in ,

ಸಂವಿಧಾನದ ಆಶಯಗಳು‌ ಹಾಗೂ ಬಸವಣ್ಣನ ತತ್ವಗಳಿಗೆ ಸಾಮ್ಯತೆಯಿದೆ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

suddione whatsapp group join

ಚಿತ್ರದುರ್ಗ, (ಮೇ.3) : ಭಾರತದ ಸಂವಿಧಾನ ಆಶಯಗಳು ಹಾಗೂ ಬಸವಣ್ಣನವರು ಪ್ರತಿಪಾದಿಸಿದ ತತ್ವಗಳಲ್ಲಿ ಸಾಮ್ಯತೆಯಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರ ಸಭೆ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ಜಗಜ್ಯೋತಿ ಬಸವೇಶ್ವರ ದಿನಾಚರಣೆಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಮಾತನಾಡಿದರು.

ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಸಂಭ್ರಮದಿಂದ ಬಸವಣ್ಣನವರ ಜಯಂತಿಯನ್ನು ಆಚರಿಸಲಾಗುತ್ತದೆ. ಆಂಧ್ರಪ್ರದೇಶದಲ್ಲಿ ಸರ್ಕಾರದ ವತಿಯಿಂದ ಬಸವ ಜಯಂತಿ ಆಚರಣೆಗೆ ಆದೇಶ ಹೊರಡಿಸಲಾಗಿದೆ. ಕಲ್ಯಾಣದ ಕ್ರಾಂತಿಯಾಗಿ 900 ವರ್ಷಗಳಾದರೂ ಬಸವಣ್ಣನವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಸಮ ಸಮಾಜ, ಸಮಾನತೆ ಹಾಗೂ ಜ್ಯಾತ್ಯಾತೀತ ಮನೋಭಾವಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ಸಂಸತ್ತಿನ ಆವರಣದಲ್ಲಿ ಬಸವೇಶ್ವರರ ಮೂರ್ತಿ ಸ್ಥಾಪಿಸಿ ಗೌರವ ಸಲ್ಲಿಸಲಾಗಿದೆ. ಉತ್ತರ ಕರ್ನಾಟಕದ ಜನಮಾನಸದಲ್ಲಿ ಬಸವಣ್ಣ ನೆಲೆ ನಿಂತಿದ್ದಾರೆ.

ಅವರ ವಚನಗಳು ಜನರ ಬಾಯಲ್ಲಿ ನಲಿದಾಡುತ್ತವೆ. 1980ರಲ್ಲಿ ಮುಖ್ಯಮಂತ್ರಿ ಗುಂಡೂರಾವ್ ಅವರು ಸರ್ಕಾರದ ವತಿಯಿಂದ ಬಸವ ಜಯಂತಿ ಆಚರಣೆಗೆ ಆದೇಶಿಸಿ, ರಾಜ್ಯದಲ್ಲಿ ಬಸವ ಜಯಂತಿಯನ್ನು ಸಾರ್ವತ್ರಿಕ ರಜೆ ಘೋಷಣೆ ಮಾಡಿದ್ದರು. ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಎಲ್ಲಾ ಸರ್ಕಾರಗಳು ಬಸವಣ್ಣನವರ ಆಶಯಗಳ ಈಡೇರಿಕೆಗೆ ಶ್ರಮಿಸಿವೆ. ಎಲ್ಲಾ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿ ಬಸವಣ್ಣನವರ ತತ್ವಾದರ್ಶಗಳ ಪ್ರಭಾವ ಇದ್ದೇ ಇರುತ್ತದೆ ಎಂದರು.

ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಮಾತನಾಡಿ, ಬಸವಣ್ಣನವರ ತತ್ವಗಳನ್ನು ಆಡಿ‌ ಕೇಳಿ ಸುಮ್ಮನಾಗಬಾರದು. ಎಲ್ಲರೂ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸಬೇಕು. ಗುಲಬರ್ಗಾ ಜಿಲ್ಲೆ ಸೇಡಂ ತಾಲೂಕಿನ ಬಿಜನಳ್ಳಿ ಗ್ರಾಮದ ಜನರು ಹರಳಯ್ಯ ದಂಪತಿಗಳು ತಮ್ಮ ದೇಹದ ಚರ್ಮದಿಂದ ತಯಾರಿಸಿ ಬಸವೇಶ್ವರರಿಗೆ‌ ಕಾಣಿಕೆಯಾಗಿ ನೀಡಿದ್ದ ಚಪ್ಪಲಿಗಳನ್ನು ಸಂರಕ್ಷಿಸಿಟ್ಟು ಕೊಂಡು ಬಂದಿದ್ದಾರೆ. ಈ ಅಂಶ ಉತ್ತರ ಕರ್ನಾಟಕ ಭಾಗದಲ್ಲಿ ಜನರು‌ ಹೇಗೆ ಬಸವಣ್ಣನವರ ಜೀವನದ ಅಂಶಗಳೊಡನೆ ತಮ್ಮನ್ನು ತಾವು ಬೆಸೆದುಕೊಂಡಿದ್ದಾರೆ ಎಂಬುದನ್ನು ತಿಳಿಸುತ್ತದೆ ಎಂದರು.

ವೀರಶೈವ ಸಮಾಜದ ಕಾರ್ಯದರ್ಶಿ ವಿಶ್ವನಾಥ ಮಾತನಾಡಿ ಬಸವಣ್ಣನವರು ಸಮಾನತೆಗೆ ಅಸ್ತಿಭಾರ ಹಾಕಿದರು. ಮಹನೀಯರನ್ನು ಜಾತಿಗೆ ಸೀಮಿತಗೊಳಿಸಿ ನೋಡುವುದು ವಿಷಾದನೀಯವಾಗಿದೆ. ಬಸವಣ್ಣ ಈ ನೆಲದಲ್ಲಿ ಜನಿಸಿದ ನೈಜ ಚಿಂತಕ ಹಾಗೂ ಸಮಾಜ ಸುಧಾರಕ. ಅಂಬೇಡ್ಕರ್ ಸೇರಿದಂತೆ ಹಲವು ಸಮಾಜ ಸುಧಾರಕರು ಬಸವಣ್ಣನವರ ಹಾದಿಯಲ್ಲಿ ಸಾಗಿದ್ದಾರೆ.
ಸಮಾನತೆ ಹಾಗೂ ಸಹಬಾಳ್ವೆಯನ್ನು ನಾವುಗಳು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಮಹಡಿ ಶಿವಮೂರ್ತಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಎಲ್.ಬಿ.ರಾಜಶೇಖರ್, ನಿರ್ದೇಶಕರಾದ ಮೋಕ್ಷಾ ರುದ್ರಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ಮಹೇಶ್, ಮಹಿಳಾ ಮುಖಂಡರಾದ ಶ್ಯಾಮಲಾ ಶಿವಪ್ರಕಾಶ್, ನಿರ್ಮಲ ಬಸವರಾಜ, ರೀನಾ ವೀರಭದ್ರಪ್ಪ, ಆರತಿ ಮಹಡಿ‌ ಶಿವಮೂರ್ತಿ, ಮುಖಂಡರಾದ ಮಹೇಶ್ ಶಿವಪಕ್ರಾಶ್, ನಾಗರಾಜ ಸಂಗಮ್, ಹಿರಿಯ ವಕೀಲರಾದ ಚಲ್ಮೇಶ್, ಕೆ.ಬಿ.ಷಣ್ಮುಖಪ್ಪ, ದಯಾನಂದ ಪಾಟೀಲ್, ವಕೀಲರಾದ ದಯಾನಂದ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಲಾವಿದರಾದ ಗಂಗಾಧರ ಹಾಗೂ ಹೇಮಂತ್‌ ಅವರು ಕಾರ್ಯಕ್ರಮದಲ್ಲಿ ವಚನ ಗಾಯನ ಪ್ರಸ್ತುತ ಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯಪ್ಪ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಕೆಜಿಎಫ್2 ಸಿನಿಮಾ ನಿರ್ಮಾಣ ಮಾಡಿದ್ದು ಸಚಿವ ಅಶ್ವತ್ಥ್ ನಾರಾಯಣ್ ಹಾ : ಉಗ್ರಪ್ಪ ಹೇಳಿದ್ದೇನು..?

ಬಿಜೆಪಿ ಸೇರಲು ಕಾರಣ ಏನು ಸರ್.. ಕಾರಣ ರಾಜಕಾರಣ : ಬಸವರಾಜ್ ಹೊರಟ್ಟಿ ರಿಯಾಕ್ಷನ್