
ಬಳ್ಳಾರಿ: ರಾಬರ್ಟ್ ಸಿನಿಮಾದ ತೆಲುಗು ವರ್ಷನ್ ಗೆ ಧ್ವನಿ ನೀಡಿ, ಖ್ಯಾತಿ ಪಡೆದಿದ್ದ ಗಾಯಕಿ ಮಂಗ್ಲಿ ಕಾರಿಗೆ ಪುಂಡರು ಕಲ್ಲು ತೂರಿದ್ದಾರೆ. ಗಾಯಕಿ ಮಂಗ್ಲಿ ಆ ಸಮಯದಲ್ಲಿ ಕಾರಿನ ಒಳಗೆ ಇದ್ದರು. ಸದ್ಯ ಕಾರಿನ ಒಳಗಿದ್ದವರಿಗೆ ಯಾವುದೇ ಸಮಸ್ಯೆ ಆಗಿಲ್ಲ.
ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಳ್ಳಾರಿ ಉತ್ಸವ ನಡೆದಿದೆ. ಅದ್ದೂರಿ ಕಾರ್ಯಕ್ರಮಕ್ಕೆ ಸಿಂಗರ್ ಮಂಗ್ಲಿಯನ್ನು ಗೆಸ್ಟ್ ಆಗಿ ಕರೆದಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಮಂಗ್ಲಿ, ಹಾಡನ್ನು ಹಾಡಿ ನೆರೆದಿದ್ದ ಜನರನ್ನು ರಂಜಿಸಿದ್ದಾರೆ. ಮಂಗ್ಲಿ ಹಾಡಿಗೆ ಶಿಳ್ಳೆ, ಚಪ್ಪಾಳೆ ಸಿಕ್ಕಿದೆ.
ಆದರೆ ಹಾಡನ್ನೆಲ್ಲಾ ಹಾಡಿ ವೇದಿಕೆಯಿಂದ ಇಳಿಯುವಾಗ ನೂಕು ನುಗ್ಗಲಾಗಿದೆ. ಮಂಗ್ಲಿಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಅವರ ಮೇಕಪ್ ಟೆಂಟ್ ಗೂ ಪುಂಡರು ನುಗ್ಗಿದ್ದಾರೆ. ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು ಬಗ್ಗಿಲ್ಲ. ಬಳಿಕ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಾರಿನ ಗಾಜು ಪುಡಿ ಪುಡಿಯಾಗಿದೆ.

GIPHY App Key not set. Please check settings