in ,

ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಯುವಕನ ದರ್ಪ

suddione whatsapp group join

ಸುದ್ದಿಒನ್, ಚಿತ್ರದುರ್ಗ, (ಸೆ.27) : ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಅಪರಿಚಿತ ಯುವಕನೊರ್ವ ದರ್ಪ ಮೆರೆದು ಸಿಬ್ಬಂದಿಗಳ ಮೇಲೆ ದೌರ್ಜನ್ಯ ನಡೆಸಿರುವ ಘಟನೆ ಹಿರಿಯೂರಿನಲ್ಲಿ ನಿನ್ನೆ(ಸೆ.26) ನಡೆದಿದೆ.

ಬಸ್ ಪ್ಲಾಟ್ ಫಾರಂ ಸ್ಥಳದಲ್ಲಿ ಯುವಕನೊಬ್ಬ ದ್ವಿಚಕ್ರ ವಾಹನ ನಿಲ್ಲಿಸಿದ್ದಾನೆ. ಅದನ್ನು ತೆಗೆಯುವಂತೆ ಅಲ್ಲಿನ ಸಿಬ್ಬಂದಿಗಳು ಮೈಕ್ ಹಿಡಿದು ಮೂರು ಬಾರಿ ಮನವಿ‌ ಮಾಡಿದ್ದಾರೆ.  ಆದರೆ ಇದಕ್ಕೆ ಕ್ಯಾರೆಯನ್ನದ ಆ ಯುವಕ ದರ್ಪ ತೋರಿದ್ದಾನೆ.

ಸ್ಥಳದಿಂದ ಬೈಕ್ ಅನ್ನು ತೆಗೆಯದೇ ನೇರವಾಗಿ ಕಚೇರಿಯೊಳಗೆ ನುಗ್ಗಿ ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಯಾರ‌ನ್ನೂ ಬೇಕಾದರೂ ಕರೆಸಿ ಎಂದು ಏಕ ವಚನದಲ್ಲಿ ನಿಂದಿಸಿದ್ದಾನೆ.

ಘಟನೆ ಬಗ್ಗೆ ಮೇಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ‌ ನೀಡಿದ್ದು, ಅವರ ಆದೇಶದ ಮೇರೆಗೆ ವ್ಯಕ್ತಿಯ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಹಿರಿಯೂರು ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಬಸ್ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ತಿಳಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಸಡಿಲಿಕೆ ಇಲ್ಲ ಮತ್ತೆ ನೈಟ್ ಕರ್ಫ್ಯೂ ಮುಂದುವರಿಕೆ : ಪೊಲೀಸ್ ಆಯುಕ್ತರ ಆದೇಶ

504ಕ್ಕೆ ಇಳಿತು ಕೊರೊನಾ : ಆದ್ರೂ ಎಚ್ಚರದಿಂದಿರಿ