ಬೆಂಗಳೂರು; ಯಡಿಯೂರಪ್ಪ ಕುಟುಂಬದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸದಾ ವಾಗ್ದಾಳಿ ನಡೆಸೋದು ಎಲ್ಲರಿಗೂ ಗೊತ್ತೆ ಇದೆ. ಆದರೆ ಯತ್ನಾಳ್ ವಿರುದ್ಧ ಗರಂ ಆಗಿದ್ದ ರೇಣುಕಾಚಾರ್ಯ ಇಂದು ಒಟ್ಟಾಗಿ ಕೆಲಸ ಮಾಡೋಣಾ ಬನ್ನಿ ಎಂದು ಮೃದುಧೋರಣೆ ತೋರುತ್ತಿದ್ದಾರೆ. ಈ ಬಗ್ಗೆ ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿದ್ದಾರೆ.
ಸಮಾಜ ಯಾರ ಆಸ್ತಿಯೂ ಅಲ್ಲ, ಯಾರ ಸ್ವತ್ತು ಅಲ್ಲ. ನಾವೂ ಸಂಘರ್ಷದ ಬಗ್ಗೆ ಮಾತಾಡೋಕೆ ರೆಡಿ ಇದ್ದೀವಿ. ಮಾಜಿ ಶಾಸಕರು, ಮುಖಂಡರು ಹತ್ತಾರು ಬಾರಿ ಸೇರಿದ್ದೆವು. ಯತ್ನಾಳ್ ಕೂಡ ನಮ್ಮ ಸಮುದಾಯದವರು. ಸಂಘರ್ಷ ಬೇಡ. ಹಾಗಂತ ರೇಣುಕಾಚಾರ್ಯ ಅವರು ಸಾಫ್ಟ್ ಆಗಲ್ಲ, ಬೆಂಡು ಆಗಲ್ಲ. ಙ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಈ ಸಮಾಜವನ್ನ ಒಟ್ಟಾಗಿ ಸಂಘಟನೆ ಮಾಡೋಣಾ.
ನನ್ನನ್ನು ಕೆಲವರು ಈ ಹಿಂದೆ ಒಂದು ರೀತಿ ದುರ್ಬಳಕೆ ಮಾಡಿಕೊಂಡಿದ್ದರು. ಯಡಿಯೂರಪ್ಪ ವಿರುದ್ಧ ಎತ್ತಿಕಟ್ಟಿದ್ದರು. ನಾನು ಆತ್ಮಾವಲೋಕನ ಮಾಡಿಕೊಂಡ ಮೇಲೆ ಸರಿ ಆದೆ. ರೆಸಾರ್ಟ್ ರಾಜಕಾರಣ ನಾನು ಹೋಗಿದ್ದಲ್ಲ. ಕೆಲವರು ಮಾಡಿಸಿದ್ದು. ಆಮೇಲೆ ಅದು ತಪ್ಪು ಅಂತ ಗೊತ್ತಾದ ಮೇಲೆ ಯಡಿಯೂರಪ್ಪ ಅವರ ಜೊತೆಗೆ ಗಟ್ಟಿಯಾಗಿ ನಿಂತುಕೊಂಡಿದ್ದೀವಿ. ಯತ್ನಾಳ್ ಅವರು ನಮ್ಮ ಸಮುದಾಯದ ಮುಖಂಡರೆ ಆಗಿರುವ ಕಾರಣ ಒಟ್ಟಾಗಿ ಹೋಗೋಣಾ ಅಂತ ಆಹ್ವಾನ ಕೊಡ್ತಾ ಇದ್ದೀವಿ. ಬೇರೆ ಬೇರೆ ನಿಲುವಿನಲ್ಲಿ ವ್ಯತ್ಯಾಸವಿರುತ್ತದೆ. ಸಮಾಜ ಎಂದು ಬಂದಾಗಿ ಒಟ್ಟಾಗಿ ಹೋರಾಡಬೇಕು. ಸಮಾಜ ಯಾರ ಸ್ವತ್ತು ಅಲ್ಲ. ಒಟ್ಟಾಗಿ ಎಲ್ಲರು ಹೋಗೋಣಾ ಎಂಬ ಸಂದೇಶವನ್ನ ಸಾರಿದ್ದಾರೆ.
ಬೆಂಗಳೂರು, ಮಾ. 14: ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ: ಕ್ಯಾಬಿನೆಟ್ ಉಪ ಸಮಿತಿ ವರದಿಯೇ ಇನ್ನೂ…
ಭಗವದ್ಗೀತೆಯಿಂದ ಕಲಿಯಬೇಕಾದ ವಿಷಯಗಳು ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಬಯಸುತ್ತಾನೆ. ಅದಕ್ಕಾಗಿ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದಾನೆ ಮತ್ತು ಶ್ರಮಿಸುತ್ತಾನೆ.…
ಈ ರಾಶಿಯವರಿಗೆ ಹಣಕಾಸಿನ ತೀವ್ರ ಅಡಚಣೆ, ಈ ರಾಶಿಯವರಿಗೆ ಕೆಲಸದಲ್ಲಿ ಅಭದ್ರತೆ, ಸಂಗಾತಿಯಿಂದ ಮೋಸ ಸಂಭವ, ಶುಕ್ರವಾರದ ರಾಶಿ ಭವಿಷ್ಯ…
ಸುದ್ದಿಒನ್, ಹಿರಿಯೂರು, ಮಾರ್ಚ್. 13 : ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಮಾ.13 :…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಮಾ.13 :…