in

ನಾಳೆಯಿಂದ ಮೂರು ದಿನಗಳ ಕಾಲ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ

suddione whatsapp group join

ಚಿತ್ರದುರ್ಗ, (ಮೇ.04): ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಬಿಜೆಪಿ ಕಾರ್ಯಕರ್ತರಿಗಾಗಿ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ನಡೆಸಲಾಗುವುದೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ.ಜಿಲ್ಲಾ ಮತ್ತು ತಾಲ್ಲೂಕು ಮಂಡಲದಿಂದ 20 ತಂಡಗಳು ಟೂನಿರ್ಯಯಲ್ಲಿ ಭಾಗವಹಿಸಲಿವೆ.

ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‍ಕುಮಾರ್ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರನ್ನು ಕ್ರೀಡೆಯಲ್ಲಿ ಪ್ರೋತ್ಸಾಹಿಸಿ ಪರಸ್ಪರ ಸ್ನೇಹ ಸೌಹಾರ್ದವನ್ನು ಬೆಳೆಸುವುದು ಟೂರ್ನಿಯ ಉದ್ದೇಶ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಬೂತ್ ಸಮಿತಿಯಲ್ಲಿ ವಿಸ್ತಾರಕ ಯೋಜನೆಗಳನ್ನು ಮಾಡಿದ್ದೇವೆ. 1502 ಬೂತ್‍ನಲ್ಲಿ ಈ ಕೆಲಸವಾಗಿದ್ದು, ದೈಹಿಕ ಹಾಗೂ ಮಾನಸಿಕವಾಗಿ ಕಾರ್ಯಕರ್ತರನ್ನು ಸದೃಢಗೊಳಿಸುವ ದೃಷ್ಟಿಯಿಂದ ಮೂರು ದಿನಗಳ ಕಾಲ ಹೊನಲು ಬೆಳಕಿನ ಟೆನ್ನಿಸ್‍ಬಾಲ್ ಕ್ರಿಕೆಟ್ ಟೂರ್ನಿಯನ್ನು ಏರ್ಪಡಿಸಲಾಗಿದೆ. ಬೂತ್ ಮಟ್ಟದ ಕಾರ್ಯಕರ್ತರು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. 20 ತಂಡಗಳ ಪೈಕಿ ನಾಲ್ಕು ಮಹಿಳಾ ತಂಡಗಳಿರುತ್ತವೆ ಎಂದರು.

ಯೂಟೂಬ್, ಫೇಸ್‍ಬುಕ್‍ನಲ್ಲಿಯೂ ಲೈವ್ ಪ್ರಸಾರವಾಗಲಿದೆ. ಮಹಾಶಕ್ತಿ ಕೇಂದ್ರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪಸರಿಸಲಾಗುವುದು. ಹದಿನೈದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಟೂರ್ನಿಯನ್ನು ವೀಕ್ಷಿಸಲಿದ್ದಾರೆ. ಎಲ್ಲರಿಗೂ ಊಟದ ವ್ಯವಸ್ಥೆಯಿರುತ್ತದೆ ಎಂದು ತಿಳಿಸಿದರು.

ಒಂದು ಲಕ್ಷ ಒಂದು ಸಾವಿರದ ನೂರ ಹನ್ನೊಂದು ರೂ. ಪ್ರಥಮ ಬಹುಮಾನ, 55 ಸಾವಿರದ 555 ರೂ. ದ್ವಿತೀಯ ಬಹುಮಾನ ನೀಡಲಾಗುವುದು. ನಮ್ಮ ಪಕ್ಷದ ಶಾಸಕರು, ಸಂಸದರುಗಳ ಜೊತೆ ಪ್ರಾಯೋಜಕರ ನೆರವಿನಿಂದ ಟೂರ್ನಿ ಆಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಸಿದ್ದಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ, ಉಪಾಧ್ಯಕ್ಷ ಕಲ್ಲೇಶಯ್ಯ, ಪ್ರಶಾಂತ್, ಭಾಸ್ಕರ್, ನಗರಸಭೆ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಮಕ್ಕಳು ಮಾನಸಿಕ, ದೈಹಿಕವಾಗಿ ಸಧೃಡವಾಗಿರಲು ಬೇಸಿಗೆ ಶಿಬಿರ ಅವಶ್ಯಕ : ಜಿ.ಪಂ ಸಿಇಒ ಡಾ.ನಂದಿನಿ ದೇವಿ

ಪಿಎಸ್ಐ ಹಗರಣದಲ್ಲಿ ಮಾಜಿ ಸಿಎಂ ಪುತ್ರ : ದೂರು ಕೊಟ್ಟವರು ಹೆಸರೇಳುತ್ತಿಲ್ಕ ಯಾಕೆ?