Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸರ್ಕಾರದ ಅನೇಕ ಸೌಲಭ್ಯಗಳು ಜನಸಾಮಾನ್ಯರಿಗೆ ಸಿಗಬೇಕೆಂದರೆ ಜನಪ್ರತಿನಿಧಿಯ ಪಾತ್ರ ಮುಖ್ಯ : ಭಾಸ್ಕರ್‌ರಾವ್

Facebook
Twitter
Telegram
WhatsApp

ಭೀಮಸಮುದ್ರ, (ಜೂ.08): ಗ್ರಾಮೀಣ ಭಾಗಗಳಲ್ಲಿ ಉಚಿತ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುವುದರಿಂದ ಆರೋಗ್ಯದ ಬಗ್ಗೆ ಅವರಲ್ಲಿ ಅರಿವು ಮೂಡಿಸಿದಂತಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ರಾವ್ ಹೇಳಿದರು.

ಈಶ್ವರ ಫೌಂಡೇಶನ್ ಭೀಮಸಮುದ್ರ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಇವರುಗಳ ಸಹಯೋಗದೊಂದಿಗೆ ಭೀಮಸಮುದ್ರದಲ್ಲಿ ದಿವಂಗತ ಡಾ.ಈಶ್ವರಪ್ಪನವರ ಸ್ಮರಣಾರ್ಥ ಅವರ ಸ್ವಗೃಹದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ನಾಲ್ಕನೆ ವರ್ಷದ ಉಚಿತ ನೇತ್ರ ತಪಾಸಣೆ ಶಿಬಿರ ಹಾಗೂ ಶಸ್ತ್ರ ಚಿಕಿತ್ಸೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬಹಳಷ್ಟು ಮಂದಿಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಇದೆ ಎನ್ನುವ ಅರಿವಿರುವುದಿಲ್ಲ. ಹಾಗಾಗಿ ಇಂತಹ ಆರೋಗ್ಯ ಶಿಬಿರಗಳಲ್ಲಿ ತಪಾಸಣೆ ಮಾಡಿಸಿಕೊಂಡಾಗ ಆರೋಗ್ಯದಲ್ಲಿ ಏರುಪೇರಾಗಿರುವುದನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಡಾ.ಈಶ್ವರಪ್ಪನವರ ಸ್ಮರಣಾರ್ಥ ನಡೆಸುತ್ತಿರುವ ನೇತ್ರ ತಪಾಸಣೆ, ಶಸ್ತç ಚಿಕಿತ್ಸೆ ಮತ್ತು ರಕ್ತದಾನ ಶಿಬಿರ ಅತ್ಯಂತ ಅರ್ಥಪೂರ್ಣವಾದುದು, ಭೀಮಸಮುದ್ರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿಯೂ ಇಂತಹ ಶಿಬಿರಗಳು ನಡೆಯಬೇಕು. ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಶಿಬಿರಗಳನ್ನು ಹಮ್ಮಿಕೊಂಡರೆ ಬಡ ಜನತೆಗೆ ಅನುಕೂಲವಾಗಲಿದೆ. ರಾಜ್ಯದ ಪ್ರತಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಮೊಬೈಲ್ ವ್ಯಾನ್‌ಗಳ ಪ್ರಯೋಜನ ಯಾರಿಗೂ ಸಿಗದಂತಾಗಿದೆ. ಸರ್ಕಾರದಲ್ಲಿ ಅನೇಕ ಸೌಲಭ್ಯಗಳಿವೆ. ಅವುಗಳು ಜನಸಾಮಾನ್ಯರಿಗೆ ಸಿಗಬೇಕು ಎನ್ನುವುದಾದರೆ ಪ್ರತಿಯೊಬ್ಬ ಜನಪ್ರತಿನಿಧಿಯ ಪಾತ್ರ ಮುಖ್ಯ ಎಂದು ಹೇಳಿದರು.

ಕೆಲವರಿಗೆ ಕಣ್ಣಿನಲ್ಲಿ ಪೊರೆ ಬಂದಿದ್ದರೂ ಎಲ್ಲಿಯೂ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ. ಇದರಿಂದ ಅಂಧತ್ವ ಜಾಸ್ತಿಯಾಗುತ್ತದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನು ಆಗಿಂದಾಗ್ಗೆ ತಪಾಸಣೆ ಮಾಡಿಸಿಕೊಂಡು ಸಕಾಲಕ್ಕೆ ಚಿಕಿತ್ಸೆ ಪಡೆದುಕೊಂಡಾಗ ಮಾತ್ರ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬಹುದು ಎಂದರು.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಮಾತನಾಡುತ್ತ ದಿವಂಗತ ಡಾ.ಈಶ್ವರಪ್ಪನವರ ಸ್ಮರಣಾರ್ಥ ಕಳೆದ ನಾಲ್ಕು ವರ್ಷಗಳಿಂದಲೂ ಅವರ ಕುಟುಂಬದವರು ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಹಾಗೂ ರಕ್ತದಾನ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಪುಣ್ಯದ ಕೆಲಸ. ಸಮಾಜಕ್ಕೆ ಇದೊಂದು ಮಾದರಿ. ಇಂತಹ ಶಿಬಿರಗಳು ಇನ್ನು ಜಾಸ್ತಿಯಾದಾಗ ಬಡವರು ಹಾಗೂ ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಬಿಜೆಪಿ.ಯುವ ಮುಖಂಡ ಅನಿತ್ ಮಾತನಾಡಿ ಡಾ.ಈಶ್ವರಪ್ಪನವರ ಹಾದಿಯಲ್ಲಿಯೇ ಅವರ ಮಕ್ಕಳು ಮತ್ತು ಕುಟುಂಬದವರು ಸಾಗುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಮನಷ್ಯನಿಗೆ ದೃಷ್ಟಿ ಅತ್ಯಂತ ಅವಶ್ಯಕ. ಅದಕ್ಕಾಗಿ ಯಾರು ನಿರ್ಲಕ್ಷೆ ಮಾಡದ ನೇತ್ರ ತಪಾಸಣೆ ಮಾಡಿಸಿಕೊಂಡಾಗ ಮಾತ್ರ ಪೊರೆ ಬೆಳೆದಿರುವುದು ಗೊತ್ತಾಗುತ್ತದೆ. ಆಗ ಶಸ್ತç ಚಿಕಿತ್ಸೆಯ ಮೂಲಕ ಗುಣಪಡಿಸಿಕೊಳ್ಳಬಹುದು ಎಂದರು.

ಈಶ್ವರ್ ಫೌಂಡೇಶನ್ ಅಧ್ಯಕ್ಷ ಬಿ.ಇ.ಜಗದೀಶ್ ಮಾತನಾಡಿ ನಮ್ಮ ತಂದೆ ಡಾ.ಈಶ್ವರಪ್ಪನವರು ದೇವಸ್ಥಾನಗಳನ್ನು ಕಟ್ಟುವ ಬದಲು ಇಂತಹ ಆರೋಗ್ಯ ಶಿಬಿರಗಳನ್ನು ಮಾಡಬೇಕೆಂಬ ಕನಸು ಕಂಡಿದ್ದರು. ಹಾಗಾಗಿ ಕಳೆದ ನಾಲ್ಕು ವರ್ಷಗಳಿಂದಲೂ ಉಚಿತ ನೇತ್ರ ತಪಾಸಣಾ ಶಿಬಿರ, ಶಸ್ತç ಚಿಕಿತ್ಸೆ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ದಿವಂಗತ ಡಾ.ಈಶ್ವರಪ್ಪನವರು ಇಂತಹ ಸಮಾಜಮುಖಿ ಕೆಲಸಕ್ಕಾಗಿ ಬ್ಯಾಂಕ್‌ನಲ್ಲಿ ಒಂದು ಕೋಟಿ ರೂ. ಠೇವಣಿಯಿಟ್ಟಿದ್ದಾರೆ. ಅದರಿಂದ ಬರುವ ಬಡ್ಡಿಯ ಹಣದಲ್ಲಿ ಆರೋಗ್ಯ ತಪಾಸಣೆ, ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ಭೀಮಸಮುದ್ರದ ಶ್ರೀಭೀಮೇಶ್ವರ ಪ್ರೌಢಶಾಲೆ, ಶ್ರೀಭೀಮೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಪ್ರತಿಭಾವಂತ ಮಕ್ಕಳಿಗೆ ತಲಾ ಐದು ಸಾವಿರ ರೂ.ಗಳನ್ನು ನೀಡಿ ಪುರಸ್ಕರಿಸಿದ್ದೇವೆ. ಇದರಿಂದ ನಮ್ಮ ತಂದೆಯವರು ಕಂಡಿದ್ದ ಕನಸು ನನಸಾದಂತಾಗುತ್ತದೆ ಎಂದು ತಿಳಿಸಿದರು.

