in

ಹೆಚ್ಚು ಮಂದಿ ಶಾಸಕರು, ಸಂಸದರು ಇದ್ದರು ಬೆಳಗಾವಿಯಲ್ಲಿ ಗೆಲ್ಲಲಾಗಿಲ್ಲ : ಬಿಎಸ್ವೈ

suddione whatsapp group join

ಬೆಳಗಾವಿ: ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ನಿರೀಕ್ಷೆ ಇಟ್ಟಿದ್ದ ಬೆಪಲಗಾವಿ ಕ್ಷೇತ್ರದಲ್ಲೇ ಬಿಜೆಪಿ ಸೋಲು ಅನುಭವಿಸಿದೆ. ಈ ಸಂಬಂಧ ಮಾತನಾಡಿದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಸೋತ ಕಡೆ ಯಾರು ಕೆಲಸ ಮಾಡಿಲ್ಲ ಅಂತ ವಿಚಾರ ಮಾಡ್ತೇವೆ ಅಂತ ಹೇಳಿದ್ದಾರೆ.

ಮೈಸೂರು ಮತ್ತು ಬೆಳಗಾವಿಯಲ್ಲಿ ನಮಗೆ ಗೆಲುವಾಗುತ್ತೆ ಅಂತ ಭಾವಿಸಿದ್ದೆವು. ಆದ್ರೆ ಬೆಳಗಾವಿಯಲ್ಲಿ ಸೋಲಾಗಿದೆ. ಆ ಬಗ್ಗೆ ಸುದೀರ್ಘ ಚರ್ಚೆಯೂ ನಡೆಯುತ್ತಿದೆ. ಆ ಜಿಲ್ಲೆಯಲ್ಲೇ ಹೆಚ್ಚು ಮಂದಿ ಶಾಸಕರು, ಸಂಸದರು ಇದ್ದರು ಗೆಲ್ಲಲಾಗಿಲ್ಲ. ಅಲ್ಲಿ ಏನಾಗಿದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಮುಖ್ಯಮಂತ್ರಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ ಎಂದಿದ್ದಾರೆ.

ಇನ್ನು ಸಚಿವ ಆರ್ ಅಶೋಕ್ ಮಾತನಾಡಿದ್ದು, ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಸೋತಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಕ್ಚೇತ್ರ ಗೆದ್ದಿದ್ದೇವೆ. ಲಖನ್ ಜಾರಕಿಹೊಳಿಯನ್ನ ಬಿಜೆಪಿಗೆ ಸೇರಿಸಿಕೊಳ್ಳುವುದು ಬಿಜೆಪಿಗೆ ಬಿಟ್ಟಿದ್ದು ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಕಷ್ಟದ ದಿನದಲ್ಲಿ ಅದ್ಧೂರಿ ಆಚರಣೆ ಬೇಡ : ಹುಟ್ಟುಹಬ್ಬ ಆಚರಿಸದಿರಲು ಕುಮಾರಸ್ವಾಮಿ ನಿರ್ಧಾರ

ಸಾವು-ಬದುಕಿನ ಹೋರಾಟ ನಡೆಸುತ್ತಿದ್ದ ಗ್ರೂಪ್ ಕ್ಯಾಪ್ಟನ್ ನಿಧನ..!