ಸಾಹಿತ್ಯ ಕ್ಷೇತ್ರದಲ್ಲಿ ಉದ್ದಟತನ ಮತ್ತು ಸಿನಿಕತನ ಇರಬಾರದು : ಡಾ.ಬರಗೂರು ರಾಮಚಂದ್ರಪ್ಪ

 

ಸುದ್ದಿಒನ್, ಬೆಂಗಳೂರು,ಡಿಸೆಂಬರ್. 29 : ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಮಾಡುವವರಿಗೆ ಉದ್ದಟತನ ಮತ್ತು ಸಿನಿಕತನ ಇರಬಾರದು ಇದರಿಂದ ಸೃಜಶೀಲ ಸಾಹಿತ್ಯ ಹಾದಿತಪ್ಪುತ್ತದೆ ಎಂದು ನಾಡೋಜ,ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ಪಟ್ಟರು.

ಬೆಂಗಳೂರಿನಲ್ಲಿ ಶನಿವಾರ ಪತ್ರಕರ್ತ ತುರುವನೂರು ಮಂಜುನಾಥ ಅವರ ‘ಮೊಳಕೆ ಕೃತಿಯನ್ನು ಬಿಡಗಡೆಗೊಳಿಸಿ ಮಾತನಾಡಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ವಿನಮ್ರತೆಯಿಂದ ವಿಷಯ ಮತ್ತು ವಿಮರ್ಶೆಗಳ ಮಂಡನೆಯಿಂದ ಬರಹಗಾರ ಮೌಲಿಕ ಗುಣಗಳು ಪ್ರಮುಖ ಪಾತ್ರ ವಹಿಸುತ್ತಾನೆ. ಆ ನಿಟ್ಟಿನಲ್ಲಿ ವಿನಮ್ರತೆಯಿಂದಲೇ ತುರುವನೂರು ಮಂಜುನಾಥ ಈ ಕೃತಿಯಲ್ಲಿ ವಿಷಯಮಂಡನೆ ಮಾಡುವ ಮೂಲಕ ಜನರಿಗೆ ನೇರವಾಗಿ ತಲುಪುವ ಪ್ರಮುಖ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟರು.

ಸಾಹಿತ್ಯ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಂವಾದ ಸಂಸ್ಕೃತಿ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಹಿಂದಿನ ಸಾಹಿತಿಗಳ ನಡುವೆ ಸಾಹಿತ್ಯ ಸಂವಾದಗಳು ನಡೆಯುತ್ತಿದ್ದ ಕಾರಣ ಗುಣಮಟ್ಟದ ಸಾಹಿತ್ಯ ರಚನೆಯಾಗುತ್ತಿದ್ದವು ಆದರೆ ಇತ್ತೀಚಿನ ದಿನಗಳ ಅಂತ ವಾತಾವರಣ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಮೊಳಕೆ ಕೃತಿ ಯಾವುದೆ ವೈಚಾರಿಕ ಪಂಥಕ್ಕೆ ಸೇರದೆ ಉತ್ತಮವಾದದನ್ನು ಆಯ್ಕೆಮಾಡಿಕೊಳ್ಳಬೇಕು ಎನ್ನುವ ದೃಷ್ಟಿಯಲ್ಲಿ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಆ ನಿಟ್ಟಿನಲ್ಲಿ ಜನಪರತೆಯ ಹಾದಿಯಲ್ಲಿ ಈ ಕೃತಿ ಗೆಲ್ಲುತ್ತದೆ ಎಂದು ವಿಶ್ಲೇಷಿಸಿದರು.

ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ ಕುರಿತು ಪರಿಚಯಿಸಿರುವ ಅವರು ಉತ್ತಮ ವಿಮರ್ಶೆಯೊಂದನ್ನು ಮಂಡಿಸಿದ್ದಾರೆ ಹಾಗೆಯೇ ಗದ್ದರ್ ಕುರಿತಂತ,ಅವರ ಹೋರಾಟ ಮತ್ತು ಕೊನೆಕಾಲದ ಕುರಿತು ಅವರ ಜೀವಂತಿಕೆಯನ್ನು ಪ್ರಸ್ತಾಪ ಮಾಡಿದ್ದಾರೆ. ವ್ಯಕ್ತಿಚಿತ್ರಗಳಲ್ಲಿ ಉತ್ತಮವಾದದ್ದನ್ನು ಮಾತ್ರ ಆಯ್ಕೆಮಾಡಿಕೊಂಡು ಜನರಿಗೆ ತಲುಪಿಸುವ ಕೆಲಸ ಮಂಜುನಾಥ್ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಈ ಕೃತಿಯಲ್ಲಿ ಮಂಜುನಾಥ ಅಂತರಾಳದ ಭಾವಗಳ ಕುರಿತು ಬರೆದಿರುವ ಕಾರಣ ಎದೆಗೆ ಬಿದ್ದ ಆ ಕ್ಷಣದ ಅಕ್ಷರಗಳ ಮತ್ತು ವಿಷಯಗಳನ್ನು ಉತ್ತಮವಾಗಿ ಪ್ರಸ್ತಾಪಿಸುವು ಮೂಲಕ ಒಂದು ವೈಚಾರಿಕ ಮನೋಭವಾದ ಹಿನ್ನಲೆಯಲ್ಲಿ ಬರದ ಕಾರಣ ಎಲ್ಲವೂ ಜನಪರ ಮತ್ತು ಜೀವಂತಿಕೆಯನ್ನು ಪಡೆದಿವೆ ಎಂದು ಹೇಳಿದರು.

