ಸುದ್ದಿಒನ್, ಬೆಂಗಳೂರು, ಜೂ. 11: ಪವಿತ್ರಾ ಗೌಡಗೆ ಅಸಭ್ಯವಾಗಿ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಇಂದು ವ್ಯಕ್ತಿಯೊಬ್ಬ ಶವವಾಗಿ ಬಿದ್ದಿದ್ದಾನೆ. ಆತ ಮಧ್ಯಮವರ್ಗದಿಂದ ಬಂದವನು. ಕಳೆದ ವರ್ಷವಷ್ಟೇ ಮದುವೆಯಾಗಿ, ಕೊನೆಯವರೆಗೂ ಜೊತೆಗೆ ಇರುತ್ತೀನಿ ಎಂದು ಮಾತು ಕೊಟ್ಟವ, ಗರ್ಭಿಣಿಯನ್ನು ಬಿಟ್ಟು ಹೊರಟೆ ಹೋಗಿದ್ದಾನೆ. ಅಷ್ಟಕ್ಕೂ ಆತನಿಂದ ಕೆಟ್ಟದಾಗಿ ಮೆಸೇಜ್ ಗಳು ಬರುತ್ತಿದ್ದರೆ, ಪವಿತ್ರಾ ಗೌಡ ಪೊಲೀಸರಿಗಾದರೂ ದೂರು ನೀಡಬಹುದಿತ್ತು. ಆದರೆ ಒಳ್ಳೆ ಸಿನಿಮಾದಲ್ಲಿ ನಡೆದಂತೆ ಪವಿತ್ರಾಗೌಡ ಈ ವಿಚಾರವನ್ನು ದರ್ಶನ್ ಗೆ ಹೇಳಿದ್ದು, ಎಚ್ಚರಿಕೆ ಕೊಡುವುದಕ್ಕೆ ಕರೆಸಿ, ಹೊಡೆದ ಒಡೆತಕ್ಕೆ ಸತ್ತೆ ಹೋಗುವುದು. ಈ ಎಲ್ಲವೂ ಸಿನಿಮಾದ ದೃಶ್ಯವೆಂಬಂತೆ ಕಣ್ಣಿಗೆ ಕಂಡಿದೆ.
ಸದ್ಯ ಈ ಪ್ರಕರಣದಲ್ಲಿ ಈಗಾಗಲೇ ಹತ್ತು ಜನರನ್ನು ಬಂಧಿಸಲಾಗಿದೆ. ಆದರೆ ರೇಣುಕಾ ಸ್ವಾಮಿಯನ್ನು ಕೊಲ್ಲುವಾಗ ಚಿತ್ರಹಿಂಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಮುಖ, ತಲೆ, ಕಿವಿಗೆ ತೀವ್ರವಾದ ಗಾಯ ಮಾಡಿದ್ದಾರೆ. ಅಮಾನೀಯವಾಗಿ ಹೊಡೆದು ಕೊಲ್ಲಲಾಗಿದೆ. ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡು ವಿನಯ್ ಅವರಿಗೆ ಸಂಬಂಧಪಟ್ಟಂತ ಶೆಡ್ ನಲ್ಲಿ ಕೂಡಿ ಹಾಕಲಾಗಿತ್ತಂತೆ. ಈ ವೇಳೆ ಮುಖದ ಮೂಳೆ ಮುರಿದಿದೆ, ಮೂಗು ಓಪನ್ ಆಗುವಂತೆ ಗುದ್ದಿದ್ದಾರೆ. ಎದೆಯ ಎಡಗಡೆ ರಿಬ್ ಕಟ್ ಆಗುವಂತೆ ಹಲ್ಲೆ ಮಾಡಿದ್ದಾರೆ. ಕಾಲು ಮತ್ತು ಕೈಗೆ ಬ್ಯಾಟ್, ದೊಣ್ಣೆಯಿಂದ ಹೊಡೆಯಲಾಗಿದೆ. ಕಾಲಿನಿಂದ ಮರ್ಮಾಂಗವನ್ನೇ ತುಳಿದಿದ್ದಾರೆ. ರಾಕ್ಷಸರ ರೀತಿ ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕೂಡಿ ಹಾಕಿ ಮನಸ್ಸೋ ಇಚ್ಛೆ ತಳಿಸಿ, ರಾಕ್ಷಸರ ರೀತಿ ನಡೆದುಕೊಂಡಿದ್ದಾರೆ. ಇವರು ಹೊಡೆದ ಹೊಡೆತಕ್ಕೆ ರೇಣುಕಾ ಸ್ವಾಮಿ ನರಳಿ ನರಳಿ ಸತ್ತಿದ್ದಾರೆ. ಸದ್ಯ ಅವರ ಕುಟುಂಬಸ್ಥರನ್ನು ಬೆಂಗಳೂರಿಗೆ ಕರೆಸಲಾಗಿದೆ.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಫೆ. 23…
ಸುದ್ದಿಒನ್ ವಿರಾಟ್ ಕೊಹ್ಲಿ 14,000 ಏಕದಿನ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸಚಿನ್…
ದಾವಣಗೆರೆ; ರಾಜ್ಯದಲ್ಲಿ ಇನ್ನೇನು ತಾಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಸಂಬಂಧ ರೇಣುಕಾಚಾರ್ಯ ಅವರು…
ತುಮಕೂರು: ಬೆಸ್ಕಾಂ ತುಮಕೂರು ನಗರ ಉಪ ವಿಭಾಗ 1ರ ವ್ಯಾಪ್ತಿಯಲ್ಲಿ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ಪ್ರತ್ಯೇಕ ಕೃಷಿ…
ಸುದ್ದಿಒನ್ ಪ್ರತಿಯೊಬ್ಬ ಭಾರತೀಯ ಅಭಿಮಾನಿಯೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್‌ಗಳನ್ನು ನಿರೀಕ್ಷಿಸುತ್ತಾರೆ.…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 23 : ಮಕ್ಕಳ ಅರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವಹಿಸಿ ಜಂಕ್ ಪುಡ್ ಕಡೆಗೆ ಅವರ…