ತಿರುಮಲ: ತಿಮ್ಮಪ್ಪನ ಭಕ್ತರು ಇಡೀ ದೇಶಾದ್ಯಂತ ಇದ್ದಾರೆ. ಅವನ ದರ್ಶನಕ್ಕಾಗಿ ಕ್ಯೂನಲ್ಲಿ ಪ್ರತಿ ದಿನ ಸಹಸ್ರಾರು ಮಂದಿ ಹೋಗ್ತಾರೆ. ಕೈಲಾದ ಕಾಣಿಕೆ ಅರ್ಪಿಸಿ ಬರ್ತಾರೆ. ಎಷ್ಟೋ ಜನ ದೊಡ್ಡಮಟ್ಟದ ಹರಕೆಯನ್ನು ತಿಮ್ಮಪ್ಪನಿಗಾಗಿ ಹೊತ್ತಿರುತ್ತಾರೆ. ಇದೀಗ ಭಕ್ತನೊಬ್ಬ 3 ಕೋಟಿ ಮೌಲ್ಯದ ಚಿನ್ನಾಭರಣವನ್ನ ದೇವರಿಗಾಗಿ ನೀಡಿದ್ದಾನೆ.

https://twitter.com/Ashi_IndiaToday/status/1469281283595390980?t=r82m9XZP7RoTYbZzSFhCTw&s=19

ಪ್ರಪಂಚದಲ್ಲೇ ಅತಿ ಶ್ರೀಮಂತ ದೇವರು ಅಂದ್ರೆ ತಿರುಪತಿ ತಿಮ್ಮಪ್ಪ ಅಂತ ಹೇಳಲಾಗುತ್ತೆ. ಏನೇ ಕೊರೊನಾ ಇರಲಿ, ಯಾವುದೇ ರೂಲ್ಸ್ ಇರಲಿ ತಿಮ್ಮಪ್ಪ ಭಕ್ತಾಧಿಗಳ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ.

ಸದ್ಯ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಹೊಸ ನಿಯಮಗಳನ್ನ ಹೇರಲಾಗಿದೆ. ಇದರ ನಡುವೆಯೂ ತಿಮ್ಮಪ್ಪನ ದರ್ಶನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹುಂಡಿಕೆ ಹಣ, ಚಿನ್ನ, ಬೆಳ್ಳಿಯಂತ ವಸ್ತುಗಳನ್ನ ಭಕ್ತಿಯಿಂದ ಸಮರ್ಪಿಸುತ್ತಿದ್ದಾರೆ. ಇದೀಗ ಅನಾಮಧೇಯ ಭಕ್ತನಿಂದ ತಿಮ್ಮಪ್ಪನಿಗೆ 3 ಕೋಟಿ ಮೌಲ್ಯದ ಚಿನ್ನಾಭರಣ ನೀಡಿದ್ದಾನೆ.

