Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿನ್ನದ ಬೆಲೆಯಲ್ಲಿ ಇಳಿಕೆ….!

Facebook
Twitter
Telegram
WhatsApp

ಕಳೆದ ಕೆಲವು ದಿನಗಳಿಂದ ಚಿನ್ನ ಏರಿದರೆ ಇಳಿಕೆಯತ್ತಲೂ ಸಾಗುತ್ತಿದೆ. ಇಂದು ಚಿನ್ನದ ದರ ಇಳಿಕೆಯಾಗಿದ್ದು, ಇದೇ ರೀತಿ ಇಳಿಕೆಯಾದರೆ ಮಹಿಳಾ ಮಣಿಗಳು ಫುಲ್ ಖುಷಿಯಾಗಿ ಬಿಡುತ್ತಾರೆ. 22 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 550 ರೂಪಾಯಿ ಇಳಿಕೆಯಾಗಿದೆ.

ಇಷ್ಟು ದಿನ ಆಭರಣ ಚಿನ್ನ ಏರಿಕೆಯಾಗುತ್ತಲೆ ಬರುತ್ತಿತ್ತು. ಈಗ ಹಲವು ದಿನಗಳ ಬಳಿಕ ಇಳಿಕೆಯಾಗಿದೆ. ಇನ್ನು 24 ಕ್ಯಾರಟ್ ಚಿನ್ನದ ದರದಲ್ಲಿ ಹತ್ತು ಗ್ರಾಂಗೆ 600 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ 10 ಗ್ರಾಂಗೆ 78,870 ರೂಪಾಯಿ ಆಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಪ್ರಸ್ತುತ 72,300 ಆಗಿದೆ. ಬೆಳ್ಳಿ ಬೆಲೆಯಲ್ಲೂ ಕೊಂಚ ಇಳಿಕೆಯಾಗಿದ್ದು 100 ಗ್ರಾಂ ಬೆಳ್ಳಿಯಲ್ಲಿ 3000 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಒಂದು ಕೆಜೊ ಬೆಳ್ಳಿಗೆ 93,500 ಆಗುತ್ತದೆ.

ಇವತ್ತಿನ ಇಳಿಕೆ ಮಹಿಳಾ ಮಣಿಗಳಿಗೆ ಸಂತಸ ತಂದಿದೆ. ಡಿಸೆಂಬರ್ 14ರಿಂದ ಜನವರಿ 15ರವರೆಗೂ ಯಾವುದೇ ರೀತಿಯ ಮದುವೆ, ಶುಭ ಸಮಾರಂಭಗಳು ನಡೆಯುವುದಿಲ್ಲ. ಹೀಗಾಗಿ ಆ ಸಮಯಕ್ಕೆ ಚಿನ್ನದ ಸರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ. ಚಿನ್ನ ಬೆಳ್ಳಿ ದರ ಏರಿಕೆಯಾಗುತ್ತಿರುವುದನ್ನು ನೋಡಿದರೆ ಮಧ್ಯಮ ವರ್ಗದವರಿಗೆ ಚಿನ್ನದ ಮೇಲಿನ ಆಸಕ್ತಿ ಹೋಗಿ ಭಯ ಬರಬೇಕು ಆ ರೀತಿಯಾಗುತ್ತಿದೆ. ಬರೀ ಹತ್ತು ಗ್ರಾಂ ಚಿನ್ನ ತೆಗೆದುಕೊಳ್ಳಲು 70-80 ಸಾವಿರ ರೂಪಾಯಿ ವ್ಯಯಿಸಬೇಕು ಎಂದರೆ ಎಲ್ಲಿಂದ ತರುತ್ತಾರೆ. ಇನ್ಮೇಲೆ ಏನಿದ್ರು ಶ್ರೀಮಂತರ ಪಾಲಿಗಷ್ಟೇ ಎನಿಸುತ್ತದೆ ಚಿನ್ನ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ : ನಾಲ್ಕು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥ : ಮತ್ತೆ ಒಂದಾದ ಮೂರು ಜೋಡಿ

ಚಿತ್ರದುರ್ಗ. ಡಿ.14: ವಿವಿಧ ಕಾರಣಗಳಿಂದ ದೂರವಾಗಿದ್ದ ಮೂವರು ದಂಪತಿಗಳು ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್‍ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಒಂದಾದರು. ವೈವಾಹಿಕ ಜೀವನ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಿತ್ರದುರ್ಗದ

ವಕ್ಪ್ ಆಸ್ತಿ ಕಬಳಿಕೆ : ಬಿವೈ ವಿಜಯೇಂದ್ರರಿಂದ 150 ಕೋಟಿ ಆಮಿಷ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ? 

      ಬೆಂಗಳೂರು: ರಾಜ್ಯದಲ್ಲಿ ವಕ್ಫ್ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಚರ್ಚೆಗೂ ಗ್ರಾಸವಾಗಿದೆ. ಇದೀಗ ಬಿವೈ ವಿಜಯೇಂದ್ರ ಅವರ ಮೇಲೆ ದೊಡ್ಡ ಆರೋಪವೊಂದು ಕೇಳಿ ಬಂದಿದೆ. ವಕ್ಫ್ ಸಂಬಂಧ 150 ಕೋಟಿ

ಸಾಹಿತ್ಯದಲ್ಲಿ ವೈಚಾರಿಕ ಹಾಗೂ ವೈಜ್ಞಾನಿಕ ಭಾವನೆಗಳು ಮುಖ್ಯ : ಸಂತೋಷ್ ಕುಮಾರ್ ಮೆಹೇಂದಳೆ

    ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 14 : ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ ಹಾಗೂ ವಿಶ್ವಮಾನವ ಪದವಿ ಪೂರ್ವ ಕಾಲೇಜು ಸೀಬಾರ ಗುತ್ತಿನಾಡು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಕಥಾಯಾನ ಕಾರ್ಯಕ್ರಮದ

error: Content is protected !!