ವಿಜಯಪುರದಲ್ಲಿ ಇಬ್ಬರು ಯುವಕರು ಸಜೀವ ದಹನ..!

suddionenews
0 Min Read

 

ವಿಜಯಪುರ: ಪ್ಲಾಸ್ಟಿಕ್ ಅಂಗಡಿಯಲ್ಲಿ ಅಕಸ್ಮಾತ್ ಆಗಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಇಬ್ಬರು ಯುವಕರು ಸಜೀವ ದಹನವಾಗಿರುವ ಘಟನೆ ನಡೆದಿದೆ.

ಜಿಲ್ಲೆಯ ನಿಡಗುಂದಿ ತಾಲೂಕಿನ ಬಸವನಬಾಗೇವಾಡಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. 25 ವರ್ಷದ ಅಶೋಕ ದೇಸ್ನೂಯಿ ಹಾಗೂ 35 ವರ್ಷದ ಲಿಂಬರಾಮ ದೇಸ್ನೂಯಿ ಮೃತಪಟ್ಟವರು.

ಪ್ಲಾಸ್ಟಿಕ್ ಅಂಗಡಿಯಲ್ಲೇ ಈ ಇಬ್ಬರು ಯುವಕರು ಮಲಗಿಕೊಂಡಿದ್ದರು ಎನ್ನಲಾಗಿದೆ. ಇದ್ದಕ್ಕಿದ್ದ ಹಾಗೆ ಹೊತ್ತಿಕೊಂಡ ಬೆಂಕಿ ಎಲ್ಲಾ ಕಡೆ ಆವರಿಸಿಕೊಂಡಿದೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಬಂದು ಅಗ್ನಿ ನಂದಿಸಿದ್ದಾರೆ. ಬೆಂಕಿ ತಹಬದಿಗೆ ಬಂದಿದ್ದು, ಇಬ್ಬರು ಯುವಕರ ಶವಗಳು ಪತ್ತೆಯಾಗಿವೆ. ಈ ಇಬ್ಬರು ಅಂಗಡಿ ಒಳಗೆ ಇದ್ದರು ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *