in ,

ನಾಳೆ ರಿವೀಲ್ ಆಗಲಿದೆ ಜ್ಯೂ. ಚಿರು ಹೆಸರು

suddione whatsapp group join

 

ಮೇಘನಾ ರಾಜ್ ಸದ್ಯಕ್ಕೆ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ತನ್ನೆಲ್ಲಾ ಸಮಯವನ್ನ ಮಗನಿಗಾಗಿ, ಆತನ ಹಾರೈಕೆಗಾಗಿಯೇ ಮೀಸಲಿಟ್ಟಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ಸಿನಿಮಾಗಳಲ್ಲೂ ಭಾಗಿಯಾಗ್ತಾ ಇದ್ದಾರೆ.

https://www.instagram.com/p/CTTnmxVJCc2/?utm_medium=copy_link

ಚಿರಂಜೀವಿ ಸರ್ಜಾ ನಿಧ‌ನದ ಬಳಿಕ ಜ್ಯೂನಿಯರ್ ಚಿರುಗೆ ಎಲ್ಲಿಲ್ಲದ ಫ್ಯಾನ್ ಫಾಲೋವರ್ಸ್ ಹುಟ್ಟಿಕೊಂಡ್ರು. ಕಡಿಮೆ ಅವಧಿಯೂ ಅಲ್ಲ ಅದು, ಹುಟ್ಟಿದಾಗಿನಿಂದಲೇ ಸ್ಟಾರ್ ಆಗೋದ. ಫ್ಯಾನ್ಸ್ ಗಳು ಜ್ಯೂ ಚಿರು ಅಪ್ಡೇಟ್ ಗಾಗಿನೇ ಕಾಯ್ತಾ ಇರ್ತಾರೆ. ಅದರಲ್ಲಿ ಜ್ಯೂ ಚಿರುಗೆ ಏನು ಹೆಸರಿಡಬಹುದು ಎಂಬುದು ಒಂದು.

ಸದ್ಯಕ್ಕೆ ಜ್ಯೂನಿಯರ್ ಗೆ ಜ್ಯೂ. ಚಿರು, ಕುಟ್ಟಿ ಪಾಪು, ಚಿರು ಶಿಷ್ಯಾ ಅಂತೆ ಎನೇನಲ್ಲ ಹೆಸರಿನಲ್ಲಿ ಕರೀತಾ ಇದ್ದಾರೆ. ಆದ್ರೆ ಇವೆಲ್ಲ ಪ್ರೀತಿಯಿಂದ ಕರೆಯುವಂತ ಹೆಸರುಗಳಷ್ಟೇ. ಅಧಿಕೃತವಾಗಿ ಹೆಸರೊಂದು ಬೇಕಲ್ವಾ. ಅದಕ್ಕೆ ನಾಳೆಯೇ ಮುಹೂರ್ತ ನಿಗಧಿಯಾಗಿದೆ. ಮೇಘನಾ ರಾಜ್ ಆ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇಷ್ಟು ಹಾಕಿದ್ದೆ ತಡ. ಫ್ಯಾನ್ಸ್ ಒಂದೊಂದೆ ಹೆಸರೇಳೋದಕ್ಕೆ ಶುರು ಮಾಡಿದ್ದಾರೆ.

ಇನ್ನು ಮೇಘನಾ ರಾಜ್ ಮಗನನ್ನ ಪ್ರತಿಯೊಂದು ಬೆಳವಣಿಗೆಯನ್ನು ಸಂಭ್ರಮಿಸುತ್ತಲೇ ಇದ್ದಾರೆ. ಮಗನಿಗೆ ಆರು ತಿಂಗಳು ತುಂಬಿದ್ದು, ಹತ್ತು ತಿಂಗಳು ತುಂಬಿದ್ದೆಲ್ಲವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಇದೀಗ ನಾಳೆ ಏನು ಹೆಸರಿಡ್ತಾರೆ ಅನ್ನೋದರ ಮೇಲೆ ಅಭಿಮಾನಿಗಳ ಕಾತುರ ಮನೆ ಮಾಡಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಸಿಂಪಲ್ ಆಗಿ ಸಿಟಿ ರೌಂಡ್ ಹಾಕಿದ ಕಂದಾಯ ಸಚಿವ ಆರ್. ಅಶೋಕ್

ಅಮೇರಿಕಾ ಸಾಧಿಸಿದ್ದು ಶೂನ್ಯ : ವ್ಲಾಡಿಮಿರ್ ಪುಟಿನ್