳೆ ಅವಘಡ ಸಂಭವಿಸಿತ್ತು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹುಬ್ಬಳ್ಳಿಯಿಂದ ವಿಹಯಪುರಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿದ್ದರು. ನಗರದ ಸೈನಿಕ ಶಾಲೆ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗಬೇಕಿತ್ತು. ಈ ವೇಳೆ ಅಲ್ಲಿಯೇ ಬ್ಯಾರಿಕೇಡ್ ಗಳು, ಗಾಳಿಯ ರಭಸಕ್ಕೆ ಹೆಲಿಕಾಪ್ಟರ್ ಲ್ಯಾಂಡ್ ಆಗುವ ಜಾಗಕ್ಕೆ ಬಂದು ಬಿದ್ದಿದ್ದವು.
ಅದೃಷ್ಟವಶಾತ್ ಪೊಲೀಸರು ಅದನ್ನು ಬೇಗನೇ ಸರಿಪಡಿಸಿದ್ದಾರೆ. ಬಳಿಕ ಹೆಲಿಕಾಪ್ಟರ್ ಸೇಫ್ ಆಗಿ ಲ್ಯಾಂಡ್ ಆಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ.
GIPHY App Key not set. Please check settings