ಭೂಮಿಗೆ ತಂಪೆರೆದ ಮಳೆರಾಯ ; ಶೆಕೆಯಿಂದ ಬೆವರಿಳಿಸಿದ ಜನಕ್ಕೆ ಆನಂದ

ಹೌದು ಯುಗಾದಿ ಹಬ್ಬಕ್ಕೂ ಮುನ್ನ ಒಂದು ಮಳೆಯಾಗಬೇಕಿದೆ. ಇದು ಅನಾದಿ ಕಾಲದಿಂದಾನೂ ನಡೆದುಕೊಂಡು ಬಂದಿರುವ ಪದ್ಧತಿ. ಪ್ರಕೃತಿಯೇ ಹಾಗೇ ಯಾರೂ ಏನೇ ಬದಲಾದರೂ ತಾನೂ ಮಾತ್ರ ಬದಲಾಗುವುದಿಲ್ಲ. ಆ ಕಾಲ ಕಾಲಕ್ಕೆ ಏನು ಮಾಡಬೇಕೋ ಅದನ್ನೇ ಮಾಡುತ್ತಾ ಹೋಗುತ್ತದೆ. ಇಂದು ಮಳೆ ಕೂಡ. ಹವಮಾನ ಇಲಾಖೆ ಇಂದು ಮತ್ತು ನಾಳೆ ಮಳೆಯಾಗಲಿದೆ ಎಂಬ ಸೂಚನೆಯನ್ನು ನೀಡಿತ್ತು. ಇದೀಗ ಸಂಜೆ ವೇಳೆಗೆ ಜೋರು ಮಳೆ ಕಾಣಿಸಿಕೊಂಡಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೋರು ಮಳೆಯಾಗಿದೆ. ಮೊದಲೇ ಬೇಸಿಗೆಯ ಬಿಸಿಲು ಜೋರಾಗಿತ್ತು. ಇದರ ನಡುವೆ ವರುಣರಾಯ ತಂಪೆರೆದಿದ್ದಾನೆ. ಸಿಲಿಕಾನ್ ಸಿಟಿಯ ಹೆಬ್ಬಾಳ, ನಾಗವಾರ ಮುಖ್ಯರಸ್ತೆ, ಆರ್.ಟಿ.ನಗರ, ಸುಲ್ತಾನ್ ಪಾಳ್ಯ, ಮಾನ್ಯತಾ ಟೆಕ್ ಪಾರ್ಕ್, ಮೇಖ್ರಿ ಸರ್ಕಲ್, ಸದಾಶಿವನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ.

ಸಿಲಿಕಾನ್ ಸಿಟಿಯ ಇನ್ನು ಕೆಲವೆಡೆ ಅಂದ್ರೆ ಟೌನ್ ಹಾಲ್, ಮಾರ್ಕೆಟ್, ಮೆಜೆಸ್ಟಿಕ್, ಯಲಹಂಕ, ಹೆಣ್ಣೂರು, ಟಿನ್ ಫ್ಯಾಕ್ಟರಿ, ಕಲ್ಯಾಣ ನಗರ, ವಿಧಾನಸೌಧ, ಕೆ.ಆರ್.ಸರ್ಕಲ್, ಕಾರ್ಪೋರೇಷನ್, ಜೆಪಿ ನಗರ, ಜಯನಗರ ಭಾಗಗಳಲ್ಲಿ ಕೊಂಚ ಮಳೆಯಾಗಿದೆ. ಕೆಲ ಜಿಲ್ಲೆಗಳಲ್ಲಿ ತಣ್ಣನೆಯ ವಾತಾವರಣ ನಿರ್ಮಾಣವಾಗಿದೆ. ಇನ್ನಷ್ಟೇ ಮಳೆ ಬರಬೇಕಿದೆ. ಬೇಸಿಗೆಯ ಬಿಸಿಲಿನಿಂದ ಕಾದಿದ್ದ ಭೂಮಿಗೂ ಮಳೆಯಿಂದ ಹಿತವೆನಿಸಿದೆ. ಫ್ಯಾನ್ ಗಾಳಿಯೂ ಬಿಸಿಯಾಗಿದ್ದ ಈ ಕಾಲಕ್ಕೆ ತಣ್ಣನೆಯ ಬೀಸಿದ ಗಾಳಿಯಿಂದ ಜನ ಕೂಡ ಕೂಲ್ ಆಗಿದ್ದಾರೆ. ನಾಳೆ ಕೂಡ ಮಳೆ ಬರಲಿದೆ ಎಂಬ ಎಚ್ಚರಿಕೆಯನ್ನು ಹವಮಾನ ಇಲಾಖೆ ನೀಡಿದೆ ಹೀಗಾಗಿ ವೀಕೆಂಡ್ ಪ್ಲ್ಯಾನ್ ಮಾಡಿದವರು ಸ್ವಲ್ಪ ಮುಂಹಾಗ್ರತ ಕ್ರಮವನ್ನು ತೆಗೆದುಕೊಳ್ಳಿ.

suddionenews

Recent Posts

ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಸವರಾಜ್ ಹೊರಟ್ಟಿ..!

    ಹುಬ್ಬಳ್ಳಿ; ಬಸವರಾಜ್ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವಿಧಾನಪರಿಷತ್…

7 hours ago

ಚಿತ್ರದುರ್ಗ : ಅಪಘಾತದಲ್ಲಿ ಎಸ್.ಜೆ.ಎಂ. ನರ್ಸಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವು : ಸಂತಾಪ ಸೂಚಿಸಿದ ವಿದ್ಯಾಪೀಠ

  ಸುದ್ದಿಒನ್, ಚಿತ್ರದುರ್ಗ, ಮಾ.23 : ನಗರದ ಜೆ.ಸಿ.ಆರ್. ಬಡಾವಣೆ ಹತ್ತಿರ ರಾಷ್ಟ್ರೀಯ ಹೆದ್ದಾರಿ 13ರ ಸೇತುವೆ ಬಳಿ ಶನಿವಾರ…

9 hours ago

ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ 30ನೇ ವರ್ಷದ ವಾರ್ಷಿಕೋತ್ಸವ : ನೆರವೇರಿದ ವಿವಿಧ ಪೂಜಾ ಕಾರ್ಯಕ್ರಮ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಮಾ. 23…

9 hours ago

ಆಡು ಮುಟ್ಟದ ಸೊಪ್ಪಿಲ್ಲ ಡಾ.ಬುಕಾನನ್ ಬರೆಯದ ವಿಚಾರಗಳಿಲ್ಲ : ಪ್ರೊ.ಎಂ.ಜಿ.ರಂಗಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

9 hours ago

ಪುರಷನಿಗೆ ಸರಿಸಮನಾಗಿ ದುಡಿಯುತ್ತಿರುವ ಹೆಣ್ಣಿಗೆ ಅನುಕಂಪ ಬೇಕಿಲ್ಲ : ಬಿ.ಕೆ.ರಹಮತ್‍ವುಲ್ಲಾ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

9 hours ago

ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಮೈಸೂರು-ವಿಜಯಪುರ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು

  ಸುದ್ದಿಒನ್ ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮೈಸೂರು ಮತ್ತು ವಿಜಯಪುರ…

11 hours ago