ಈಡಿಗ ಬಿಲ್ಲವ ನಾಮಧಾರಿಗಳ ಬೇಡಿಕೆ ಈಡೇರಿಕೆಗಾಗಿ ಡಿಸೆಂಬರ್ 10 ರಂದು ಶ್ರೀಗಳ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿ. 01 :  ಈಡಿಗ ಬಿಲ್ಲವ ನಾಮಧಾರಿಗಳ ಬೇಡಿಕೆ ಈಡೇರಿಕೆಗಾಗಿ ಡಿ.10 ರಂದು ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಗಂಗಾವತಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಕರದಾಳ್ ರಾಷ್ಟ್ರೀಯ ಈಡಿಗ ಮಹಾಮಂಡಳಿ ಕರ್ನಾಟಕವತಿಯಿಂದ ರಾಜ್ಯ ಸರ್ಕಾರದ ಮುಂದೆ ಹÀಲವಾರು ಬೇಡಿಕೆಯನ್ನು ಇಡಲಾಗಿದೆ. ಇವುಗಳ ಈಡೇರಿಕೆಗಾಗಿ ಡಿ.10 ರಂದು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಜನಾಂಗದ ಮುಖಂಡರು ಭಾಗವಹಿಸಲಿದ್ದಾರೆ.

ಹಿಂದಿನ ಸರ್ಕಾರ ಘೋಷಣೆ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ಅಭಿವೃದ್ಧಿ ನಿಮಗಕ್ಕೆ  ಕೂಡಲೇ 500 ಕೋಟಿ ರೂಗಳನ್ನು ಬಿಡುಗಡೆ ಮಾಡಬೇಕು,  ಹಿಂದಿನ ಸರ್ಕಾರ ಈಡಿಗ ಸಮಾಜದ ಕುಲಶಾಸ್ತ್ರ ಅಧ್ಯಾಯನಕ್ಕಾಗಿ ಘೋಷಣೆ ಮಾಡಿದ 25 ಲಕ್ಷಗಳನ್ನು ಉಪಯೋಗಿಸಿ ಕೂಡಲೇ ಕುಲಶಾಸ್ತ್ರ ಅಧ್ಯಯನವನ್ನು ಮುಗಿಸಿ ನಮ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಕ್ಕಾಗಿ (S.ಖಿ) ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಕುಲಕಸುಬು ಕಳೆದುಕೊಂಡ ಈ ಸಮಾಜಕ್ಕೆ (ಉತ್ತರ ಕಲ್ಯಾಣ ಕರ್ನಾಟಕ ಭಾಗ) ಮರಳಿ ಕಸುಬು ನೀಡುವುದು  ಇಲ್ಲವಾದಲ್ಲಿ ಕಸುಬು ಕಳೆದುಕೊಂಡ ಪ್ರತಿ ಕುಟುಂಬಕ್ಕೂ ಎರಡು ಎಕರೆ ಜಮೀನನ್ನು ಮಂಜೂರು ಮಾಡಬೇಕು, ರಾಜ್ಯದಲ್ಲಿ ಈಡಿಗ ಬಿಲ್ಲವ ನಾಮಧಾರಿ ದೀವರ  ಸಮಾಜದಲ್ಲಿ ಅತಿ ನಿರ್ಗತಿಕರಿಗೆ ಮನೆ ಹಾಗೂ ನಿವೇಶನಗಳಿಲ್ಲದ ಕುಟುಂಬಗಳಿಗೆ ಯಾವುದಾದರೂ ಯೋಜನೆ ಅಡಿಯಲ್ಲಿ  25,000 ಮನೆಗಳನ್ನು  ಕೂಡಲೆ ಮಂಜೂರು ಮಾಡಿ ನೀಡಬೇಕು ಎಂದು ಆಗ್ರಹಿಸಲಾಯಿತು.

ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ತಳಿಯನ್ನು ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರದ ವಿಧಾನಸೌಧದ ಮುಂಭಾಗದಲ್ಲಿ ಮತ್ತು ರಾಜ್ಯದ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಬೇಕು, ನಮ್ಮ ಸಮುದಾಯದ  ಶರಣರಾಗಿರುವ ಶ್ರೀ ಹೆಂಡದ ಮಾರಯ್ಯನ ಜಯಂತಿ ಸರ್ಕಾರ ಆಚರಿಸುವುದು. ಶಿವಮೊಗ್ಗ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ  ಸಾವಿರಾರು ಎಕರೆ ಇರುವ  ಕೆರೆಗೆ ದಿವಂಗತ ಬಂಗಾರಪ್ಪನವರ ಹೆಸರು ನೀಡಿ ಗೌರವ ಸಲ್ಲಿಸುವುದು.ಈಡಿಗ ಬಿಲ್ಲವ ನಾಮಧಾರಿ ದೀವರ ಸಮಾಜದ  ಮಹಿಳೆಯರ ಸ್ವಯಂ ಉದ್ಯೋಗಕ್ಕಾಗಿ  ಶೂನ್ಯ ಬಡ್ಡಿಯಲ್ಲಿ ಸರ್ಕಾರದಿಂದ  ಸಾಲ ನೀಡುವಂತೆ ಒತ್ತಾಯಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಯುವಕರುಗಳಿಗೆ ಉನ್ನತ ಶಿಕ್ಷಣಕ್ಕಾಗಿ ಐಪಿಎಸ್ (IPS) ಐಎಎಸ್ (IಂS) ಸರ್ಕಾರದಿಂದ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು, ಮಂಗಳೂರು ಉಡುಪಿ ಶಿವಮೊಗ್ಗ  ಜಿಲ್ಲೆಗಳಲ್ಲಿ ನಮ್ಮ ಸಮಾಜಕ್ಕೆ  ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆಯವರಿಗೂ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ನೀಡಬೇಕು, ಮಂಗಳೂರು ಜಿಲ್ಲೆಯ  ಶ್ರೀ ಕೋಟಿ ಚೆನ್ನಯ್ಯ ದೇವಸ್ಥಾನಕ್ಕೆ  2016ರಲ್ಲಿ ಘೋಷಣೆ ಮಾಡಿದ  ಸಂಪೂರ್ಣ ಹಣವನ್ನು ಕೂಡಲೆ ಬಿಡುಗಡೆ ಮಾಡಬೇಕು,ಸರ್ಕಾರಿ ಹುಲ್ಲುಗಾವಲು, ಗೋಮಾಳ,  ಜಮೀನುಗಳಲ್ಲಿ ಸರ್ಕಾರಿ ವೆಚ್ಚದಲ್ಲಿ ಈಚಲು ಮರಗಳನ್ನು ಬೆಳೆಸುವುದು. ಹಾಗೂ ನೀರ ಮಾರಾಟಕ್ಕಾಗಿ  ರಾಜ್ಯದ್ಯಂತರ ಒಂದು ನಿಗಮವನ್ನು ಸ್ಥಾಪಿಸುವುದು  ಹಾಗೂ ಮಂಗಳೂರು ಉಡುಪಿ ಜಿಲ್ಲೆಗಳಲ್ಲಿ  ಮುಂದುವರಿದ ಸೇಂದಿಯ ಕಸುಬನ್ನು ಸರಿಯಾದ ರೀತಿಯಲ್ಲಿ ಇಳಿಸಿ ಮಾರಾಟ ಮಾಡುವುದಕ್ಕೆ  ವ್ಯವಸ್ಥೆಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಯಿತು.

ಮಧ್ಯ ಮಾರಾಟದಲ್ಲಿ ನಮ್ಮ ಸಮಾಜಕ್ಕೆ ಶೇಕಡ 20 % ಮೀಸಲಾತಿ ನೀಡುವುದು. ನಮ್ಮ ಸಮಾಜದ ಅವಿದ್ಯವಂತರಾದ ಯುವ ಸಮೂಹಕ್ಕೆ ಸ್ವಯಂ ಉದ್ಯೋಗಕ್ಕಾಗಿ  ಯೋಜನೆಗಳನ್ನು ರೂಪಿಸಬೇಕಿದೆ. ಒಂದು ವೇಳೆ ಸರ್ಕಾರ ನಿರ್ಲಕ್ಷಿಸಿದ್ದಲ್ಲಿ ಡಿಸೆಂಬರ್ 10ನೇ ತಾರೀಕು ಗಂಗಾವತಿಯಲ್ಲಿ ನಡೆಯುವ ಉಪವಾಸ ಸತ್ಯಾಗ್ರಹದಲ್ಲಿ ಮುಂದಿನ ಉಗ್ರ ಹೋರಾಟದ ಬಗ್ಗೆ  ಸರ್ಕಾರಕ್ಕೆ ಎಚ್ಚರಿಕೆ  ನೀಡಲಾಯಿತು.

ಪತ್ರಿಕಾಗೋಷ್ಟಿಯಲ್ಲಿ  ಉಪಾಧ್ಯಕ್ಷರಾದ ಶ್ರೀನಿವಾಸ್ ರಮೇಶ್, ಸಂಘಟನಾ ಕಾರ್ಯದರ್ಶಿ ಮನು,  ಮಹಿಳಾ ಜಿಲ್ಲಾ ಅಧ್ಯಕ್ಷರು ಉಮಾದೇವಿ, ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಭಾಗವಹಿಸಿದ್ದರು

suddionenews

Recent Posts

ಯಾವ ವಯಸ್ಸಿನಿಂದ ಮಕ್ಕಳಿಗೆ ಚಹಾ ಅಥವಾ ಕಾಫಿಯನ್ನು ನೀಡಬಹುದು ? ಚಿಕ್ಕ ವಯಸ್ಸಿನಲ್ಲಿ ಕುಡಿಯುವುದು ಅಪಾಯಕಾರಿಯೇ ?

ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…

2 hours ago

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…

2 hours ago

ಫೈನಾನ್ಸ್ ಕಿರುಕುಳಕ್ಕೆ ದಾವಣಗೆರೆಯ ಶಿಕ್ಷಕಿ ಆತ್ಮಹತ್ಯೆ ಕೇಸ್ : ಉಲ್ಟಾ ಹೊಡೆದ ಪತಿ..!

ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…

11 hours ago

ಹುತಾತ್ಮರ ದಿನ : ಗಾಂಧೀಜಿಯವರಿಗೆ ಪುಷ್ಪ ನಮನ

ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…

12 hours ago

ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬಿಸಿಯೂಟ ಸವಿದ ಜಿ.ಪಂ ಸಿಇಒ

ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…

12 hours ago

ಮೈಕ್ರೋ ಫೈನಾನ್ಸ್ ಕಿರುಕುಳ ನೀಡಿದಲ್ಲಿ ಎಫ್.ಐ.ಆರ್ ದಾಖಲಿಸಿ : ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು  ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್‌ಐಆರ್…

12 hours ago