ಗಿಡಮರಗಳು ಮಾನವನಿಗೆ ಪ್ರಕೃತಿ ಕೊಟ್ಟ ಒಂದು ವರ : ಜೆ. ಪರಶುರಾಮ ಅವರ ವಿಶೇಷ ಲೇಖನ

ಚಿತ್ರದುರ್ಗ ಜಿಲ್ಲೆಯು ಬರಪೀಡಿತ ನಾಡೆಂದು ಸುಮಾರು ವರ್ಷಗಳಿಂದ ಗುರುತಿಸಿಕೊಂಡಿದೆ. ಆದರೆ ಕಳೆದ 2 ವರ್ಷಗಳಿಂದ ಈ ಜಿಲ್ಲೆಯಲ್ಲಿ ಉತ್ತಮವಾದ ಮಳೆಯಾಗಿ, ಅಂತರ್ಜಲದ ಮಟ್ಟ ಸಾಧರಣ ಮಟ್ಟಿಗೆ ಸುಧರಿಸಿದೆ. ಈ ಜಿಲ್ಲೆಯಲ್ಲಿ ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ ನಡೆಯುತ್ತಿರುವುದು ಎಲ್ಲಾರಿಗೂ ತಿಳಿದಂತಹ ವಿಚಾರ. ಗಣಿಗಾರಿಕೆಯ ನಂತರ ಆ ಪ್ರದೇಶಕ್ಕೆ ಮರಗಿಡಗಳನ್ನು ನೆಡುವುದು ಮತ್ತು ಸರ್ಕಾರದ ಎಲ್ಲಾ ಖಾಲಿ ಪ್ರದೇಶಗಳಿಗೆ ಮರಗಿಡಗಳನ್ನು ನೆಟ್ಟು ನಮ್ಮ ಜಿಲ್ಲೆಯನ್ನು ಹಸಿರು ವಲಯವನ್ನಾಗಿ ಮಾಡಲು ಎಲ್ಲಾರೂ ಕೈಜೋಡಿಸಬೇಕಾದ ಸಂದರ್ಭ ಒದಗಿಬಂದಿದೆ.

ರಾಜ, ಮಹಾರಾಜರುಗಳು, ಚಕ್ರವರ್ತಿಗಳು ಅರಣ್ಯಗಳ ಮಹತ್ವವನ್ನರಿತವರಂತೆ ಹಿಂದೆ ನೆಡೆದು ಕೊಂಡಿದ್ದಾರೆ. ಮರಗಳ ಪ್ರಾಮುಖ್ಯತೆಯನ್ನು ಮನಗಂಡವರಂತೆ ಬೆಳಸಿದ್ದಾರೆ. ಸಾಲು ಮರಗಳನ್ನು ಬೆಳೆಸಿ ಪೋಷಿಸಲು ಪ್ರೋತ್ಸಾಹಿಸಿದ್ದಾರೆ. ಅರಣ್ಯಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ವನ್ಯಜೀವಿಗಳನ್ನು ಸಂರಕ್ಷಿಸಿದ್ದಾರೆ.

