Connect with us

Hi, what are you looking for?

ಪ್ರಮುಖ ಸುದ್ದಿ

ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಎಲಿಮಿನೇಟ್ ಆಗೋದಿಲ್ವಾ….! ಅಸಲಿ ಕಾರಣ ಇದೇ ನೋಡಿ….!

ಬಿಗ್ ಬಾಸ್ ಐದನೇ ವಾರದ ಆಟ ಶುರುವಾಗಿದೆ. ಈಗಾಗ್ಲೇ ಎರಡು ಟೀಂಗಳಾಗಿ ಈ ವಾರದ ಟಾಸ್ಕ್ ಶುರುವಾಗಿದೆ. ದಿವ್ಯಾ ಉರುಡುಗ ನೇತೃತ್ವದ ಒಂದು ಟೀಂ, ಶುಭಾ ಪೂಂಜಾ ನೇತೃತ್ವದ ಮತ್ತೊಂದು ಟೀಂ ನಡುವೆ ಟಾಸ್ಕ್ ಶುರುವಾಗಿದೆ. ಈ ಟೀಂಗಳ ಪೈಕಿ ಶುಭಾ ಪೂಂಜಾ ನೇತೃತ್ವದ ಜಾತ್ರೆ ಟೀಂ ಗೆಲವು ಸಾಧಿಸಿದ್ರೆ, ದಿವ್ಯಾ ಉರುಡುಗ ಅನುಬಂಧ ಟೀಂ ಸೋಲು ಅನುಭವಿಸಿದೆ. ಈ ನಡುವೆಯೇ ಬಿಗ್ ಬಾಸ್ ಈ ವಾರದ ನಾಮಿನೇಷನ್ ಪ್ರಕ್ರಿಯೆ ಆರಂಭಿಸಿದ್ದಾರೆ. ಅದರಂತೆ ಈ ವಾರ ಪ್ರಮುಖ ಆರು ಮಂದಿ ನಾಮಿನೇಷನ್ ತೂಗುಕತ್ತಿಯಲ್ಲಿ ಸಿಲುಕಿಕೊಂಡಿದ್ದಾರೆ. ಶಂಕರ್ ಅಶ್ವತ್ಥ್, ಶಮಂತ್, ನಿಧಿ, ಶುಭಾ, ಪ್ರಶಾಂತ್ ಸಂಬರ್ಗಿ, ಅರವಿಂದ್ ಕೆ.ಪಿ ಈ ವಾರದ ನಾಮಿನೇಟ್ ಆಗಿದ್ದಾರೆ.

ಕ್ಯಾಪ್ಟನ್ ವಿಶ್ವನಾಥ್ ಬಿಟ್ಟು ಉಳಿದ 12 ಮಂದಿಯಲ್ಲಿ ಯಾರು ಯಾರನ್ನಾದರೂ ನಾಮಿನೇಟ್ ಮಾಡುವಂತೆ ಬಿಗ್ ಬಾಸ್ ಆದೇಶ ನೀಡಿದ್ದರು. ಅದರಂತೆ ಶಂಕರ್ ಅಶ್ವತ್ಥ್ ಅವರನ್ನು ಆರು ಸ್ಪರ್ಧಿಗಳು ನಾಮಿನೇಟ್ ಮಾಡಿದ್ರೆ, ಪ್ರಶಾಂತ್ ಸಂಬರ್ಗಿ ಅವರನ್ನು ಮೂವರು ಸ್ಪರ್ಧಿಗಳು ನಾಮಿನೇಟ್ ಮಾಡಿದ್ರು. ಉಳಿದಂತೆ ನಿಧಿ, ಶುಭಾ,ಶಮಂತ್, ಅರವಿಂದ್ ಹಾಗೂ ದಿವ್ಯಾ ಸುರೇಶ್ ಕೂಡ ನಾಮಿನೇಟ್ ಆದರು. ಆದ್ರೆ ದಿವ್ಯಾ ಸುರೇಶ್ ಅವರನ್ನು ಕ್ಯಾಪ್ಟನ್ ತಮ್ಮ ವಿಶೇಷ ಅಧಿಕಾರ ಮೂಲಕ ನಾಮಿನೇಷನ್ ತೂಗುಕತ್ತಿಯಿಂದ ಬಚಾವ್ ಆದರು. ಆದರ ಉಳಿದ 6 ಮಂದಿ ಈ ವಾರದ ನಾಮಿನೇಷನ್ ಲಿಸ್ಟ್ ನಲ್ಲಿದ್ದಾರೆ.

