ಕಾಂಗ್ರೆಸ್ ನಲ್ಲಿ ಎರಡು ದಿಕ್ಕುಗಳಾಗಿವೆ, ಎರಡು ಕ್ಷೇತ್ರ ಗೆಲ್ಲುವ ವಿಶ್ವಾಸ ನಮಗಿದೆ : ಬಿ ಎಸ್ ಯಡಿಯೂರಪ್ಪ

suddionenews
1 Min Read

ಸುದ್ದಿಒನ್, ಚಿತ್ರದುರ್ಗ: ಇಂದು ಮಾಜಿ ಸಿಎಂ ಯಡಿಯೂರಪ್ಪ ಚಿತ್ರದುರ್ಗ ಪ್ರವಾಸದಲ್ಲಿದ್ದಾರೆ. ಉಪಚುನಾವಣಾ ಹಿನ್ನೆಲೆ ಎರಡು ದಿನ ಜಿಲ್ಲೆಯಲ್ಲೇ ಉಳಿದುಕೊಂಡು, ಪ್ರಚಾರ ಮಾಡಲಿದ್ದಾರೆ. ಭೇಟಿ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ನಗರದಲ್ಲಿಂದು ಶಾಸಕರ ಮನೆಗೆ ಭೇಟಿ ನೀಡಿ  ಮಾತನಾಡಿದ ಯಡಿಯೂರಪ್ಪನವರು, ಕಾಂಗ್ರೆಸ್ ನಲ್ಲಿ ಪರಸ್ಪರ ಕಚ್ಚಾಟ- ಬಡಿದಾಟ ಆರಂಭವಾಗಿದೆ. ಸಿದ್ದರಾಮಯ್ಯ ಒಂದು ದಿಕ್ಕಾದ್ರೆ, ಡಿಕೆಶಿ ಮತ್ತೊಂದು ದಿಕ್ಕು ಆಗಿರುವುದು ಸ್ಪಷ್ಟವಾಗಿದೆ. ಅವರ ಕಚ್ಚಾಟ ಏನೇ ಇರಲಿ, ನಾವು, ಪ್ರಧಾನಿ ಮಾಡಿರುವ ಅಭಿವೃದ್ಧಿಯಿಂದ ನೂರಕ್ಕೆ ನೂರು ಗೆಲ್ಲುತ್ತೇವೆ ಎಂದಿದ್ದಾರೆ.

ಇನ್ನು ಬೈ ಎಲೆಕ್ಷನ್ ನಲ್ಲಿ ಎರಡು ದಿನ ಪ್ರವಾಸ ನಿಗದಿಯಾಗಿದೆ. ಎರಡು ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ, ಹೆಚ್ಚು ಅಂತರದಲ್ಲಿ ಗೆಲ್ಲುವ ಆಪೇಕ್ಷೆ ಇದೆ.

ನಮ್ಮ ಸಾಧನೆ ಜನರಿಗೆ ತಿಳಿಸಿ ದೊಡ್ಡ ಅಂತರದಲ್ಲಿ ಗೆಲ್ಲಲು ಪ್ರಯತ್ನ ಮಾಡುತ್ತೇವೆ. ಸಿಎಂ & ಖರ್ಗೆ ಹೇಳಿಕೆ ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲಾ ಚುನಾವಣೆ ಅತ್ಯಂತ ಮುಖ್ಯ, ಸರ್ಕಾರದ ಮೇಲೆ ಪರಿಣಾಮ ಆಗಲ್ಲ. ಎರಡು ಕ್ಷೇತ್ರ ಗೆಲ್ಲುವ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ತೈಲಬೆಲೆ ವಿಶೇಷ ಕಾರಣಕ್ಕೆ ಜಾಸ್ತಿಯಾಗಿದೆ. ಪ್ರಧಾನಿ ಮೋದಿ ಸರ್ಕಾರ, ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸು ಗೆದ್ದಿದೆ. ಈ ಚುನಾವಣೆಯಲ್ಲಿ ಎರಡು ಕ್ಷೇತ್ರ ಗೆಲ್ಲುತ್ತೇವೆ.

ಪ್ರಧಾನಿ ಮೋದಿ ಒಬ್ಬ ಹೆಬ್ಬೆಟ್ಟು ಎಂಬ ಕೆಪಿಸಿಸಿ ಟ್ವಿಟ್  ವಿಚಾರದ ಬಗ್ಗೆ ಮಾತನಾಡಿರೋ ಯಡಿಯೂರಪ್ಪ, ಇಂಥ ಶಬ್ದ ಉಪಯೋಗಿಸುವುದು, ಶೋಭೆ ತರುವಂತದ್ದಾ…?

ವಿಶ್ವವೇ ಪ್ರಧಾನಿಗಳನ್ನ ದೊಡ್ಡ ನಾಯಕ ಎಂದು ಒಪ್ಪಿದೆ. ಕಾಂಗ್ರೆಸ್ ನವರ ಸಂಸ್ಕೃತಿ, ಅವರ ಯೋಗ್ಯತೆ ಎನೂ ಎಂದು ತೋರಿಸುತ್ತದೆ. ಕಾಂಗ್ರೆಸ್ ನಾಯಕರು ರಾಜ್ಯ& ದೇಶದ  ಜನರ ಬಳಿ ಕ್ಷಮೆ ಕೇಳಬೇಕು. ಬಿ.ವೈ. ವಿಜಯೇಂದ್ರರಿಗೆ ಮಂತ್ರಿ ಸ್ಥಾನದ ವಿಚಾರ. ಆ ಪ್ರಶ್ನೆಯೇ ಬರುವುದಿಲ್ಲ, ಮಂತ್ರಿ ಸ್ಥಾನ ಕೇಳಿಲ್ಲ. ಬರುವ ದಿನಗಳಲ್ಲಿ ಏನಾಗುತ್ತದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ತೀರ್ಮಾನ ಮಾಡುತ್ತದೆ ಎಂದಿದ್ದರೆ.

Share This Article
Leave a Comment

Leave a Reply

Your email address will not be published. Required fields are marked *