ಶ್ರೀಮತಿ ಸಾಲಮರದ ತಿಮ್ಮಕ್ಕನವರ ಕೊಡುಗೆ ಪರಸರಕ್ಕೆ ಅಪಾರವಾದದ್ದು ಅವರ ಜೀವನನದಲ್ಲಿ ಸುಮಾರು 8000 ಮರಗಿಡಗಳನ್ನು ನೆಟ್ಟಿದ್ದಾರೆ. ಹಾಗೂ 400 ಆಲದ ಮರಗಳನ್ನು ನೆಟ್ಟು ಪರಿಸರಕ್ಕೆ ಉಪಕಾರ ಮಾಡಿದ್ದಾರೆ. ಅಸಂಖ್ಯಾತ ಗಿಡಮರಗಳಿಂದ ಕೂಡಿರುವ ವಿಶಿಷ್ಟ ತಾಣಗಳೇ ಅರಣ್ಯಗಳು, ಲಕ್ಷಾಂತರ ವರ್ಷಗಳಲ್ಲಿ ನಿಧಾನವಾಗಿ ವಿಕಾಸವಾಗಿ ರೂಪಿತಗೊಂಡಿರುವ ವಿಶಿಷ್ಟ ನಾಡು. ಅರಣ್ಯಗಳಿದ್ದರೆ ನಾಗರೀಕತೆ. ಗಾಳಿ, ನೀರು, ಆಹಾರ, ಔಷಧಿ ಮೊದಲಾದ ಜೀವದಾವಶ್ಯಕ ಪದಾರ್ಥಗಳನ್ನು ಹೇರಳವಾಗಿ ನೀಡುತ್ತಾ ಬಂದಿರುವ ವೃಕ್ಷಗಳು ಭೂಲೋಕದ ಕಲ್ಪವೃಕ್ಷಗಳೇ ಆಗಿವೆ ಎಂದರೆ ಅತಿಯೋಕ್ತಿಯಾಗಲಾರದು.

ವಾಡಿಕೆಯಲ್ಲಿ ಮರಗಳನ್ನು ಇಂಧನವನ್ನಾಗಿ ಮತ್ತು ಮರಮುಟ್ಟುಗಳನ್ನು ಮಾಡುವ ಉದ್ದೇಶಕ್ಕೆ ಈ ಸಮಾಜದಲ್ಲಿ ಉಪಯೋಗಿಸುತ್ತಿದ್ದಾರೆ. ದಾಖಲೆಗಳ ಪ್ರಕಾರ ಸುಮಾರು 40 ವರ್ಷದ ವಯೋಮಾನದ ಒಂದು ಮರವು ತಾನು ಬಿಡುವ ಹೂವು, ಕಾಯಿ, ಹಣ್ಣು, ಬೀಜಗಳನ್ನು ಹೊರತುಪಡಿಸಿ ಗಂಟೆಗೆ 2.5ಟನ್‍ಗಳಷ್ಟು ಇಂಗಾಲದ ಡೈಆಕ್ಸೈಡ್‍ ಅನಿಲವನ್ನು ವಾತಾವರಣದಿಂದ ಹೀರಿಕೊಂಡು ಸುಮಾರು 1.5 ಟನ್‍ಗಳಷ್ಟು ಆಮ್ಲಜನಕವನ್ನು ನಮಗೆ ಬಿಡುತ್ತದೆ. ಅದೂ ಅಲ್ಲದೆ ವಾತಾವರಣದಲ್ಲಿ ಇತರ ಅನಿಲಗಳಿಂದಾಗಿ ಬಹುದಾದ ಮಾಲಿನ್ಯವನ್ನು ನಿಯಂತ್ರಿಸುತ್ತದೆ.

ಸಸ್ಯ ಸಂಪತ್ತಿನ ಪ್ರತೀಕವಾಗಿರುವ ಮರಗಿಡಗಳಿಗೆ ಅಂತರ್ಜಲವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಭೂಮಿಯ ಫಲವತ್ತನ್ನು ವೃದ್ಧಿಸುವ ಶಕ್ತಿಯಿದೆ. ಹಲವಾರು ಭಯಂಕರ ರೋಗರುಜನಗಳನ್ನು ಗುಣಪಡಿಸುವ ಶಕ್ತಿ ಔಷಧಿ ಸಸ್ಯಗಳಿಗಿದೆ. ಅಮೂಲ್ಯ ಗಿಡಮೂಲಿಕೆಗಳಿಂದಾಗಿಯೇ ಪರಂಪರಾಗತವಾಗಿ ಆಯುವೇದ ಪದ್ಧತಿ ಬೆಳೆದುಬಂದಿದೆ.