ಆದ್ರೆ ಈ 6 ಮಂದಿಯಿಂದ ಯಾರು ಈ ವಾರ ಮನೆಯಿಂದ ಹೊರ ನಡೆಯುವುದಿಲ್ಲವೆಂಬ ಅನುಮಾನ ಶುರುವಾಗಿದೆ. ಪ್ರತಿ ವಾರ ನಾಮಿನೇಟ್ ಆಗುವ ಸ್ಪರ್ಧಿಗಳು ಮನೆಯಲ್ಲಿ ಉಳಿಯಬೇಕು ಎಂದರೆ ವೀಕ್ಷಕರ ವೋಟ್ ಮಾಡಬೇಕು. ಯಾರು ಹೆಚ್ಚು ವೋಟ್ ಪಡೆಯುತ್ತಾರೆ ಅವರು ಎಲಿಮಿನೇಷನ್ ನಿಂದ ಬಚಾವ್ ಆಗಿ ಮನೆಯಲ್ಲಿಯೇ ಉಳಿದುಕೊಳ್ಳುತ್ತಾರೆ. ಯಾರು ಕಡಿಮೆ ವೋಟ್ ಪಡೆಯುತ್ತಾರೋ ಅವರು ಬಿಗ್ ಮನೆಯಿಂದ ಹೊರ ನಡೆಯಬೇಕಾಗುತ್ತದೆ. ಆದ್ರೆ ಈ ವಾರ ಯಾವುದೇ ವೋಟಿಂಗ್ ಲೈನ್ ತೆರೆಯುವುದಿಲ್ಲವೆಂದು ಬಿಗ್ ಬಾಸ್ ಸೂಚನೆ ಕೊಟ್ಟಿದ್ದಾರೆ. ಹಾಗಿದ್ರೆ ಈ ವಾರದ ನಾಮಿನೇಷನ್ ಪ್ರಕ್ರಿಯೆ ನಡೆಸಿದಾದ್ರೂ ಯಾಕೆ ಬಿಗ್ ಬಾಸ್…? ವೀಕ್ಷಕರು ವೋಟ್ ಮಾಡದೆ ಇದ್ರೆ ಸ್ಪರ್ಧಿಗಳು ಮನೆಯಿಂದ ಹೊರಬರಲು ಸಾಧ್ಯನಾ…? ಹಾಗಿದ್ರೆ ಸುಮ್ಮನೇ ನಾಮಿನೇಷನ್ ಮಾಡಿ ಮನೆಯವರಿಗೆ ಟೆನ್ಷನ್ ಕೊಡ್ತಿದ್ದಾರಾ ಬಿಗ್ ಬಾಸ್..? ಯಾವುದಕ್ಕೂ ಈ ವಾರದ ವೀಕೆಂಡ್ ವಿತ್ ಸುದೀಪ ಸಂಚಿಕೆವರೆಗೂ ಕಾಯಲೇಬೇಕು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಕೊಡಗು: ಸದ್ಯ ಲಾಕ್ಡೌನ್ ನಿಂದಾಗಿ ಅದೆಷ್ಟೋ ಜನ ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥವರ ಸಹಾಯಕ್ಕಾಗಿ ಅದೆಷ್ಟೋ ಜನ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ಮಧ್ಯೆ ಅಲ್ಲೊಬ್ಬ ಯುವಕ ತನ್ನ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಬೆಂಗಳೂರು : ಸಂಚಾರಿ ವಿಜಯ್ ಅವರು ನಟನೆಯಲ್ಲಿ ಅದ್ಭುತ ನಟ ಅನ್ನೋದು ಎಲ್ಲರಿಗೂ ಗೊತ್ತು. ತನ್ನ ನಟನೆಯಿಂದಲೇ ಎಲ್ಲರ ಗಮನ ಸೆಳೆದ ನಟ. ತಾನೊಬ್ಬ ನಟ ಎಂಬ ಹಮ್ಮಿಗಿಂತ ತಾನೊಬ್ಬ ಕಲಾವಿದ ಎಂಬಂತೆ...

