in

ಸೋಮವಾರ ರಾಶಿ ಭವಿಷ್ಯ

suddione whatsapp group join

 

ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077,
ಸೂರ್ಯೋದಯ: 06:07 AM, ಸೂರ್ಯಸ್ತ: 06:10 PM

ಪ್ಲವ ನಾಮ ಸಂವತ್ಸರ
ಭಾದ್ರಪದ ಮಾಸ, ಗ್ರೀಷ್ಮ ಋತು, ದಕ್ಷಿಣಾಯಣ,, ಕೃಷ್ಣ ಪಕ್ಷ,

ತಿಥಿ: ಸಪ್ತಮೀ ( 18:16 )
ನಕ್ಷತ್ರ: ಮೃಗಶಿರ ( 20:43 )
ಯೋಗ: ವ್ಯತೀಪಾತ ( 17:49 )
ಕರಣ: ಬವ ( 18:16 )
ಬಾಲವ ( 31:26 )

ರಾಹು ಕಾಲ: 03:00 – 4:30
ಯಮಗಂಡ: 09:00 – 10:30

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ ರಾಶಿ:_ ಎದುರಾಗುವ ಅನಿರೀಕ್ಷಿತ ಟೀಕೆಗಳನ್ನು ಧೈರ್ಯದಿಂದ ಎದುರಿಸಿ. ನಿಮಗೆ ಇದು ಪರೀಕ್ಷೆಯ ಕಾಲ. ಕಪಟವರಿಯದ ನಿಮಗೆ ನೀವು ಆಡುವ ಸತ್ಯನುಡಿಗಳೇ ನಿಮಗೆ ವಜ್ರಾಯುಧ. ದೈವಕೃಪೆ ನಿಮ್ಮ ಮೇಲಿರುವುದರಿಂದ ಅಂಜುವ ಅಗತ್ಯವಿಲ್ಲ.

ಮಿಥುನ:- ಹಳೆಯ ಕಡತಗಳನ್ನು ಹಿಂದೆ, ಮುಂದೆ ನೋಡದೆ ಬಿಸಾಡದಿರಿ. ಕಣ್ಣಲ್ಲಿ ಕಣ್ಣಿಟ್ಟು ನೋಡಿ ಬೇಡದ್ದನ್ನು ಬಿಸಾಡಿ. ಕಾರಣ ಕೆಲವು ಕಡತಗಳಲ್ಲಿ ಬಹುಮುಖ್ಯವಾದ ಚೀಟಿಗಳು ಪತ್ತೆಯಾಗಬಹುದು. ಅದರಿಂದ ನಿಮಗೆ ಅನುಕೂಲವಾಗುವುದು.

ಕಟಕ:- ವಿನಾಕಾರಣ ಜಗಳವಾಡಿ ವಾತಾವರಣ ಅಶಾಂತಿಯ ಗೂಡಾಗುವ ಹಾಗೆ ಮಾಡುವಂಥ ನಿಮ್ಮ ಕೋಪವನ್ನು ಕೈಬಿಡಿ. ಆ ಕೋಪ ನಿಮ್ಮ ಇಡೀ ದಿನದ ಸಂತೋಷವನ್ನು ಹಾಳು ಮಾಡುವುದಲ್ಲದೆ ಮನೆಯವರ ನೆಮ್ಮದಿಯನ್ನು ಕೆಡಿಸುವುದು. ತಾಳ್ಮೆಯೇ ನಿಮ್ಮ ದೈನಂದಿನ ಮಂತ್ರವಾಗಿರಲಿ.

ಸಿಂಹ:- ಮನೋಜಯನಾದ, ಸ್ಥೈರ್ಯ, ಧೈರ್ಯಗಳ ನಿಧಿಯಾದ ಮಾರುತಿಯನ್ನು ಆರಾಧಿಸಿ. ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. 5 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಸಿಹಿ ಅಥವಾ ಪುಸ್ತಕ ಕೊಟ್ಟು ಪ್ರೋತ್ಸಾಹಿಸಿ.

ಕನ್ಯಾ:- ನಿಮ್ಮ ಪಾಲಿಗೆ ಅದೃಷ್ಟದ ದಿನ. ಬಹುದಿನದ ನಿಮ್ಮ ಬಯಕೆ ಈಡೇರುವ ದಿನ. ಇದೇ ದಿನಕ್ಕೆ ಕಾದು ಕುಳಿತಿರುವಂತೆ ನಿಮ್ಮ ಮನಸ್ಸು ನೂರುಬಾರಿ ಹೇಳಿಕೊಳ್ಳುವುದು. ಇದರಿಂದ ಒಂದು ಬಹುದೊಡ್ಡ ಸಮಸ್ಯೆ ನಿವಾರಣೆ ಆದಂತೆ ಆಗುವುದು.