ನಮ್ಮ ಸುತ್ತಲಿನ ಪರಿಸರದಲ್ಲಿ ಅನೇಕ ಸಸ್ಯ ಸಂಪ್ತ್ಉಗಳಿಂದ್ದಾರೂ ಸಹ ಅವುಗಳಲ್ಲಿರುವ ಔಷಧಿಯ ಗುಣ ನಮಗೆ ಬಹಳಮಟ್ಟಿಗೆ ತಿಳಿದುರುವುದಿಲ್ಲ, ತಿಳಿದಿದ್ದರೂ ಅತ್ಯಲ್ಪ , ಅದರ ಸಮರ್ಪಕ ಉಪಯೋಗ ಪಡೆಯುವುದು ತುಂಬಾ ವಿರಾಳ. ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಂಡು ಸೂಕ್ತ ರೀತಿಯಲ್ಲಿ ನಮ್ಮ ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಹೊಣೆ ಎಂದು ನಿವೃತ್ತ ಹಿರಿಯ ಭೂವಿಜ್ಞಾನಿ
ಜೆ. ಪರಶುರಾಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೇಖಕರು :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ,
ಗೌರವಾಧ್ಯಕ್ಷರು, ವಿ.ಕೆ.ಎಸ್.,
ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)

suddionenews

Recent Posts

16ನೇ ಬಜೆಟ್ ಮಂಡನೆಗೆ ಸಿಎಂ ಸಿದ್ಧತೆ : ಅಷ್ಟು ಸಮಯ ನಿಂತುಕೊಳ್ಳಲು ಸಾಧ್ಯವಾ ಈ ಬಾರಿ..?

ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಗ್ಯಾರಂಟಿ ಯೋಜನೆಗಳ ನಡುವೆ ಇನ್ನು ಏನೆಲ್ಲಾ ಕೊಡಬಹುದು ಎಂಬ ನಿರೀಕ್ಷೆಗಳು ಜನ…

6 hours ago

ಭೀಮಸಮುದ್ರದಲ್ಲಿ ಮೈನ್ಸ್ ಲಾರಿಗಳನ್ನು ತಡೆದು ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಫೆ. 20…

8 hours ago

ಸರ್ವಜ್ಞನ ತಿಪದಿಗಳಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ : ಶಾಸಕ ಟಿ ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 20…

9 hours ago

ಕರ್ನಾಟಕದ ಮುಂದಿನ ಸಿಎಂ ಲಕ್ಷ್ಮೀ ಹೆಬ್ಬಾಳ್ಕರ್ : ನಿಜವಾಗುತ್ತಾ ಪ್ರಶಾಂತ್ ಕಿಣಿ ಭವಿಷ್ಯ..?

      ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯನವರು ಖುರ್ಚಿ ಬಿಟ್ಟುಕೊಟ್ಟರೆ ಕೂರೋದಕ್ಕೆ ಹಲವರು ಇದ್ದಾರೆ.…

10 hours ago

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಬಗ್ಗೆ ಅರಿವು ಮೂಡಿಸಿ : ನ್ಯಾಯಾಧೀಶರಾದ ಆರ್.ಸಹನಾ

    ಚಿತ್ರದುರ್ಗ. ಫೆ.20: “ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ” ಕುರಿತು ಮಹಿಳೆಯರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾ…

10 hours ago

ಕರ್ನಾಟಕಕ್ಕೆ ಪರ್ಯಾಯ ರಾಜಕಾರಣ ವ್ಯವಸ್ಥೆಯ ಅವಶ್ಯಕತೆ ಇದೆ : ನಟ ಚೇತನ್

ಹಿರಿಯೂರು, ಫೆಬ್ರವರಿ. 20: ರಾಜ್ಯದಲ್ಲಿ ಸಮಸಮಾಜ ನಿರ್ಮಾಣ ಮಾಡಲು ನಾವೆಲ್ಲರೂ ಒಂದಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್…

10 hours ago