in ,

ದನಗಳ ಸಾಗಾಟ: ವಾಹನಗಳು ಪೊಲೀಸರ ವಶಕ್ಕೆ

suddione whatsapp group join

ಸುದ್ದಿಒನ್,ಚಿತ್ರದುರ್ಗ, (ಸೆ.10) : ಪರವಾನಗಿ ಇಲ್ಲದೆ ದನಗಳ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಶುಕ್ರವಾರ ಚಳ್ಳಕೆರೆಯ ದೊಡ್ಡೇರಿ ಬೀರಲಿಂಗೇಶ್ವರ ದೇವಸ್ಥಾನದ ಬಳಿ ವಶಕ್ಕೆ ಪಡೆದಿದ್ದಾರೆ.

ಚಳ್ಳಕೆರೆ ಕಡೆಯಿಂದ ಪಾವಗಡ ಮಾರ್ಗವಾಗಿ ಎರಡು ವಾಹನಗಳಲ್ಲಿ ಅಕ್ರಮವಾಗಿ ದನಗಳು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಮಹೇಶ್ ಗೌಡ ತಂಡ ದಾಳಿ ನಡೆಸಿ ದೊಡ್ಡೇರಿ ಬೀರಲಿಂಗೇಶ್ವರ ದೇವಸ್ಥಾನದ ಬಳಿ ವಾಹನಗಳನ್ನು ಜಪ್ತಿ ಮಾಡಿದೆ.

ಸರ್ಕಾರದ ಪರವಾನಗಿ ಇಲ್ಲದೆ ಅಶೋಕ ಲೈಲ್ಯಾಂಡ್ ದೋಸ್ತ್ ವಾಹನದಲ್ಲಿ  ಎರಡು ಎತ್ತು, ಎರಡು ಹಸು ಪತ್ತೆಯಾದರೆ, ಮತ್ತೊಂದು ವಾಹನದಲ್ಲಿ ನಾಲ್ಕು ಎತ್ತು, ಒಂದು ಗಂಡು ಕರು ಸೇರಿ ಒಟ್ಟು ಐದು ದನಗಳು ಪತ್ತೆಯಾಗಿವೆ.

ಈ ಬಗ್ಗೆ ಪ್ರಕರಣ ಠಾಣೆಯಲ್ಲಿ ದಾಖಲಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಉಡುಪಿಯಲ್ಲೂ ರದ್ದಾಯ್ತು ವೀಕೆಂಡ್ ಕರ್ಫ್ಯೂ

ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲಿ ಗಣಪತಿ ಹಬ್ಬ