ರೈಲು ಡಿಕ್ಕಿಯಾಗಿ ಆನೆಗಳ ಸಾವು: ರೈಲ್ವೇ ಪೊಲೀಸರಿಂದ ತನಿಖೆ

ಕೊಯಮತ್ತೂರು : ರೈಲು ಹಳಿ ದಾಟುವಾಗ ಆನೆಗಳು ಸಾವನ್ನಪ್ಪಿರುವ ಸಾಕಷ್ಟು ಘಟನೆಗಳು ನಡೆದಿವೆ. ಇದೀಗ ಮತ್ತೆ ಅಂಥದ್ದೇ ಘಟನೆ ಮರುಕಳಿಸಿದೆ. ಹೆಣ್ಣಾನೆ ಜೊತೆಗೆ ಎರಡು ಪುಟ್ಟ ಕಂದಮ್ಮಗಳಂತೆ ಇದ್ದ ಮರಿಯಾನೆಗಳು ಸಾವನ್ನಪ್ಪಿರುವುದು ಎಂಥ ಕಲ್ಲು ಹೃದಯದವರಲ್ಲೂ ಮರುಕ ಹುಟ್ಟಿಸಿದೆ.


ತಮಿಳುನಾಡು – ಕೇರಳದ ಗಡಿಯಾದ ನವಕ್ಕರೈ ಸಮೀಪದ ಮಾವುಂತ್ತಪತ್ತಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಹೆಣ್ಣಾನೆ ತನ್ನ ಮಕ್ಕಳೊಂದಿಗೆ ರೈಲ್ವೆ ಹಳಿಯನ್ನ ದಾಟಲು ಯತ್ನಿಸುತ್ತಿತ್ತು. ಇದೇ ವೇಳೆ ಬಂದ ಮಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ರೈಲು ಆನೆಗಳ ಮೇಲೆ ಹರಿದಿದೆ. ದುರಾದೃಷ್ಟವಶಾತ್ ತಾಯಿಯೊಂದಿಗೆ ಎರಡು ಮರಿಗಳು ಸಾವನ್ನಪ್ಪಿವೆ.

ಈ ಎಕ್ಸ್‌ಪ್ರೆಸ್‌ ರೈಲು ಅತಿ ವೇಗವಾಗಿ ಚಲಿಸುತ್ತಿದ್ದ ಕಾರಣ ಆನೆಗಳು ಸ್ಥಳದಲ್ಲೇ ಮೃತಪಟ್ಟಿವೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬಂದಿದ್ದಾರೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *