ಬೆಳಗಾವಿ : ಕಡೆಗೂ ಈ ಬಾರಿಯ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ಫಿಕ್ಸ್ ಆಗಿದೆ. ಅಧಿವೇಶನಕ್ಕೆ ಈಗಾಗಲೇ ಸಿದ್ಧತೆ ನಡೆದಿದ್ದು, ಬಿಗಿ ಭದ್ರತೆ ಮಾಡಲಾಗಿದೆ. ಜೊತೆಗೆ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.
ಬೆಳಗಾವಿ ಅಧಿವೇಶನಕ್ಕೆ ಒಬ್ಬ ಆಯುಕ್ತರು ಸೇರಿದಂತೆ ಒಟ್ಟು ನಾಲ್ಕು ಸಾವಿರ ಪೊಲೀಸ್ ಸಿಬ್ಬಂದಿಯನ್ನ ಆಯೋಜನೆ ಮಾಡಲಾಗಿದೆ. ಪೊಲೀಸ್ ವ್ಯವಸ್ಥೆಗೆ ಜರ್ಮನ್ ಶೈಲಿಯಲ್ಲಿ ಟೌನ್ ಶಿಪ್ ನಿರ್ಮಾಣ ಕೂಡ ಮಾಡಲಾಗಿದೆ.
ಇನ್ನು ಅಧಿವೇಶನಕ್ಕೆ ಬರುವವರು ಕೊರೊನಾ ನಿಯಮ ಪಾಲನೆಮಾಡಲೇಬೇಕಾಗಿದೆ.ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಷ್ಟೇ ಅಲ್ಲ ಎರಡು ಡೋಸ್ ವ್ಯಾಕ್ಸಿನ್ ಆಗಿರಲೇಬೇಕು. RTPCR ಟೆಸ್ಟ್ ಕಡ್ಡಾಯವಾಗಿ ಮಾಡಿಸಿ 72 ಗಂಟೆಯ ನೆಗೆಟಿವ್ ವರದಿ ತರಬೇಕು ಎಂದಹ ಜಿಲ್ಲಾಡಳಿತ ಸೂಚನೆ ನೀಡಿದೆ.