in

ಬೀದಿ ನಾಯಿ ವಿಚಾರಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಎರಡು ಕುಟುಂಬಗಳು..!

suddione whatsapp group join

 

ಬೆಂಗಳೂರು: ಕೆಲವೊಮ್ಮೆ ಸಿಲಿಕಾನ್ ಸಿಟಿಯಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಜಗಳ ನಡೀತಾನೇ ಇರುತ್ತೆ.. ಉಗುರಿನಲ್ಲಿ ಹೋಗೋ ವಿಷಯಕ್ಕೆ‌ ಕೊಡಲಿ ತಗೊಂಡ್ರು ಅಂತಾರಲ್ಲ ಹಾಗೆ.. ಇಲ್ಲೊಂದು ಘಟನೆಯೂ ಅದೇ ರೀತಿಯಾಗಿದೆ.

ಬೀದಿ ನಾಯಿಗೆ ಆಹಾರವಾಕಿದ್ದೇ ತಪ್ಪಾಗಿದೆ. ಎರಡು ಕುಟುಂಬಗಳು ಪೊಲೀಸ್ ಠಾಸೆ ಮೆಟ್ಟಿಲೇರಿವೆ. ಮಲ್ಲೇಶ್ವರಂ ನ ಆರ್ ವಿ ಎನ್ ಕ್ಲೇವ್ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದೆ.

ಇದೇ ಅಪಾರ್ಟ್ಮೆಂಟ್ ನಲ್ಲಿ ಅನುರಾಧ ಎನ್ನುವವರು ವಾಸವಾಗಿದ್ದಾರೆ. ಅವರ ಜೊತೆಗೆ ನಾಯಿಯೊಂದನ್ನು ಸಾಕಿದ್ದಾರೆ. ಈ ನಾಯಿಯನ್ನ ಮೃದುಲಾ ಮತ್ತು ಪ್ರಭಾಕರ್ ಎಂಬುವವರು ಕಲ್ಲಿನಿಂದ ಜಜ್ಜಿ ಸಾಯಿಸಲು ಹೋಗಿದ್ದರಂತೆ. ಈ ಸಂಬಂಧ ಅನುರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಮೃದುಲ ಕೂಡ ದೂರು ದಾಖಲಿಸಿದ್ದಾರೆ. ಅನುರಾಧ ಬೀದಿ ನಾಯಿಗಳನ್ನ ತಂದು ಸಾಕುತ್ತಿದ್ದಾರೆ. ಇದು ಎಲ್ಲರನ್ನು ಕಚ್ವಲು ಹೋಗುತ್ತೆ. ಅದು ತೊಂದರೆ ಕೊಡ್ತಿದೆ ಎಂದು ದೂರಿದ್ದಾರೆ. ಈ ಮಧ್ಯೆ ಸರೋಜಾ ಎಂಬುವವರು ಕೂಡ ಅನುರಾಧ ಮತ್ತು ಪ್ರಭಾಕರ್ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ ಎಂದು ದೂರಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

523 ಜನರಿಗೆ ಹೊಸದಾಗಿ‌ ಸೋಂಕು..9 ಜನ ಸಾವು..!

ಸಚಿವರ ಹೆಸರೇಳಿಕೊಂಡು ಲಕ್ಷ‌ಲಕ್ಷ ವಂಚಿಸುತ್ತಿದ್ದ ಇಬ್ಬರು ಅರೆಸ್ಟ್..!