ಬೆಂಗಳೂರು: ಶಾಸಕ ವಿನಯ್ ಕುಲರ್ಣಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಇದೀಗ ಶಾಸಕ ವಿನಯ್ ಕುಲಕರ್ಣಿ ಕೂಡ ಪ್ರತಿ ದೂರು ದಾಖಲಿಸಿದ್ದಾರೆ. ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ಸಂಚು ರೂಪಿಸಿ, ಮಾನಹಾನಿ ಮಾಡಿದ್ದಾರೆ. ರಾಜಕೀಯ ನಾಯಕರಿಗೂ ಬ್ಲಾಕ್ ಮೇಲ್ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ಮೇಲೆ ಬಂದಿರುವ ಆರೋಪದ ಬಗ್ಗೆ ಮಾತನಾಡಿರುವ ಶಾಸಕ ವಿನಯ್ ಕುಲಕರ್ಣಿ, ನಾನು ಆಕೆಯನ್ನು ಟಚ್ ಮಾಡಿದರೆ ನನ್ನ ತಾಯಿಯನ್ನು ಟಚ್ ಮಾಡಿದಂತೆ. ಇಷ್ಟೇ ಹೇಳುತ್ತೇನೆ. ನನ್ನ ವಿರುದ್ಧ ಮಹಿಳೆಯೊಬ್ಬರು ಕಿರುಕುಳ ಆರೋಪ ಹೊರಿಸಿದ್ದಾರೆ. ಈ ವಿಚಾರ ಏನಂದ್ರೆ ಒಂದು ವಿಡಿಯೋ ಕಾಲ್ ಮಾಡಿದ್ದು. ಆ ವಿಚಾರ ಇಟ್ಟುಕೊಂಡು ಇಷ್ಟೆಲ್ಲಾ ಆರೋಪ ಮಾಡುತ್ತಿದ್ದಾರೆ. ಅದೆಲ್ಲ ಸತ್ಯಕ್ಕೆ ದೂರವಾಗಿದೆ. ನಾನು ರಾಜಕೀಯದಲ್ಲಿ ಇಷ್ಟು ವರ್ಷ ಇದ್ದೇನೆ. ಆದರೆ ಯಾರ ಜೊತೆಗೂ ನಾನು ಕೆಟ್ಟದಾಗಿ ನಡೆದುಕೊಂಡಿಲ್ಲ.
ಕೆಲವು ಮಂದಿ ಹಿಂದೆಯಿಂದ ಮಾಡಿಸುತ್ತಿರಬಹುದು. ನನ್ನದೂ ಒಂದು ಕೇಸ್ ಇದೆ. ಸಾಕ್ಷಿಗಳ ಮೇಲೆ ಇಂಪ್ಯಾಕ್ಟ್ ಮಾಡಿಸುವ ಷಡ್ಯಂತ್ರವಿದು. ನಾನಂತು ಈ ವಿಚಾರದಲ್ಲಿ ಸ್ಪಷ್ಟವಾಗಿದ್ದೇನೆ. ಇದರಲ್ಲಿ ನನ್ನದೇನು ಪಾತ್ರವಿಲ್ಲ. ನಾನೂ ಕೂಡ ದೂರು ಕೊಟ್ಟಿದ್ದೇನೆ. ಈ ಬಗ್ಗೆ ತನಿಖೆ ಆಗಲಿ, ಸತ್ಯಾಸತ್ಯತೆ ಹೊರ ಬರಲಿ ಎಂದಿದ್ದಾರೆ.
ಇದೀಗ ವಿನಯ್ ಕುಲಕರ್ಣಿ ಪ್ರತಿ ದೂರಿನ ಮೇರೆಗೆ ಸಂಜಯನಗರ ಪೊಲೀಸರು, ಕನ್ನಡ ಸುದ್ದಿ ವಾಹಿನಿ ಮಾಲೀಕ ಹಾಗೂ ರೈತ ಮಹಿಳೆಯ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. ಖಾಸಗಿ ಸುದ್ದಿ ವಾಹಿನಿಯ ಮಾಲೀಕನೆ ಎ1 ಆರೋಪಿಯಾಗಿದ್ದು, ರೈತ ಮಹಿಳೆ ಎ2 ಆರೋಪಿಯಾಗಿದ್ದಾರೆ.
ಸುದ್ದಿಒನ್ :ಭಾರತದಲ್ಲಿ ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆ ಹೆಚ್ಚುತ್ತಿದೆ. ಹೆಚ್ಚಿನ ಸಂಖ್ಯೆಯ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಬಹಳ…
ಅಂತೂ ಇಂತೂ ಈ ರಾಶಿಯವರದು ಮದುವೆಯಾಯಿತು, ಈ ರಾಶಿಯವರಿಗೆ ಉದ್ಯೋಗದ ವರ್ಗಾವಣೆಯಿಂದ ಸಂತಸ, ಮಂಗಳವಾರದ ರಾಶಿ ಭವಿಷ್ಯ 25 ಫೆಬ್ರವರಿ…
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…