in ,

ಅಕ್ಕಮಹಾದೇವಿ ವಚನಗಳು ಪುಸ್ತಕದಲ್ಲಿ  ಉಳಿಯದೆ ಮಸ್ತಕದಲ್ಲಿಡಬೇಕು : ಶ್ರೀಮತಿ ಸಿ ಬಿ ಶೈಲ ಜಯಕುಮಾರ್

suddione whatsapp group join

 

ಚಿತ್ರದುರ್ಗ,(ಏ.26) : ಅನುಭವಮಂಟಪದಲ್ಲಿ ಅಲ್ಲಮನ ಪರೀಕ್ಷೆಗಳನ್ನೂ ಗೆದ್ದು ನಿಂತ  ಶ್ರೇಷ್ಠ ವಚನಕಾರ್ತಿ. ಇಂತಹ ಅಕ್ಕಮಹಾದೇವಿಯು ಬರೆದ ವಚನಗಳು ಪುಸ್ತಕದಲ್ಲಿ  ಉಳಿಯದೆ ಮಸ್ತಕದಲ್ಲಿಡಬೇಕು ಎಂದು ನಿವೃತ ಉಪನ್ಯಾಸಕರಾದ ಶ್ರೀಮತಿ ಸಿ ಬಿ ಶೈಲ ಜಯಕುಮಾರ್ ತಿಳಿಸಿದರು.

ಅಖಿಲಭಾರತ ವೀರಶೈವ ಮಹಾಸಭಾ (ರಿ)ಜಿಲ್ಲಾ ಮಹಿಳಾ ಘಟಕದಲ್ಲಿ ಆಯೋಜಿಸಲಾಗಿದ್ದ ಅಕ್ಕಮಹಾದೇವಿ ಜಯಂತಿ ಪ್ರಯುಕ್ತ ಮಹಿಳೆಯರಿಗೆ ಅಕ್ಕಮಹಾದೇವಿಯ ವಚನ ಬರೆದು ಹಾಡುವ ಸ್ಪರ್ಧೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದ ಶ್ರೀಮತಿ ಅನಿತಾ ಮಹಂತೇಶರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ವಿತರಿಸಿ ಮಾತನಾಡಿದರು.

12 ನೇ ಶತಮಾನದಲ್ಲೇ ಸ್ತ್ರಿ ಸ್ವಾತಂತ್ರಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ  ಅಕ್ಕಮಹಾದೇವಿ. ಅವರ ಅನುಭಾವದ ವಚನಗಳು ಎಷ್ಟು ಅರ್ಥಪೂರ್ಣ ಅವಳ ವೇದನೆ ನಿವೇದನೆ ವಚನಗಳಲ್ಲಿ ಬರೆಯಬೇಕೆಂಬ ಸಂವೇದನೆ ತನ್ನ ವಚನಗಳಲ್ಲಿ ಬರೆದು ಆಕರ್ಷಣಿಯಾದಳು. ಕೌಶಿಕ ಮಹಾರಾಜನ ತೊರೆದು ತನ್ನ ಕೇಶ ರಾಶಿಯಲ್ಲಿ ಸೌಂದರ್ಯವನ್ನು ಮರೆಮಾಚಿ ನಿರಾಡಬರಳಾಗಿ ತನ್ನ ಆರಾಧ್ಯದೈವ ಚೆನ್ನಮಲ್ಲಿಕಾರ್ಜುನನ ಮನದಲ್ಲಿ ಪೂಜಿಸಿ ಆರಾಧಿಸಿ ಕದಳಿಯ ದಟ್ಟ ಅಡವಿಯಲ್ಲಿ ಅಲೆದ ಗಟ್ಟಿಗಿತ್ತಿ ಅನುಭವಮಂಟಪದಲ್ಲಿ ಅಲ್ಲಮನ ಪರೀಕ್ಷೆಗಳನ್ನೂ ಗೆದ್ದು ನಿಂತ  ಶ್ರೇಷ್ಠ ವಚನಕಾರ್ತಿ. ಇಂತಹ ಅಕ್ಕಮಹಾದೇವಿಯು ಬರೆದ ವಚನಗಳು ಪುಸ್ತಕದಲ್ಲಿ  ಉಳಿಯದೆ ಮಸ್ತಕದಲ್ಲಿಡಬೇಕು ವಚನಗಳಲ್ಲಿ ಶ್ಲೇಷಾ ಅಲಂಕಾರಗಳನ್ನು ಗಮನಿಸಬೇಕು ಕನ್ನಡಿಗರಾಗಿ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕು. ಬಹುಮಾನಗಳಿಗಿಂತ ಪುಸ್ತಕಗಳನ್ನು ಕೊಟ್ಟು ಓದುವ ಅಭ್ಯಾಸವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ಅಖಿಲ ಭಾರತ ವೀರಶೈವ ಮಹಾಸಭಾ (ರಿ)ಜಿಲ್ಲಾ ಮಹಿಳಾ ಘಟಕದ ಶ್ರೀಮತಿ ನಿರ್ಮಲ ಬಸವರಾಜ್ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 25 ಜನ ಸ್ಪರ್ಧಿಗಳು ಭಾಗವಹಿಸಿದ್ದರು.

ತೀರ್ಪುಗಾರರಾಗಿ ನಿವೃತ ಉಪನ್ಯಾಸಕರಾದ ಶ್ರೀಮತಿ ಸಿ ಬಿ ಶೈಲಜಯಕುಮಾರ್ ಹಾಗು ಸಂಗೀತ ಶಿಕ್ಷಕರಾದ ಶ್ರೀಮತಿ ಮುಕ್ತ ನಾಗರಾಜ್ ಭಾಗವಹಿಸಿದ್ದರು. ಹಾಗು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಮಹಡಿ ಶಿವಮೂರ್ತಿ ರಾಜ್ಯ ಕಮಿಟಿ ಸದಸ್ಯರಾದ ಶ್ರೀಮತಿ ಆರತಿ ಮಹಡಿ ಭಾಗವಹಿಸಿದ್ದರು.

ಶ್ರೀಮತಿ ನಿರ್ಮಲ ಬಸವರಾಜ್ ಸ್ವಾಗತಿಸಿದರೆ. ಕಾರ್ಯದರ್ಶಿ ರೀನವೀರಭದ್ರಪ್ಪ ವರದಿಯನ್ನು ಮಂಡಿಸಿ.. ಪ್ರಾಸ್ತಾವಿಕ ಮಾತನಾಡಿದರು.  ಸ್ಫರ್ದೆಯಲ್ಲಿ ಪ್ರಥಮ ಶ್ರೀಮತಿ ಹೇಮಲತಾ,ದ್ವಿತೀಯ ಶ್ರೀಮತಿ ಇಂದಿರಾ ಜಯದೇವಮೂರ್ತಿ,ಮೂರನೇ ಬಹುಮಾನವನ್ನು ಸುನೀತಾ ನಾಗರಾಜ್ ಪಡೆದರು. ಕಮಿಟಿಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಗೃಹ ಸಚಿವರ ಜೊತೆಗೆ ದಿವ್ಯಾ ಫೋಟೋ ಹಾಕಿದ್ದ ಕಾಂಗ್ರೆಸ್ ನಾಯಕರು.. ಇದೀಗ ಡಿಕೆಶಿ ಜೊತೆಗಿನ ಫೋಟೋ ಹಾಕಿದ ಬಿಜೆಪಿ

ಬಡ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ಮುಟ್ಟಿಸಿದಾಗ ಮಾತ್ರ ಸರ್ಕಾರದ ಕಾರ್ಯಕ್ರಮಗಳು ಸಫಲವಾಗುತ್ತವೆ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