ತುಲಾ:- ಹಳೆಯ ಗೆಳೆಯರ ಇಲ್ಲವೆ ಬಂಧುಗಳ ಆಗಮನದಿಂದ ಮನಸ್ಸಿಗೆ ಹರ್ಷ ಉಂಟಾಗುವುದು. ವ್ಯವಹಾರದ ವಿಚಾರದಲ್ಲಿ ಚೇತರಿಕೆ ಕಂಡು ಬರುವುದು. ಹಳೆಯ ಸಾಲದ ಬಾಕಿಯನ್ನು ತೀರಿಸಲು ಮುಂದಾಗುವಿರಿ. ಹಣವನ್ನು ಇತಿಮಿತಿಯಾಗಿ ಬಳಸಿ.

ವೃಶ್ಚಿಕ:- ಹಿರಿಯರೊಬ್ಬರು ನಿಮ್ಮ ವಿಚಾರದಲ್ಲಿ ಕರುಣಾಳುಗಳಾಗಿರುತ್ತಾರೆ. ಅವರ ಮಾರ್ಗದರ್ಶನ ಮತ್ತು ಹಿತನುಡಿಗಳು ನಿಮ್ಮ ಮೇಲೆ ಗಾಢ ಪರಿಣಾಮ ಬೀರಿರುವುದು. ಅದನ್ನು ಮುಕ್ತಕಂಠದಿಂದ ಎಲ್ಲರಿಗೂ ತಿಳಿಯುವಂತೆ ತಿಳಿಸಿ. ಆ ಮೂಲಕ ಆ ಹಿರಿಯರಿಗೆ ಗೌರವ ಸೂಚಿಸಿ.

ಧನುಸ್ಸು:- ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಗಮನ ಇರಲಿ. ಸುಮ್ಮನೆ ಪೊಳ್ಳು ಮಾತುಗಳನ್ನು ನಂಬಿ ಇರುವ ವ್ಯವಹಾರವನ್ನು ಅಭಿವೃದ್ಧಿ ಪಡಿಸಲು ಮುಂದಾಗದಿರಿ. ಇದರಿಂದ ತೊಂದರೆ ಅನುಭವಿಸಬೇಕಾಗುವುದು. ಮಾರುತಿ ಮಂತ್ರವನ್ನು ಪಠಿಸಿ.

ಮಕರ:- ಬಾಳಸಂಗಾತಿಯ ಬಯಕೆಗಳನ್ನು ನಯವಾಗಿ ತಿರಸ್ಕರಿಸಿ. ಅವರು ಬಹು ಮೊತ್ತದ ಖರ್ಚಿನ ದಾರಿಗೆ ನಿಮ್ಮನ್ನು ಎಳೆಯಲು ಬಯಸುತ್ತಿರುವರು. ಆದರೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅವರಿಗೆ ಸಹಾಯ ಮಾಡಿ.

ಕುಂಭ:- ಯಶಸ್ಸಿನ ದಾರಿಗಳನ್ನು ತಿಳಿಸಿಕೊಡುವ ಅಥವಾ ನಿರ್ದೇಶಿಸುವ ಹಿರಿಯರನ್ನು ಭೇಟಿಯಾಗುವ ಅವಕಾಶ ಸ್ಪಷ್ಟವಾಗಿರುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸುಸಂದರ್ಭವನ್ನು ನೀವು ಅನುಭವಿಸುವಿರಿ.

ಮೀನ:-ಹಣಕಾಸಿನ ಅನುಕೂಲ ಆಗುವ ಸಾಧ್ಯತೆ ಇದೆ. ಆದರೆ ಅದನ್ನು ಕಂಡು ಕರುಬುವ ಮಂದಿಯೇ ಬಹಳ ಆಗಿರುವುದರಿಂದ ಹೆಚ್ಚಿನ ಸಂತೋಷವನ್ನು ಹೊಂದಲು ಆಗುವುದಿಲ್ಲ. ದೇವಿ ಪಾರ್ವತಿ ಇಲ್ಲವೆ ದುರ್ಗಾಮಾತೆಯನ್ನು ಅನನ್ಯವಾಗಿ ಭಜಿಸಿ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಮಗಳ ದಿನಾಚರಣೆ : ಫೋಟೋ ಶೇರ್ ಮಾಡಿ ಹಾರ್ಟ್ ಟಚಿಂಗ್ ಪದ ಬರೆದ ಯಶ್ ದಂಪತಿ

ಮೂಳೆಗಳು ಗಟ್ಟಿಯಾಗಬೇಕಾದ್ರೆ ಆಗಾಗ ಒಣಕೊಬ್ಬರಿ ಜಗಿಯುತ್ತಿರಿ