in ,

ಬುದ್ದ, ಬಸವ, ಅಂಬೇಡ್ಕರ್ ತತ್ವ ಆದರ್ಶಗಳು ಇಂದಿನ ಪರಿಸ್ಥಿತಿಗೆ ಪ್ರಸ್ತುತ : ಶಾಸಕ ಟಿ ರಘುಮೂರ್ತಿ

suddione whatsapp group join

ಚಳ್ಳಕೆರೆ, (ಮೇ.03) : ಐದನೇ ಶತಮಾನದ ಬುದ್ಧ , 12ನೇ ಶತಮಾನದ ಬಸವಣ್ಣ ಮತ್ತು 19ನೇ ಶತಮಾನ ಅಂಬೇಡ್ಕರ್ ಅವರ ತತ್ವಗಳು, ಸಿದ್ಧಾಂತಗಳು, ಆದರ್ಶಗಳು ಇಂದಿನ ಪರಿಸ್ಥಿತಿಗೆ ಪ್ರಸ್ತುತವಾಗಿವೆ. ಇವರ ಆದರ್ಶಗಳನ್ನು  ಇಂದಿನ ಪೀಳಿಗೆಗೆ ಪರಿಚಯಿಸುವುದು ಸತ್ಯವಾಗಿದೆ ಎಂದು ಶಾಸಕ ಟಿ ರಘುಮೂರ್ತಿ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲ್ಲೂಕು ಆಡಳಿತ, ತಾಲ್ಲೂಕ ಕಚೇರಿ ಹಾಗೂ ವಿರಶೈವ ಸಮುದಾಯದ ವತಿಯಿಂದ ಹಮ್ಮಿಕೊಂಡಿದ ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ  ಜಗಜ್ಯೋತಿ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ‌.

ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಎನ್ ರಘುಮೂರ್ತಿ ಬಸವೇಶ್ವರರು 12ನೇ ಶತಮಾನದಲ್ಲಿ ಸಮಾನತೆ, ಸ್ತ್ರೀಯರಿಯರಿಗೆ ಸ್ವಾತಂತ್ರ ಮತ್ತು ಕಂದಾಚಾರದ ವಿರುದ್ಧ ಹೋರಾಡಿ ಸಮಾಜದ ಎಲ್ಲ ವರ್ಗದವರ ಶ್ರೇಯಸ್ಸಿಗೆ ಅನುಭವ ಮಂಟಪವನ್ನು ಸ್ಥಾಪಿಸಿದರು.

ಈ ಮುಖಾಂತರ ಪ್ರತಿಯೊಂದು ವರ್ಗಕ್ಕೂ ನ್ಯಾಯ ನೀಡಿ ಎಲ್ಲ ವರ್ಗದವರನ್ನು ಶರಣರ ನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂತಹ ದಾರ್ಶನಿಕರ ಆದರ್ಶಗಳು ಮತ್ತು ವಚನಗಳನ್ನು ಪರಿ ಪಾಲಿಸುವುದರ ಮುಖಾಂತರ ಸಮಾಜದಲ್ಲಿ ಸಮಾನತೆ ಮತ್ತು ಶಾಂತಿಯನ್ನು ಸ್ಥಾಪಿಸಲು ಸಮಾಜದವರು ನಾಂದಿ ಹಾಡಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸುಮಕ್ಕ ಅಂಜನಪ್ಪ, ಉಪ ಅಧ್ಯಕ್ಷರಾದ ಮಂಜುಳಾ ಆರ್ ಪ್ರಸನ್ನ ಕುಮಾರ್, ಹಾಗೂ ವೀರಶೈವ ಮಹಾಸಭಾದ ಅಧ್ಯಕ್ಷರಾದ ಕೆಸಿ ನಾಗರಾಜ್,  ನಗರಸಭೆ ಸದಸ್ಯರು ತಾಲೂಕು ಮಟ್ಟದ ಅಧಿಕಾರಿಗಳು, ಸಂಗೀತ್ ಶಿಕ್ಷಕ ಕೆ ಓ ಶಿವಣ್ಣ ತುಮಕೂರ್ಲಹಳ್ಳಿ,  ಇವರಿಂದ   ಬಸವಣ್ಣನವರನ್ನು ಕುರಿತು  ಹಲವು ವಚನಗೀತೆಗಳನ ಗಾಯನ ಮಾಡಿದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಪುರೋಹಿತಶಾಹಿ ವ್ಯವಸ್ಥೆ ತೊಲಗಿಸಿ ಶೋಷಿತರಿಗೆ ನ್ಯಾಯ ಒದಗಿಸಿಕೊಟ್ಟವರು ಬಸವಣ್ಣ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ಡಾ. ಪುನೀತ್ ರಾಜಕುಮಾರ್ ಗೆ ಮರಣೋತ್ತರವಾಗಿ ಬಸವಶ್ರೀ ಪ್ರಶಸ್ತಿ ಪ್ರದಾನ : ಪ್ರಶಸ್ತಿ ಸ್ವೀಕರಿಸಿದ ಅಶ್ವಿನಿ ಪುನೀತ್ ರಾಜಕುಮಾರ್