ಭಕ್ತಿ ಇರಬೇಕು ಆದರೆ ಫಂಥ ಸ್ಥಾಪಿದ ಧರ್ಮವ ಭಕ್ತಿಯ ಹೆಸರಿನಲ್ಲಿ ಮೂಡನಂಬಿಕೆ ಕಂದಾಚಾರಗಳನ್ನು ಸಮಾಜದಲ್ಲಿ ಹೇಗೆ ಶೋಷಣೆಗೊಳ್ಳುತ್ತದೆ ಎನ್ನವುದನ್ನು ಈ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ, ಭಕ್ತಿಯ ಮೂಲ ಆಶಯವನ್ನು ತಿಳಿಸಲು ಹೊರಟಿರುವುದು ಒಂದು ವೈಚಾರಿಕೆ ನೆಲಗಟ್ಟಿನ ಹಿನ್ನಲೆಯಲ್ಲಿ ಲ್ಲಿ ಇದು ಅತ್ಯಂತ ಮಹತ್ವ ಪಡೆಯುತ್ತಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಮತನಾಡಿ ಪತ್ರಕೋದ್ಯಮದಲ್ಲಿ ಇಂದು ಸತ್ಯ ಅಸತ್ಯವಾಗಿಹೋಗಿದೆ. ಸತ್ಯದ ಹೆಸರಿನಲ್ಲಿ ಸುಳ್ಳುಗಳನ್ನು ರಾರಾಜಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಈ ನಿಟ್ಟಿನಲ್ಲಿ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಇನ್ನೊಬ್ಬ ಹಿರಿಯ ಪ್ರತಕರ್ತ ಅನಂತ ಚಿನಿವಾರ ಮಾತನಾಡಿ ಇಂದು ಪತ್ರಕರ್ತನಾದವನಿಗೆ ಅಹಂ ಮತ್ತು ಸಿನಿಕತನ ಇರಬಾರದು ಅದರಿಂದ ಸುದ್ದಿಗಳ ಮೇಲೆ ಪರಿಣಾಮ ಬೀರುತ್ತವೆ ಹೀಗಾಗಿಯೇ ಇಂದು ಸುದ್ದಿಗಳ ಗುಣಮಟ್ಟ ಕಡಿಮೆಯಗುತ್ತಿದೆ ಎಂದು ವಿಷಾದಿಸಿದರು.

ಪತ್ರಕರ್ತರಾದವರ ಸ್ಥಿತಿ ಇಂದುಯ ಶೋಚನಿಯವಾಗಿದೆ ಸುದ್ದಿಮನೆಯ ಮಾಲೀಕ ಹೇಳಿದ ರೀತಿಯಲ್ಲಿ ಸುದ್ದಿಗಳನ್ನು ಸೃಷ್ಟಿಸುವುದರಿಂದ ಸತ್ಯ ಹೇಳಬೇಕಾದ ಸಂದರ್ಭದಲ್ಲಿ ಸುಳ್ಳುಗಳನ್ನು ಸೃಷ್ಟಿಯಾಗುತ್ತಿವೆ ಎಂದು ಹೇಳಿದರು ಇದರಿಂದ ಇಂದು ಮಾದ್ಯಮಗಳ ಮೇಲೆ ನಂಬಿಕೆಯಿಲ್ಲದಂತಾಗಿದೆ ಎಂದು ವಿಶ್ಲೇಷಿಸಿದರು.

ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ,ಪತ್ರಿಕೋದ್ಯಮದ ಸ್ಥಿತಿ ಶೋಚನೀಯ ವಾಗಿದೆ ಸೋಶಿಯಲ್ ಮೀಡಿಯಾ ಹಾವಳಿಯಿಂದ ಯಾರು ಪತ್ರಕರ್ತರು ಯಾರು ಅಲ್ಲ ಎನ್ನುವುದನ್ನು ಗುರುತಿಸಲು ಆಗದ ಸ್ಥಿತಿ ಬಂದೊದಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪತ್ರಿಕೆಗಳು ಒಂದು ಕಾಲದಲ್ಲಿ ಜಾಹೀರಾತು ಇಲ್ಲದೆ ಪ್ರಕಟವಾಗುತ್ತಿದ್ದವು ಆದರೆ ಈಗ ಜಾಹೀರಾತು ಇಲ್ಲದೆ ಪತ್ರಿಕೆಗಳು ನಡೆಯುವುದು ಕಷ್ಟವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಜಿ.ಎನ್,ಶಿವಮೂರ್ತಿ ಮತ್ತು ಮೊಳಕೆ ಕೃತಿಯ ಲೇಖಕ ಮತ್ತು ಪತ್ರಕರ್ತ ತುರುವನೂರು ಮಂಜುನಾಥ , ಹಿರಿಯ ಪತ್ರಕರ್ತ ಹನುಮೇಶ್ ಯಾವಗಲ್ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!