ಪ್ರಮುಖ ಸುದ್ದಿ

ಸುದ್ದಿಒನ್, ಬೆಂಗಳೂರು, (ಜೂ.15) : ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಕುರಿತು ಪರಿಶೀಲಿಸಿ ನಿರ್ಧಾರ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಪರೀಕ್ಷೆ ನಡೆಸದೆ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ರಾಜ್ಯ...

ಪ್ರಮುಖ ಸುದ್ದಿ

ಬೆಂಗಳೂರು: ಮೊದಲ ಹಂತದ ಅನ್ಲಾಕ್ ಶುರುವಾಗಿದ್ದು, ಬಿಬಿಎಂಪಿ ಆಟೋ ಚಾಲಕರಿಗೆ ಹೊಸ ರೂಲ್ಸ್ ತಂದಿದೆ. ಈ ರೂಲ್ಸ್ ಪ್ರಕಾರ ಆಟೋ ಡ್ರೈವರ್ ಗಳು ವ್ಯಾಕ್ಸಿನ್ ಹಾಕಿಸಿಕೊಳ್ಳದೆ ಇದ್ರೆ ಆಟೋ ಚಾಲನೆ ಮಾಡುವ ಹಾಗಿಲ್ಲ...

ಪ್ರಮುಖ ಸುದ್ದಿ

ಚಿಕ್ಕಮಗಳೂರು: ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿನ್ನೆ ನಿಧನರಾಗಿದ್ದರು. ಇಂದು ರವಿಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಇಂಡಸ್ಟ್ರಿಯಲ್ಲಿ ಎಲ್ಲರೊಟ್ಟಿಗೂ ಬೆರೆಯುತ್ತಿದ್ದ ನಟ....

ಪ್ರಮುಖ ಸುದ್ದಿ

ಇತರರು ತನಗೆ ಸ್ವಲ್ಪ ಕಷ್ಟ ಕೊಟ್ಟರೂ ಕ್ಷಮಾ ಗುಣವು ದೀರ್ಘಾಯಸ್ಸನ್ನು ಕೊಡುತ್ತದೆ. ಇದು ಹೇಗೆ ಸಾಧ್ಯ ಎಂದು ಅಂದುಕೊಳ್ಳುತ್ತಿರುವಿರಾ? ಈ ಮಾತಿಗೆ ಕೆಲವರು ವಿರೋಧವನ್ನು ವ್ಯಕ್ತಪಡಿಸುವವರೂ ಇರುವರು. ಯಾಕೆಂದರೆ ಅಂಥವರ ಪ್ರಕಾರವಾಗಿ ಇತರರ...

ದಿನ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ಜೂನ್-15,2021 ಮಿಥುನ ಸಂಕ್ರಾಂತಿ ಸೂರ್ಯೋದಯ: 05:52 AM, ಸೂರ್ಯಸ್ತ: 06:45 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಜ್ಯೇಷ್ಠ ಮಾಸ,ಉತ್ತರಾಯಣ, ವಸಂತ ಋತು,...

ಪ್ರಮುಖ ಸುದ್ದಿ

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 6835 ಹೊಸ ಪ್ರಕರಣ ಪತ್ತೆಯಾಗಿದೆ. 31828 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್, 117914 RTPCR ಟೆಸ್ಟ್ ಸೇರಿದಂತೆ ಒಟ್ಟು,...

error: Content is protected !!