ಸುದ್ದಿಒನ್, ಕಾರ್ಕಳ, ಆಗಸ್ಟ್. 26 : ಬೆಳೆ ಫಸಲು ಕೊಡುವ ಮೊದಲು ಬರುವ ಕಸವನ್ನು ಕಿತ್ತು ಬಿಸಾಕುವಂತೆ ಭಾರತೀಯ ಸಂಸ್ಕೃತಿ ಹಾಗೂ ಪೂಜ್ಯನೀಯ ಸ್ತ್ರೀ ಕುಲದ ಮೇಲೆ ದಾಳಿ ಮಾಡುವವರನ್ನು ಕಿತ್ತು ಎಸೆಯುವ ಕೆಲಸವನ್ನು ಸರಕಾರ ಮಾಡಬೇಕಾಗಿದೆ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಕಾರ್ಕಳದಲ್ಲಿ ಭೋವಿ ಸಮುದಾಯದ ಯುವತಿಯ ಮೇಲೆ ಅನ್ಯಕೋಮಿನ ದುರುಳರು ನಡೆಸಿದ ಅತ್ಯಾಚಾರ ಖಂಡಿಸಿ, ಕರ್ನಾಟಕ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘ, ದ.ಕ ಮತ್ತು ಉಡುಪಿ, ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸಹಯೋಗದಲ್ಲಿ ನಡೆದ ಖಂಡನಾ ಮೆರವಣಿಗೆಯ ಬಳಿಕ ಮಂಜುನಾಥ್ ಪೈ ಸಭಾಂಗಣದಲ್ಲಿ ನಡೆದ ಬೃಹತ್ ಸಭೆ ಉದ್ದೇಶಿಸಿ ಸ್ವಾಮೀಜಿ ಮಾತನಾಡಿದರು.
ಭಾರತ ಜಗತ್ತಿನ ಸಂಸ್ಕಾರ, ಸಂಸ್ಕೃತಿಯ ರಾಯಭಾರಿ. ಇಂತಹ ಪರಂಪರೆ ಇರುವ ದೇಶದಲ್ಲಿ ಅತ್ಯಾಚಾರದ ಘಟನೆಗಳು ನಡೆಯುತ್ತಿರುವುದು ಮುಜುಗರಕ್ಕೀಡು ಮಾಡುತ್ತವೆ. ಮನೆಯಲ್ಲಿ ಸಂಸ್ಕಾರದ ಕೊರತೆಯಿಂದಾಗಿ ಈ ರೀತಿಯ ದುಷ್ಕೃತ್ಯಗಳು ನಡೆಯುತ್ತಿವೆ. ಆಧುನಿಕ ಕಾಲದಲ್ಲಿ ಭಯ ಮಾಯೆಯಾಗಿ ಭಕ್ತಿ ಯಾಂತ್ರಿಕವಾಗಿದೆ. ಹೀಗಾಗಿ ಸಮಾಜ ದಾರಿ ತಪ್ಪುತ್ತಿದೆ. ಇಂತಹ ದುಷ್ಕೃತ್ಯಗಳ ವಿರುದ್ಧ ಸರಕಾರ ಅತ್ಯಂತ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಾತಿ, ಧರ್ಮ ನೋಡದೆ ಮಾನವೀಯ ನೆಲೆಯಲ್ಲಿ ಹೆಣ್ಣು ಮಗಳ ಮೇಲಾದ ಅತ್ಯಾಚಾರದ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
ಚಾಮರಾಜನಗರ; ಮಲೆ ಮಹದೇಶ್ವರ ಸ್ವಾಮಿ ದೇವರಿಗೆ ಕೋಟ್ಯಾಂತರ ಭಕ್ತರಿದ್ದಾರೆ. ಭಕ್ತರಿಂದ ಮಲೆ ಮಹದೇಶ್ವರ ಸ್ವಾಮಿಗೆ ಕೋಟಿ ಕೋಟಿ ರೂಪಾಯಿ ಕಾಣಿಕೆ…
ಟಿವಿ9 ಸುದ್ದಿವಾಹಿನಿಯ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರನ್ನು ಗುರುತಿಸಿ ಅವರಿಗೆ ಹೆಮ್ಮೆಯ ಕನ್ನಡತಿ ಪ್ರಶಸ್ತಿ ನೀಡುತ್ತಿದ್ದಾರೆ. ಈ ಕಾರ್ಯಕ್ರಮ ಫೆಬ್ರವರಿ…
ಚಾಮರಾಜನಗರ; ಮಲೆ ಮಹದೇಶ್ವರ ಸ್ವಾಮಿ ದೇವರಿಗೆ ಕೋಟ್ಯಾಂತರ ಭಕ್ತರಿದ್ದಾರೆ. ಭಕ್ತರಿಂದ ಮಲೆ ಮಹದೇಶ್ವರ ಸ್ವಾಮಿಗೆ ಕೋಟಿ ಕೋಟಿ…
ಸುದ್ದಿಒನ್ : ಕೇಂದ್ರ ರಕ್ಷಣಾ ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ 47 ವರ್ಷದ ವಿಜ್ಞಾನಿಯೊಬ್ಬರು ಮೂರನೇ ಬಾರಿಗೆ ಅಪರೂಪದ, ಯಶಸ್ವಿ ಮೂತ್ರಪಿಂಡ…
ಸುದ್ದಿಒನ್ : ಕೊಬ್ಬರಿಯಲ್ಲಿ ಫೈಬರ್, ಐರನ್, ಮ್ಯಾಂಗನೀಸ್ ಮತ್ತು ತಾಮ್ರದಂತಹ ಅನೇಕ ಪ್ರಮುಖ ಖನಿಜಗಳಿವೆ. ಇವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು…
ಸುದ್ದಿಒನ್ IND vs BAN: 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ದುಬೈನಲ್ಲಿ ನಡೆದ ಪಂದ್ಯದಲ್ಲಿ…