ದಸರಾ ಪ್ರಯುಕ್ತ ಮೂರು ಯೋಜನೆ ಜಾರಿ: ಶಶಿಕಲಾ ಜೊಲ್ಲೆ

suddionenews
1 Min Read

 

 

ಬೆಂಗಳೂರು: ಅರ್ಚಕರ ಸಂಘದ ಜೊತೆ ಚರ್ಚಿಸಿದ್ದೇನೆ, ಅರ್ಚಕರು,ಸಿಬ್ಬಂದಿಗಳ ಹಲವು‌ ಬೇಡಿಕೆ ಇವೆ ದಸರಾ ಪ್ರಯುಕ್ತ ಮೂರು ಯೋಜನೆ ಜಾರಿ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಈ ವೇಳೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮುಜರಾಯಿ‌ಸಚಿವೆ ಶಶಿಕಲಾ ಜೊಲ್ಲೆ ಸುದ್ದಿಗೋಷ್ಠಿ

34563 ದೇಗುಲ ಇಲಾಖೆಗೆ ಬರುತ್ತವೆ. ಎ,ಬಿ,ಸಿ ಎಂದು ದೇಗುಲ ವಿಂಗಡಿಸಿದ್ದೇವೆ 25 ಲಕ್ಷಕ್ಕಿಂತ ಹೆಚ್ಚಿನ ಆದಾಯ ಎ- ಗ್ರೇಡ್ ಗೆ ಬರುತ್ತವೆ ಎಂದರು.

ಇಂತ 7 ದೇಗುಲಗಳು ರಾಜ್ಯದಲ್ಲಿವೆ
25 ಲಕ್ಷಕ್ಕಿಂತ ಕಡಿಮೆ ಆದಾಯದ ದೇಗುಲ 130 ಇವೆ. ಈ ದೇಗುಲಗಳು ಬಿ ಗ್ರೇಡ್ ಗೆ ಬರುತ್ತವೆ
3217 ದೇಗುಲ ಸಿ-ಗ್ರೇಡ್ ಗೆ ಬರುತ್ತವೆ. 1355 ಅರ್ಚಕರಿಗೆ ವೇತನ ಶ್ರೇಣಿ ಇದೆ. ಆರನೇ ವೇತನ ಶ್ರೇಣಿ ಅನ್ವಯ ಮಾಡುತ್ತೇವೆ
1034 ಅರ್ಚಕರಿಗೆ 6ನೇ ವೇತನ ಆಯೋಗ ಅನ್ವಯವಾಗಲಿದೆ
ವರ್ಷಕ್ಕೆ 20 ಕೋಟಿ ನಮಗೆ ವೆಚ್ಚ ಬರಲಿದೆ ಸಿಬ್ಬಂದಿಗೆ ಜ್ಯೋತಿ‌ಭೀಮಾ ಯೋಜನೆ ವಿಮೆ ತರಲಾಗಿದೆ ಎಂದರು.

ವಾರ್ಷಿಕ 330 ರೂಗಳ ವಿಮೆ ಇದಾಗಿದೆ, ವಿಮೆಯ ಕಂತನ್ನ ಇಲಾಖೆಯೇ ತುಂಬಲಿದೆ ವಾರ್ಷಿಕವಾಗಿ 1 ಕೋಟಿ 22 ಲಕ್ಷ ಖರ್ಚು ಬರಲಿದೆ. ಜೊತೆಗೆ ದೇಗುಲಗಳ ಸೇವೆಯ ಮಾಹಿತಿ ಲಭ್ಯವಿದೆ. ಎಲ್ಲಾ ಮಾಹಿತಿಯನ್ನ ಪಡೆಯಲು ತಂತ್ರಾಂಶ ತರುತ್ತಿದ್ದೇವೆ.
ನವೆಂಬರ್ ಒಳಗೆ ತಂತ್ರಾಂಶ ರೆಡಿಯಾಗಲಿದೆ,ಪ್ರವಾಸೋದ್ಯಮಕ್ಕೆ ಇದು ನೆರವಾಗಲಿದೆ ದೇಗುಲದ ಆಸ್ತಿಯೂ ಈ ತಂತ್ರಾಂಶ ಸೇರಲಿದೆ
ಪಾರದರ್ಶಕವಾಗಿ ಇದು ಜಾರಿಯಾಗಲಿದೆ.ಹಳೆಯ ದೇಗುಲ,ಪುರಾತನ ದೇಗುಲಗಳಿವೆ
ದೇಗುಲಗಳ ಗರ್ಭಗುಡಿಯಲ್ಲಿ ಗಾಳಿ,ಬೆಳಕಿನ‌ವ್ಯವಸ್ಥೆಯಿಲ್ಲ
ದೂಪ ದೀಪದ ಅಲರ್ಜಿಯಾಗ ಬಾರದು ಹೀಗಾಗಿ ವಿಮೆ ಯೋಜನೆ ತರುತ್ತಿದ್ದೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *