300ರ ಗಡಿದಾಟಲಿದೆ ಟಮೋಟೋ ಬೆಲೆ.. ಕಾರಣ ಏನು ಗೊತ್ತಾ..?

ಕಳೆದ ಕೆಲವು ದಿನಗಳಿಂದ ಟಮೋಟೋ ಬೆಲೆ ಗಗನಕ್ಕೇರಿದೆ. ಟಮೋಟೋ ಇಲ್ಲದೆ ಸಾಂಬಾರು ಮಾಡುವುದು ಕಷ್ಟ ಸಾಧ್ಯ. ಆದರೂ ಹಾಗೋ ಹೀಗೋ ಮನೆಯ ಹೆಣ್ಣು ಮಕ್ಕಳು ಎರಡು ಟಮೋಟೋ ಜಾಗಕ್ಕೆ ಒಂದನ್ನು ಹಾಕಿ, ಹುಣಸೆ ಹಣ್ಣನ್ನು ಬೆರೆಸಿ ಹೇಗೋ ಬ್ಯಾಲೆನ್ಸ್ ಮಾಡ್ತಾ ಇದ್ದಾರೆ. ಇಷ್ಟು ದಿನ ಆಯ್ತು. ಇನ್ನಾದರೂ ಟಮೋಟೋ ಬೆಲೆ ಕಡಿಮೆಯಾಗಬಹುದು ಎಂದು ಕಾಯುತ್ತಿದ್ದವರಿಗೆ ಮತ್ತಷ್ಟು ಏರಿಕೆಯಾಗುವ ಸೂಚನೆ ಸಿಕ್ಕಿದೆ.

ಅದು ಒಂದಲ್ಲ ಎರಡಲ್ಲ. 300ರ ಗಡಿದಾಟುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ 120 ರೂಪಾಯಿ ಟಮೋಟೋ ತೆಗೆದುಕೊಳ್ಳುವುದಕ್ಕೆ ಜನ ಕಣ್ಣು ಬಾಯಿ ಬಿಡುತ್ತಿದ್ದಾರೆ. ನ್ಯಾಷನಲ್ ಕಮಾಡಿಟಿ ಮ್ಯಾನೇಜ್‌ಮೆಂಟ್ ಸರ್ವಿಸಸ್ ಲಿಮಿಟೆಡ್‌ ಹೇಳುವ ಪ್ರಕಾರ ಇನ್ನು 2 ತಿಂಗಳ ಕಾಲ ಟಮೋಟೋ ಬೆಲೆ ಇಳಿಕೆಯಾಗುವುದಿಲ್ಲ. ಬದಲಿಗೆ ಏರಿಕೆಯಾಗಲಿದೆ ಎನ್ನಲಾಗಿದೆ.

ಈಗಾಗಲೇ ದೆಹಲಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಟಮೋಟೋ ಕೆಜಿಗೆ 250 – 300 ಆಗಿದೆ. ಈಗ ಕರ್ನಾಟಕದಲ್ಲೂ ಹೆಚ್ಚಾಗುವ ದಿನ ಹತ್ತಿರದಲ್ಲಿಯೇ ಇದೆ. ಟಮೋಟೋ ಬೆಳೆದಿರುವವರಂತು ಈ ವರ್ಷ ಕುಬೇರರಾಗಿದ್ದಾರೆ. ಉತ್ತಮ ಮಳೆಯಾಗದೆ ಇದ್ದಲ್ಲಿ, ಮಳೆಗಾಲದ ಆರಂಭದಲ್ಲಿ ಕೆಲವೊಂದು ತರಕಾರಿಗಳ ಬೆಲೆ ಗಗನಕ್ಕೇರುವುದು ಸಹಜ. ಆ ಸಮಯಕ್ಕೆ ತಕ್ಕನಾದ ತರಕಾರಿ ಬೆಳೆದವನೇ ಅದೃಷ್ಟವಂತನಾಗಿರುತ್ತಾನೆ. ಈಗ ಟಮೋಟೋ ಬೆಳೆಗಾರರ ಅದೃಷ್ಟ ಖುಲಾಯಿಸಿದಂತೆ.

suddionenews

Recent Posts

ರಾಜೀನಾಮೆ ನೀಡಿದ್ದಕ್ಕೆ ನಿಜವಾದ ಕಾರಣ ತಿಳಿಸಿದ ಬಿ.ಆರ್.ಪಾಟೀಲ್..!

ಬೆಂಗಳೂರು: ಮುಖ್ಯಮಂತ್ರಿಗಳ ಸಲಹೆಗಾರರಾಗಿದ್ದ ಬಿ.ಆರ್.ಪಾಟೀಲ್ ಅವರು ತಮ್ಮ ಹುದ್ದೆಗೆ ನಿನ್ನೆ ರಾಜೀನಾಮೆ ನೀಡಿದ್ದಾರೆ. ಆದರೆ ನಿನ್ನೆ ರಾಜೀನಾಮೆ ನೀಡಿದ್ದೇಕೆ ಎಂಬ…

1 hour ago

ಭದ್ರಾ ಮೇಲ್ದಂಡೆಗೆ ಅನುದಾನ ನೀಡದ ಕೇಂದ್ರ : ಮಾಜಿ ಸಚಿವ ಎಚ್.ಆಂಜನೇಯ

ಚಿತ್ರದುರ್ಗ: ಫೆ.02 : ದೇಶದ ಎಲ್ಲ ರಾಜ್ಯ, ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಯೋಜನೆ, ಹಸಿದ ಹೊಟ್ಟೆಗೆ ಅನ್ನ, ದುಡಿಯುವ ಕೈಗೆ…

1 hour ago

ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು

ಬೆಂಗಳೂರು, ಫೆಬ್ರವರಿ. 02 : ಎಡಗಾಲಿನ ಮಂಡಿಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ತಪಾಸಣೆಗೆ…

7 hours ago

ಬೆಲ್ಲ ಮತ್ತು ಲವಂಗ ಆರೋಗ್ಯಕ್ಕೆ ಎಷ್ಟು ಪ್ರಯೋಜನ ?

  ಸುದ್ದಿಒನ್ ಲವಂಗ ಮತ್ತು ಬೆಲ್ಲವನ್ನು ಒಟ್ಟಿಗೆ ಸೇವಿಸುವುದರಿಂದ ಶೀತ ಮತ್ತು ಕೆಮ್ಮು ನಿವಾರಣೆಯಾಗುತ್ತದೆ. ಅವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು…

11 hours ago

ಈ ರಾಶಿಯವರಿಗೆ ಆಸ್ತಿ ಹೂಡಿಕೆಗಾಗಿ ಶುಭದಿನ, ಸಂಗಾತಿ ಜೊತೆ ಟ್ರಿಪ್ ಸಕ್ಸಸ್

ಈ ರಾಶಿಯವರಿಗೆ ಆಸ್ತಿ ಹೂಡಿಕೆಗಾಗಿ ಶುಭದಿನ, ಸಂಗಾತಿ ಜೊತೆ ಟ್ರಿಪ್ ಸಕ್ಸಸ್, ಈ ರಾಶಿಯವರಿಗೆ ಏಕಾಏಕಿ ಮದುವೆಯ ಸಂದೇಶ, ಭಾನುವಾರದ…

12 hours ago

ಕಂದಾಚಾರ, ಮೂಢನಂಬಿಕೆಗಳ ನಿರ್ಮೂಲನೆಗೆ ಶ್ರಮಿಸಿದವರು ಮಡಿವಾಳ ಮಾಚಿದೇವ : ಎಡಿಸಿ ಬಿ.ಟಿ.ಕುಮಾರಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

1 day ago