ಉಪ್ಪಿ ಹುಟ್ಟುಹಬ್ಬಕ್ಕೆ ಹೋಗಬೇಕು ಎನ್ನುವವರು ಈ ಗಿಫ್ಟ್ ನೀಡಲೇಬೇಕು : ಉಪ್ಪಿಗೆ ಇಷ್ವವಾದರೆ ರಿಟರ್ನ್ ಗಿಫ್ಟ್ ಕೂಡ ಇರುತ್ತೆ..!

1 Min Read

ಯಾವ ನಟ-ನಟಿಯರು ಅಭಿಮಾನಿಗಳಿಂದ ಯಾವ ಗಿಫ್ಟ್ ಅನ್ನು ನಿರೀಕ್ಷೆ ಮಾಡುವುದಿಲ್ಲ. ಹುಟ್ಟುಹಬ್ಬ ಎಂದಾಕ್ಷಣಾ ಅಭಿಮಾನಿಗಳೇ ಸಾಕಷ್ಟು ಖರ್ಚು ಮಾಡಿ, ಉಡುಗೊರೆ ನೀಡಿ, ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸುತ್ತಾರೆ. ಅವರ ಸಿನಿಮಾಗಳ ದಿನದಂದು ಅದ್ದೂರಿ ಸೆಲೆಬ್ರೇಷನ್ ಮಾಡುತ್ತಾರೆ. ಆದರೆ ಉಪೇಂದ್ರ ಕೊಂಚ ವಿಭಿನ್ನ. ಈ ಬಾರಿಯ ಹುಟ್ಟುಹಬ್ಬಕ್ಕೆ ಬರುವಾಗ ಈ ಗಿಫ್ಟ್ ನೀವೂ ತರಲೇಬೇಕು ಎಂದಿದ್ದಾರೆ. ಅದು ಅಂತಿಂತ ಗಿಫ್ಟ್ ಅಲ್ಲ. ಹಾಗೆ ನೋಡಿದರೆ ಆ ಗಿಫ್ಟ್ ದುಬಾರಿಯೇ ಇರುತ್ತದೆ. ನೀವೂ ಕೊಟ್ಟ ಗಿಫ್ಟ್ ಉಪ್ಪಿಗೆ ಇಷ್ಟವಾಗಿ ಬಿಟ್ಟರೆ ರಿಟರ್ನ್ ಗಿಫ್ಟ್ ಕೂಡ ಇರುತ್ತೆ.

ಇದೆ ತಿಂಗಳ 18ರಂದು ಉಪೇಂದ್ರ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷದಿಂದ ಉಪೇಂದ್ರ ಕೂಡ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಆದರೆ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಜೊತೆಗೆ ಅವರೇ ಎಲ್ಲಾ ಅಭಿಮಾನಿಗಳನ್ನು ಮನೆಗೆ ಆಹ್ವಾನ ಮಾಡಿದ್ದಾರೆ. ಜೊತೆಗೆ ಬರುವಾಗ ಸ್ಪೆಷಲ್ ಗಿಫ್ಟ್ ತರಲು ಹೇಳಿದ್ದಾರೆ.

ಗಿಫ್ಟ್ ಬಗ್ಗೆ ಉಪೇಂದ್ರ ಪೋಸ್ಟ್ ಹಾಕಿದ್ದು, ʻವಿಚಾರವಂತರಾಗೋಣಾ..? ಇದೇ ಸೆಪ್ಟೆಂಬರ್ 18 ಅಭಿಮಾನಿಗಳ ದಿನದಂದು ನಿಮ್ಮನ್ನು ನಮ್ಮ ಮನೆಯಲ್ಲಿ ಭೇಟಿಯಾಗುತ್ತೇನೆ. ಆ ದಿನ ಕೇಕ್, ಹೂಗುಚ್ಚ, ಗಿಫ್ಟ್ ಎಲ್ಲಾ ಬಿಟ್ಟು, ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರು ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ..? ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *