ಟೊಮೋಟೋ ಬೆಲೆ ಕುಸಿತ.. ಬೆಳೆ ನಾಶ ಮಾಡಿದ ಕೋಲಾರದ ರೈತ..!

 

ಕೋಲಾರ: ವ್ಯವಸಾಯ ಮಾಡುವ ರೈತರು ಯಾವ ಕಾಲಕ್ಕೆ ಯಾವ ಬೆಳೆಯನ್ನು ಬೆಳೆದರೆ ಲಾಭ ಬರುತ್ತೆ ಎಂದು ಯೋಚಿಸಿಯೇ ಬೆಳೆ ಹಾಕುತ್ತಾರೆ. ಆದರೆ ಬೆಳೆ ಕೈಗೆ ಬಂದು ಇನ್ನೇನು ಲಾಭ ಬರಬೇಕು ಎನ್ನುವಷ್ಟರಲ್ಲಿ ಬೆಳೆಯ ಬೆಲೆ ಕುಸಿತವಾದರೆ ರೈತನ ಮನಸ್ಥಿತಿ, ಪರಿಸ್ಥಿತಿ ಏನಾಗಬೇಡ. ಕೋಲಾರದ ರೈತರ ಪರಿಸ್ಥಿತಿಯೂ ಈಗ ಮರುಗುವಂತಾಗಿದೆ.

ಕೋಲಾರ ಜಿಲ್ಲೆಯಲ್ಲಿ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟೊಮೋಟೋ ಬೆಳೆದಿದ್ದಾರೆ. ಎರಡೂವರೆ ಎಕರೆಯಲ್ಲಿ ಸುಮಾರು ಐದು ಲಕ್ಷ ಹಣ ಖರ್ಚು ಮಾಡಿ ಬೆಳೆ ಬೆಳದಿದ್ದ ರೈತ, ಇದೀಗ ತನ್ನ ಕೈಯ್ಯಾರೆ ತಾನೇ ಬೆಳಯನ್ನು ನಾಶ ಮಾಡಿದ್ದಾನೆ. ಟೊಮೋಟೋ ಬೆಳೆಯನ್ನು ಬುಡ ಸಮೇತ ಕಿತ್ತು ಬಿಸಾಕಿದ್ದಾರೆ.

ಬೆಳೆ ಬೆಳೆದಾಗ ಟೊಮೋಟೋ ಬೆಲೆ ತುಂಬಾ ಚೆನ್ನಾಗಿಯೇ ಇತ್ತು. ಇದೀಗ ಬೆಲೆ ಸಾಕಷ್ಟು ಕುಸಿತವಾಗಿದೆ. ಇದರಿಂದ ರೈತರು ಕಂಗಲಾಗಿದ್ದು, ಈ ನಿರ್ಧಾರಕ್ಕೆ ಬಂದಿದ್ದಾರೆ. ಬೆಳೆ ಬೆಳೆದಾಗ 15 ಕೆಜಿಯ ಒಂದು ಬಾಕ್ಸಿಗೆ ಎರಡು ಸಾವಿರ ರೂಪಾಯಿ ಇತ್ತು. ಆದರೆ ಈಗ ದಿಢೀರನೇ ಕುಸಿದಿದೆ. ಹೀಗಾಗಿ ಕೋಪಗೊಂಡ ರೈತ ಟೊಮೋಟೋ ಬೆಳೆಯನ್ನು ನಾಶ ಮಾಡಿದ್ದಾರೆ.

suddionenews

Recent Posts

ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ಒಣದ್ರಾಕ್ಷಿ ಅನೇಕ ಪೋಷಕಾಂಶಗಳನ್ನು ಮತ್ತು ಔಷಧೀಯ ಗುಣಗಳನ್ನು ಹೊಂದಿವೆ. ಅವುಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.…

54 minutes ago

ಈ ರಾಶಿಯ ನವದಂಪತಿಗಳು ಹೊಂದಿಕೊಳ್ಳುವುದೇ ಕಷ್ಟ

ಈ ರಾಶಿಯವರ ಮಧ್ಯವರ್ತಿಗಳ ಆದಾಯ ಚೇತರಿಕೆ, ಈ ರಾಶಿಯ ನವದಂಪತಿಗಳು ಹೊಂದಿಕೊಳ್ಳುವುದೇ ಕಷ್ಟ, ಗುರುವಾರದ ರಾಶಿಭವಿಷ್ಯ 17 ಏಪ್ರಿಲ್ 2025…

2 hours ago

ಬೆಲೆಯೇರಿಕೆಯಾಗಲು ಕೇಂದ್ರದ ಬಿಜೆಪಿ ಸರ್ಕಾರ ಕಾರಣ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೀದರ್,(ಏಪ್ರಿಲ್ 16): ಗ್ಯಾರಂಟಿಗಳನ್ನು ಜಾರಿ ಮಾಡಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು…

10 hours ago

ಹೊಳಲ್ಕೆರೆ : ಶ್ರೀ ಹರಿಮತಿ ಚೌಡೇಶ್ವರಿ ಅಮ್ಮನವರ  ಜಾತ್ರೆ ಸಂಪನ್ನ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಏ. 16 : ಹೊಳಲ್ಕೆರೆ…

13 hours ago

ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

ಚಿತ್ರದುರ್ಗ. ಏ.16: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಯಿಂದಾಗಿ ಹಾನಿಗೊಳಗಾದ ಬೆಳೆಹಾನಿ ಪ್ರದೇಶಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ…

13 hours ago

ಹಜ್ ಯಾತ್ರಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಲಸಿಕಾಕರಣ

ಚಿತ್ರದುರ್ಗ. ಏ.16: ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ, ಹಜ್ ಸಮಿತಿ ಸಹಯೋಗದೊಂದಿಗೆ ಬುಧವಾರ ನಗರದ ಎಂ.ಕೆ.ಪ್ಯಾಲೇಸ್ ಸಭಾಂಗಣದಲ್ಲಿ ಜಿಲ್ಲೆಯ 99…

14 hours ago