ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಜೊತೆಗೆ ಪಕ್ಷದಲ್ಲಿ ಟಿಕೆಟ್ ಹಂಚಿಕೆಯೂ ಮಹತ್ವ ಪಡೆದಿದೆ. ಈ ಬಾರಿ ಕಾಂಗ್ರೆಸ್ ನಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಶಸ್ತ್ಯ ಎನ್ನಲಾಗುತ್ತಿತ್ತು. ಪ್ರಿಯಾಂಕ ಗಾಂಧಿ ಕೂಡ ಪ್ರಚಾರ ನಡೆಸುವಾಗ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದರು. ಇದೀಗ ಕಾಂಗ್ರೆಸ್ ನಲ್ಲಿ ಆರು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಕಾಂಗ್ರೆಸ್ ನ ಮೊದಲ ಪಟ್ಟಿ ರಿಲೀಸ್ ಆಗಿದ್ದು, 124 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಿದೆ. ಅದರಲ್ಲಿ ಆರು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆಯಾಗಿದೆ. ಐದು ಹಾಲಿ ಶಾಸಕಿಯರು ಸೇರಿದಂತೆ ಕುಸುಮಾ ಹನುಂತರಾಯಪ್ಪ ಅವರಿಗೆ ಟಿಕೆಟ್ ಘೋಷಣೆಯಾಗಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್, ಖಾನಾಪುರ – ಡಾ. ಅಂಜಲಿ ಲಿಂಬಾಳ್ಕರ್, ಕಲಬುರಗಿ ಉತ್ತರ – ಕನೀಝ್ ಫಾತೀಮಾ, ಕೆಜಿಎಫ್ – ರೂಪಕಲಾ ಶಶಿಧರ್, ಜಯನಗರ – ಸೌಮ್ಯಾರೆಡ್ಡಿ, ರಾಜರಾಜೇಶ್ವರಿ ನಗರ – ಕುಸುಮಾಗೆ ಟಿಕೆಟ್ ಘೋಷಣೆಯಾಗಿದೆ. 2020ರಲ್ಲಿ ನಡೆದ ಉಚುನಾವಣೆಯಲ್ಲೂ ಕುಸುಮಾ ಹನುಮಂತರಾಯಪ್ಪ, ಮುನಿರತ್ನ ವಿರುದ್ಧ ಸ್ಪರ್ಧಿಸಿ, ಸೋಲು ಕಂಡಿದ್ದರು. ಇದೀಗ ಮತ್ತೆ ಅದೇ ಕ್ಷೇತ್ರದಲ್ಲಿ ಮತ್ತೆ ಅದೇ ಅಭ್ಯರ್ಥಿಯ ಎದುರಾಗಿ ಸ್ಪರ್ಧೆ ನಡೆಸುತ್ತಿದ್ದಾರೆ.
ಸುದ್ದಿಒನ್ :ಭಾರತದಲ್ಲಿ ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆ ಹೆಚ್ಚುತ್ತಿದೆ. ಹೆಚ್ಚಿನ ಸಂಖ್ಯೆಯ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಬಹಳ…
ಅಂತೂ ಇಂತೂ ಈ ರಾಶಿಯವರದು ಮದುವೆಯಾಯಿತು, ಈ ರಾಶಿಯವರಿಗೆ ಉದ್ಯೋಗದ ವರ್ಗಾವಣೆಯಿಂದ ಸಂತಸ, ಮಂಗಳವಾರದ ರಾಶಿ ಭವಿಷ್ಯ 25 ಫೆಬ್ರವರಿ…
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…