ಸುದ್ದಿಒನ್, ಹಿರಿಯೂರು, ಜುಲೈ. 31 : ಬಾಲ್ಯ ವಿವಾಹ ಪದ್ಧತಿಯು ನಿರ್ಮೂಲನೆಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಬುರುಜಿನರೊಪ್ಪ ಗ್ರಾಪಂ ಅಧ್ಯಕ್ಷೆ ಕವಿತಾ ತಿಳಿಸಿದರು.
ತಾಲ್ಲೂಕಿನ ಬುರುಜಿನರೊಪ್ಪ ಗ್ರಾಮದ ಶ್ರೀ ಶಾರದಾ ದೇವಿ ಪ್ರೌಢಶಾಲೆ ಆವರಣದಲ್ಲಿ ನಡೆದ ಬಾಲ್ಯವಿವಾಹ ನಿಷೇಧ ಹಾಗೂ ಪೋಕ್ಸೋ ಪ್ರಕರಣ ಜಾಗೃತಿ ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಬಾಲ್ಯವಿವಾಹ ನಿಷೇಧ ಮಾಡುವ ಶಕ್ತಿ ಶಿಕ್ಷಣ ಪಡೆದವರ ಕೈಯಲ್ಲಿದೆ. ಆದರೆ ಶಿಕ್ಷಣಪಡೆದವರೇ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡುವುದು ದುರಂತ ಎಂದರು.
ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಶಾಂತಕುಮಾರಿ ಮಾತನಾಡಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದರು ಬಾಲ್ಯ ವಿವಾಹ ಏನು ಸಂಪೂರ್ಣವಾಗಿ ನಿಲ್ಲದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಮಹಿಳೆಯರಿಗೆ 18 ವರ್ಷ ಹಾಗೂ ಪುರುಷರಿಗೆ 21 ವರ್ಷ ತುಂಬುವ ಮುನ್ನವೇ ನಡೆಯುವ ವಿವಾಹಕ್ಕೆ ಕಾನೂನಿನಲ್ಲಿ ಯಾವುದೇ ಮಾನ್ಯತೆ ಇಲ್ಲ. ಕಾನೂನಿಗೆ ವಿರುದ್ಧವಾಗಿ ಮದುವೆ ಮಾಡಿಸಿದರೆ ಭವಿಷ್ಯದಲ್ಲಿ ಪತಿ-ಪತ್ನಿ ಮಾತ್ರವಲ್ಲದೆ ಇಬ್ಬರ ಪೋಷಕರು ತೊಂದರೆಗಳಿಗೆ ಒಳಗಾಗಬೇಕಾಗುತ್ತದೆ. ಆಗಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸುವುದು ಅಪರಾಧವಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ ತಡೆಯುವ ನಿಟ್ಟಿನಲ್ಲಿ ಕಠಿಣ ಪಕ್ಷ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು ಆದರೂ ಕೂಡ ಅಲ್ಲಲ್ಲಿ ಮಕ್ಕಳ ಮೇಲೆ ದೌರ್ಜನ ಪ್ರಕರಣಗಳು ವರದಿಯಾಗುತ್ತಿವೆ. ಬಾಲ್ಯವಿವಾಹ ಹಾಗೂ ದೌರ್ಜನ್ಯ ಪ್ರಕರಣಗಳು ಕಂಡು ಬಂದಲ್ಲಿ 112 ನಂಬರ್ ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಲೋಹಿತ್, ನರಸಮ್ಮ, ನಾಗರಾಜ್, ಕವಿತಾ, ಸಿಂಧು, ಅನಿತಾ, ಕೊಲ್ಲಮ್ಮ, ಆಶಾ, ದಯಾನಂದ್, ಬಾಲರಾಜ್, ಪಾರ್ವತಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.


