Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಳೆಯ ಪರಿಣಾಮ ಮನೆ ಗೋಡೆ ಕುಸಿತ : ಬಂಟ್ವಾಳದಲ್ಲಿ ಮೂವರು ಸಾವು..!

Facebook
Twitter
Telegram
WhatsApp

 

ದಕ್ಷಿಣ ಕನ್ನಡ: ಮುಂಗಾರು ಮಳೆಯ ಅಬ್ಬರ ಆರಂಭದಿಂದಲೇ ಹೆಚ್ಚಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಂತು ಬೆಂಬಿಡದೆ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳೆಲ್ಲಾ ಕೆರೆಯಂತಾಗಿದೆ. ಇದೀಗ ಮಳೆಯ ಪರಿಣಾಮದಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಮಳೆ ಸುರಿಯುತ್ತಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ವಗ್ಗ ಎಂಬಲ್ಲಿ ಮನೆಯೊಂದೆ ಗೋಡೆ ಕುಸಿದಿದೆ. ಇದರ ಪರಿಣಾಮ ಮನೆಯಲ್ಲಿದ್ದ 45 ವರ್ಷದ ಬಿಜು ಪಾಲಾಕ್ಕಡ್, 46 ವರ್ಷದ ಸಂತೋಷ್ ಆಲಪ್ಪುಳ, 46 ವರ್ಷದ ಬಾಬು ಕೊಟ್ಟಾಯಂ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಕೇರಳ ಮೂಲದವರೆಂದು ಗುರುತಿಸಲಾಗಿದೆ.

ಮೃತರು ಕೇರಳದಿಂದ ಹೆನ್ರಿ ಎಂಬುವವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸಕ್ಕೆ ಬಂದಿದ್ದ ಆ ಮೂವರು ತೋಟದ ಪಕ್ಕದಲ್ಲಿಯೇ ವಾಸವಿದ್ದರು. ಆದರೆ ನಿನ್ನೆ ಸುರಿದ ಬಾರೀ ಮಳೆಗೆ ಗುಡ್ಡ ಕುಸಿದು ಈ ದುರ್ಘಟನೆ ನಡೆದಿದೆ.

ರಾಜ್ಯದಲ್ಲಿ ಬಾರೀ ಮಳೆಯಾಗುತ್ತಿರುವ ಕಾರಣ ಹವಮಾನ ಇಲಾಖೆ ಕೂಡ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಹಾಗೂ ಉಡುಪಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.‌ ಹೀಗಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಕೊಡಗು ಜಿಲ್ಲೆಯಲ್ಲೂ ಸತತ ಐದನೇ ದಿನವೂ ಮಳೆ ಮುಂದುವರೆದಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಎಸ್ಐಟಿ ತನಿಖೆಗೆ : ಡಿಸಿಎಂ ಮಾತಿಗೆ ಅಭಿನಂದನೆ ಸಲ್ಲಿಸಿದ ಠೇವಣಿದಾರರು

ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಈ ಮೊದಲು ಸಾಕಷ್ಟು ಸದ್ದು ಮಾಡಿತ್ತು. ಇದೀಗ ಅದರ ತನಿಖೆಯನ್ನು ಎಸ್ಐಟಿಗೆ ವಹಿಸುತ್ತೇನೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದು

ಮೋದಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೀದರ್, ಏಪ್ರಿಲ್ 25: ಹುಬ್ಬಳಿಯ ನೇಹಾ ಹೀರೆಮಠ ಕೊಲೆ ಪ್ರಕರಣವನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಹಾಗೂ ಆರೋಪಿಗೆ ಘೋರ ಶಿಕ್ಷೆ ವಿಧಿಸಲು ಸಿಐಡಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು

ಅಬ್ಬಬ್ಬಾ.. ಐಫೋನ್ ಜಸ್ಟ್ 35 Thousand.. ಈ ಆಫರ್ ಎಂಡ್ ಆಗೋದು ಯಾವಾಗ..?

ಈಗಂತು ಯಾರ ಕೈನಲ್ಲಿ ನೋಡಿದರು ಐಫೋನ್ ಗಳದ್ದೇ ಹಬ್ಬ. ಹಣ ಜಾಸ್ತಿ ಆದ್ರೂ ಐಫೋನ್ ಇರಲೇಬೇಕು ಅಂತಾರೆ. ಅದರಲ್ಲೂ ಐಫೋನ್ ತರಹೇವಾರಿ ಮಾಡೆಲ್ ಗಳನ್ನ ರಿಲೀಸ್ ಮಾಡ್ತಾ ಇರುತ್ತೆ. ಆದ್ರೆ ಐಫೋನ್ ಪ್ರಿಯರಿಗಾಗಿಯೇ ಬಿಗ್ಗೆಸ್ಟ್

error: Content is protected !!