ಆಮ್ ಆದ್ಮಿ ಪಕ್ಷದ ವಿಜಯಶರ್ಮ, ಉಮಾಶಂಕರ್, ಗುರುಮೂರ್ತಿ, ಶ್ರೀಮತಿ ಸರಸ್ವತಿ ಬಿ.ಟಿ.ಚನ್ನಬಸಪ್ಪ, ಶೀಲ ಜಗದೀಶ್, ಜಿ.ಇಂದಿರಮ್ಮ, ಆಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಜ್ಜಪ್ಪ, ಶೇಖರಪ್ಪ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಚೇರ್ಮನ್ ವೈ.ಬಿ.ಮಹೇಂದ್ರನಾಥ್, ಜಿಲ್ಲಾ ಖಜಾಂಚಿ ಮಜಹರ್‌ವುಲ್ಲಾ ಹಾಗೂ ಶಾಲಾ ಮಕ್ಕಳು, ಶಿಕ್ಷಕ ವೃಂದದವರು ಸಮಾರಂಭದಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

ಮಾಜಿ ಸಿಎಂ ಬಿಎಸ್ವೈ ವಿರುದ್ದ ಸಮರ ಸಾರಿದ್ರಾ ಪರಮಾಪ್ತ ಶಾಸಕ ಎಂ.ಚಂದ್ರಪ್ಪ. ?

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಮಾ.28 : ಪುತ್ರನಿಗೆ ಬಿಜೆಪಿ ಟಿಕೇಟ್ ಕೈ ತಪ್ಪಿದ ಹಿನ್ನಲೆ ಶಾಸಕ ಎಂ ಚಂದ್ರಪ್ಪ ಅಸಮಧಾನ ವ್ಯಕ್ತಪಡಿಸಿದ್ದು,

ನೀವೂ ಐಫೋನ್ ಪ್ರಿಯರಾ..? ಇಲ್ಲಿದೆ ನೋಡಿ ಬಿಗ್ ಆಫರ್..!

ಇತ್ತಿಚೆಗಂತು ಯಾರ ಕೈನಲ್ಲಿ ನೋಡೊದರೂ ಐಫೋನ್ ಇದ್ದೇ ಇರುತ್ತದೆ. ಅದರಲ್ಲೂ ಹೊಸ ಹೊಸ ವರ್ಷನ್ ಬರ್ತಾನೆ ಇರುತ್ತದೆ. ಹೊಸ ವರ್ಷನ್ ಐಫೋನ್ ಬೆಲೆ ಗಗನ ಮುಟ್ಟಿರುತ್ತದೆ. ಹೀಗಾಗಿ ಐಫೋನ್ ತೆಗೆದುಕೊಳ್ಳಬೇಕೆಂಬ ಬಯಕೆ ಇರುವವರಿಗೆ ಸಂಕಟ,

error: Content is protected !!