ನವದೆಹಲಿ : ಕಾರ್ಮಿಕ, ಕೃಷಿ ಕಾನೂನುಗಳನ್ನು ವಿರೋಧಿಸಿ ದೇಶದ 10 ಕಾರ್ಮಿಕ ಸಂಘಟನೆಗಳು ನ.26 ರಂದು ದೇಶಾವ್ಯಾಪಿ ಸಾಮಾನ್ಯ ಮುಷ್ಕರ ನಡೆಸಲು ನಿರ್ಧರಿಸಿವೆ.
ಮುಷ್ಕರ ನಡೆಸುವ ಸಂಬಂಧ ಕಾರ್ಮಿಕ ಸಂಘಟನೆಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿವೆ. ಕಾರ್ಮಿಕರು ಹಾಗೂ ದೇಶಾದ್ಯಂತ ಜನರಿಂದ ಬೆಂಬಲ ವ್ಯಕ್ತವಾಗಿದೆ ಎಂದು ಸಂಘಟನೆಗಳ ಜಂಟಿ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಇಂಟಕ್), ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಹಿಂದ್ ಮಜ್ದೂರ್ ಸಭಾ (ಎಚ್ಎಂಎಸ್) ಸೇರಿದಂತೆ 10 ಸಂಘಟನೆಗಳು ಮುಷ್ಕರದಲ್ಲಿ ಮುಂಚೂಣಿಯಲ್ಲಿವೆ.
ಕೇಂದ್ರ ಸರ್ಕಾರ ಹೊಸದಾಗಿ ಅಂಗೀಕರಿಸಿರುವ ಕಾರ್ಮಿಕ, ಕೃಷಿ ಕಾನೂನುಗಳನ್ನು ಕೈಬಿಡಬೇಕು ಎಂಬುದು ಸಂಘಟನೆಗಳ ಆಗ್ರಹವಾಗಿದೆ.
